ದಕ್ಷಿಣ ಕನ್ನಡ ಜಿಲ್ಲೆಯ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತನಿಖೆಗೆ ಕೇಂದ್ರ ಸರಕಾರ ತನಿಖಾ ತಂಡವನ್ನು ರಚಿಸಲಿ ; ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ.

ಕರಾವಳಿ ಭಾಗದಲ್ಲಿ ನಿರ್ಮಾಣವಾದ ರಾಷ್ಟ್ರೀಯ ಹೆದ್ದಾರಿಯು ಅವೈಜ್ಞಾನ ಮತ್ತು ಕಳಪೆ ಕಾಮಗಾರಿಯ ಬಗ್ಗೆ ಸೂಕ್ತವಾದ ತನಿಖೆ ನಡೆಯಬೇಕೆಂದು ಕೇಂದ್ರ ಸರಕಾರಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ಆಗ್ರಹಿಸಿದರು .

ಅವರು ಮನಪಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಕರಾವಳಿಯ ರಸ್ತೆಗಳು ಅವ್ಯವಸ್ಥೆಗಳ ಆಗರವಾಗಿದೆ . ಮಾರ್ಗಗಳು ಅವೈಜ್ಞಾನಿಕತೆ ಮತ್ತು ಕಳಪೆ ಕಾಮಗಾರಿಯಿಂದ ಕೂಡಿದೆ . ಈ ಬಗ್ಗೆ ತನಿಖೆಗೆ ಆಗ್ರಹಿಸಿ ಕೇಂದ್ರದ ಹೆದ್ದಾರಿ ಇಲಾಖೆಗೆ ಪತ್ರವನ್ನು ಬರೆಯಲಾಗಿದೆ . ಕರಾವಳಿ ಭಾಗದ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತನಿಖೆಗೆ ಕೇಂದ್ರ ಸರಕಾರ ತನಿಖಾ ತಂಡವನ್ನು ರಚಿಸಲಿ .

ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು , ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗಾರರು ಕೇರಳದ ರಾಷ್ಟ್ರೀಯ ಹೆದ್ದಾರಿಯನ್ನು ಒಮ್ಮೆ ನೋಡಬೇಕು . ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಹಲವು ಅನುಮಾನಗಳಿದ್ದು ಇದರ ಸ್ಪಷ್ಟನೆಗಾಗಿ ಕೂಡಲೇ ತನಿಖಾ ತಂಡವನ್ನು ಕೇಂದ್ರ ಸರಕಾರ ರಚಿಸಬೇಕೆಂದು ಅವರು ಆಗ್ರಹಿಸಿದರು .

ಈ ಸಂದರ್ಭದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರೆಸ್ , ಕ್ಯಾಥೋಲಿಕ್ ಸಭಾ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಡಿ’ಸೋಜಾ , ಸತೀಶ್ ಬೆಂಗ್ರೆ , ಭಾಸ್ಕರ್ , ಚಂದ್ರಾಸ್ ಮುಂತಾದವರು ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!