ಮಂಜೇಶ್ವರ ಗ್ರಾಮ ಪಂಚಾಯತ್ ಮತ್ತು ಕುಟುಂಬಶ್ರೀ ಸಿಡಿಎಸ್ ಸಂಯುಕ್ತವಾಗಿ ವಿಜ್ಞಾನಕೇರಳ ಯೋಜನೆಯ ಭಾಗವಾಗಿ ಉದ್ಯೋಗ ಮೇಳ ಮಂಜೇಶ್ವರದಲ್ಲಿ ಆಯೋಜಿಸಲಾಯಿತು.ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೊಹಮ್ಮದ್ ಸಿದ್ಧಿಕ್ ಅವರು ಉದ್ಘಾಟನೆ ನೆರವೇರಿಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಮುಂತಾಜ್ ಸಮೀರ, ರಾಜೇಶ್ ಅವರು ಶುಭಾಶಯ ಸಂದೇಶಗಳನ್ನು ನೀಡಿ ಮಾತನಾಡಿದರು. ಅದೇ ರೀತಿ ವಾರ್ಡ್ ಸದಸ್ಯರಾದ ಲಕ್ಷ್ಮಣನ್, ವಿನಯ ಭಾಸ್ಕರ್, ಆದರ್ಶ್, ಮುಸ್ತಫಾ ಅವರು ಸಹ ಪಾಲ್ಗೊಂಡರು.ಸುಮಾರು 200 ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಿದರು. 20 ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡ ಈ ಉದ್ಯೋಗ ಮೇಳದಲ್ಲಿ ಕಮ್ಯುನಿಟಿ ಮೆಂಟರ್ ಫಾತಿಮತ್ ಝೌರಾ ಅವರು ಕಂಪನಿಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸುಮಾರು 60 ಜನರನ್ನು ಕೆಲಸಕ್ಕೆ ಆಯ್ಕೆ ಮಾಡಲಾಗಿದ್ದು, 40 ಜನರ ಶಾರ್ಟ್ ಲಿಸ್ಟ್ ಕೂಡಾ ತಯಾರಿಸಲಾಯಿತು.ಕಾರ್ಯಕ್ರಮದಲ್ಲಿ ಸಿಡಿಎಸ್ ಸದಸ್ಯೆ ಕವಿತಾ ಧನ್ಯವಾದ ಹೇಳಿದರು. ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಲು ಸಿಡಿಎಸ್ ಸದಸ್ಯರು, ಸಹಾಯಕ ಸಿಬ್ಬಂದಿಗಳು ಉತ್ತಮ ಬೆಂಬಲ ಒದಗಿಸಿದರು.