ಅಬ್ಬಕ್ಕಳ ಕರ್ಮಭೂಮಿ ಉಳ್ಳಾಲದಲ್ಲಿ ಅಬ್ಬಕ್ಕ ರಥಯಾತ್ರೆ ನಾಳೆ ಸಂಪನ್ನ

ಮಂಗಳೂರು: ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತದವತಿಯಿಂದ ನಡೆಯುತ್ತಿರುವ ರಾಣಿ ಅಬಕ್ಕೆ ರಥಯಾತ್ರೆಯ ಸಮಾರೋಪ ಸಮಾರಂಭ ಹಾಗೂ ಬೃಹತ್ ಶೋಭಯಾತ್ರೆ ಮಂಗಳೂರಿನಲ್ಲಿ ನಾಳೆ ನಡೆಯಲಿದೆ ಎಂದು ಎ ಬಿ ವಿ ಪಿ ಜಿಲ್ಲಾ ಸಂಚಾಲಕ ಸುವಿತ್ ಶೆಟ್ಟಿ ತಿಳಿಸಿದರು .

ಅವರು ಪತ್ರಿಕಾಭನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ವೀರ ರಾಣಿ ಅಬ್ಬಕ್ಕಳ 500ನೇ ಜನ್ಮ ಜಯಂತಿಯ ಪ್ರಯುಕ್ತ ಅಬ್ಬಕ್ಕ ರಥಯಾತ್ರೆಯು ಸೆಪ್ಟೆಂಬರ್ 6 ರಿಂದ ಮೊದಲ್ಗೊಂಡು ರಾಜ್ಯಾದ್ಯಂತ ಬಹಳ ಯಶಸ್ವಿ ಯಾಗಿ ಸಂಚರಿಸುತ್ತಾ ಇದೆ . ಈ ರಥಯಾತ್ರೆಯು ನಾಳೆ ಮಂಗಳೂರನ್ನು ತಲುಪಲಿದೆ. ಇಂದು ರಥ(೧) ಬೆಳಿಗ್ಗೆ 10:00 ಗಂಟೆಗೆ ಉಜಿರೆಯ ಎಸ್ ಡಿ ಎಂ ಕಾಲೇಜು ಮುಂಭಾಗಕ್ಕೆ ಆಗಮಿಸಲಿದೆ , ಮಧ್ಯಾಹ್ನ 02:00 ಗಂಟೆಗೆ ಪುತ್ತೂರು ವಿವೇಕಾನಂದ ಕಾಲೇಜಿಗೆ , ಸಂಜೆ 06:00 ಗಂಟೆಗೆ ಕಲ್ಲಡ್ಕ ಮತ್ತು ರಥ ( ೨) ಸಂಜೆ 06:00 ಗಂಟೆಗೆ ಸುಳ್ಯ ತಲುಪಲಿದೆ .

ನಾಳೆ ಬೆಳಗ್ಗೆ 9.30ಕ್ಕೆ ಸರಿಯಾಗಿ ರಥ ೧ ಮತ್ತು ೨ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕ್ರೀಡಾಂಗಣದಿಂದ,ಜ್ಯೋತಿ ಸರ್ಕಲ್ ಮಾರ್ಗವಾಗಿ ಹಂಪನಕಟ್ಟೆಯ ವರೆಗೆ ಬೃಹತ್ ಶೋಭಾಯಾತ್ರೆಯ ಜೊತೆಯಾಗಿ ಸಾಗಲಿದೆ , ಸುಮಾರು 3000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ, ಅನಂತರ 11.30ಕ್ಕೆ ಸರಿಯಾಗಿ ಪುರಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆಯ 5.30ರ ಹೊತ್ತಿಗೆ ರಥ ಅಬ್ಬಕ್ಕಳ ಕರ್ಮಭೂಮಿ ಉಳ್ಳಾಲ ತಲುಪಿ ನಂತರ ಮಾಡೂರು ಅಯ್ಯಪ್ಪ ಮಂದಿರದಿಂದ ಬೀರಿ ಜಂಕ್ಷನ್ ಗಣೇಶ ಮಂದಿರದ ಬಳಿ ಸಾರ್ವಜನಿಕ ಸಭೆ ಹಾಗೂ ರಥ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ ಎಂದರು .

ಸುದ್ದಿಗೋಷ್ಠಿಯಲ್ಲಿ ಎ ಬಿ ವಿ ಪಿ ನಗರ ಕಾರ್ಯದರ್ಶಿ ಮೊನಿಶ್ ತುಮಿನಾಡು , ಸದಸ್ಯರಾದ ಶ್ರೀ ಲಕ್ಷ್ಮಿ ಶೆಟ್ಟಿ , ಶ್ರೀಜಿತ್ ರೈ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!