ಕಮ್ಯುನಿಸ್ಟ್ ಚಿನ್ನ ಕಳ್ಳರ ಸಂತೆ : ಬಿಜೆಪಿ

ಚಿನ್ನ ಕಳ್ಳ ಸಾಗಾಟ ಕಮ್ಯುನಿಸ್ಟ್ ಪಕ್ಷದ ಕುಲಕಸುಬು, ಆಡಳಿತ ಬಲ ಉಪಯೋಗಿಸಿ ಶಬರಿಮಲೆ ಸನ್ನಿದಿಯಲ್ಲಿಯೇ ಚಿನ್ನ ಕಳ್ಳ ಸಾಗಾಟ ಕ್ಕೆ ಸಾಥ್ ನೀಡಿರುವಾಗ ಪಿನರಾಯಿ ಸರಕಾರ ಹಿಂದೂಗಳ ಧಾರ್ಮಿಕ ಭಾವನೆ, ನಂಬಿಕೆಗೆ ಮಾಡಿರುವ ಅವಮಾನ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ಹೇಳಿದರು. ಬಿಜೆಪಿ ಮಂಜೇಶ್ವರ ಮಂಡಲ ಸಭೆ ವರ್ಕಾಡಿ ಕಚೇರಿ ಯಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಬಾರಿಯ ಸ್ಥಳೀಯಡಳಿತ ಚುನಾವಣೆ ಧರ್ಮ ಮತ್ತು ಅಧರ್ಮದ ಹೊರಟ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದ ಕಮ್ಯುನಿಸ್ಟ್ ಹಾಗೂ ಮತೀಯ ತೀವ್ರವಾದ ಬೆಳೆಸುವ ಮುಸ್ಲಿಂ ಲೀಗ್ ನ ಅಂತ್ಯದ ಹೋರಾಟವಾಗಲಿದೆ ಎಂದು ಹೇಳಿದರು.


ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ sc ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ ಕೆ ಕಯ್ಯರ್, ಮಂಜೇಶ್ವರ ಪ್ರಭಾರಿ ಮಾಧು ವಲಪಿಲ್ಲ, ಮುಖಂಡರಾದ ಸದಾಶಿವ ಚೇರಲ್, ಮಂಜುನಾಥ್ ಶೆಟ್ಟಿ, ಆಶಾಲತಾ ಬಿ ಎಂ, ಸುಬ್ರಮಣ್ಯ ಭಟ್, ಭಾಸ್ಕರ್ ಪೊಯ್ಯೇ, ಸತ್ಯ ಶಂಕರ್, ಬೆಜ್ಜ ಚಂದ್ರಹಾಸ ಹಾಗೂ ವಿವಿಧ ಮೋರ್ಚಾ ನೇತಾರರು ಉಪಸ್ಥಿತರಿದ್ದರು.ಯತೀರಾಜ್ ಶೆಟ್ಟಿ ಸ್ವಾಗತಿಸಿ, ತುಳಸಿ ಕುಮಾರಿ ವಂದಿಸಿದರು.


ಇದೆ ಸಂದರ್ಭ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ವಿವಿಧ ಮೋರ್ಚಾ ಗಳ ಮಂಡಲ ಅಧ್ಯಕ್ಷ ರನ್ನು ನೇಮಕ ಮಾಡಿ ಘೋಷಣೆ ಮಾಡಿದರು.Sc ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ರಾಗಿ ರಾಮ ಎಧಾರ್ ಪೈವಳಿಕೆ, ಕರ್ಷಕ ಮೋರ್ಚಾ ಅಧ್ಯಕ್ಷ ರಾಗಿ ವಿವೇಕಾನಂದ ವರ್ಕಾಡಿ, ಯುವ ಮೋರ್ಚಾ ಅಧ್ಯಕ್ಷ ರಾಗಿ ಉದಯ ಪೂಜಾರಿ ಸುಳ್ಯಮೆ, ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷರಾಗಿ ಸದಾಶಿವ ಬೇಕರಿ ವರ್ಕಾಡಿ, ಮಂಡಲ ಕಾರ್ಯದರ್ಶಿ ಯಾಗಿ ಸಂದೀಪ್ ರೈ ನೇಮಕ ಮಾಡಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!