ಮಂಜೇಶ್ವರ: ಕೆಲಸದಿಂದ ತೆಗೆದುಹಾಕಿದ ಸಿಟ್ಟಿನಿಂದ ಮಾಜಿ ಮಾಲಿಕರ ಹೋಟೆಲ್ಗೆ ನುಗ್ಗಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಮಂಗಲ್ಪಾಡಿ ಬೇಕೂರಿನ ಅಶ್ರಫ್ ಅಲಿ (40) ಬಂಧಿತ ಆರೋಪಿ. ಬಂದ್ಯೋಡಿನ ‘ಇರಾನಿ ಅಬ್ಬಾಸಿ ಕಬಾಬ್’ ಹೋಟೆಲ್ನಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಅಶ್ರಫ್, ಕೆಲಸದಿಂದ ತೆಗೆದುಹಾಕಿದ ದ್ವೇಷಕ್ಕೆ ಜೂನ್ 13ರಂದು ರಾತ್ರಿ ಹೋಟೆಲ್ನ ಬೀಗ ಮುರಿದು ನುಗ್ಗಿದ್ದನು.
ಘಟನೆಯಲ್ಲಿ 53,000 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿತ್ತು. ಕುಂಬಳೆ ಎಸ್ಐ ಗಣೇಶ್ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಹಚ್ಚಿ ಕಂಬಿ ಹಿಂದೆ ತಳ್ಳಿದೆ.