ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಮಂಗಲ್ಪಾಡಿ ಮಂಜೇಶ್ವರ ನೇತ್ರತ್ವ ಸಮಿತಿ ಬಾಲವೇದಿ ಸೃಜನೋತ್ಸವ ಆದಿತ್ಯವಾರ ಯುವಶಕ್ತಿ ಫ್ರೆಡ್ಸ್ ಸರ್ಕಲ್ ಲೈಬ್ರೆರಿ ಯಲ್ಲಿ ನಡೆಯಿತು. ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ಸದಸ್ಯರಾದ ದಾಸಪ್ಪ ಶೆಟ್ಟಿ ಮಾಸ್ಟರ್ ಉದ್ಘಾಟನೆ ಮಾಡಿ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಮಂಗಲ್ಪಾಡಿ ನೇತೃತ್ವ ಸಮಿತಿ ಕನ್ವೆನರ್ ರವೀಂದ್ರ ಶೆಟ್ಟಿ ಬೋಳ್ಳಾರು ವಹಿಸಿದರು. ಮುಖ್ಯ ಅತಿಥಿ ಯಾದ ಭಾಗ್ಯ ಕರುಣಾಕರ ಬರ್ಲಾಯಾ ಸೃಜನೋತ್ಸವದ ಬಗ್ಗೆ ಮಾಹಿತಿ ನೀಡಿದರು .ಈ ಕಾರ್ಯಕ್ರಮದಲ್ಲಿ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸದಸ್ಯೆ ವನಿತಾ ಆರ್ ಶೆಟ್ಟಿ ಉಪಸ್ತಿತರಿದ್ದರು.
ಈ ಸಂದರ್ಭದಲ್ಲಿ ಪಂಚಾಯತ್ ಮಟ್ಟ ದಲ್ಲಿ ಲೈಬ್ರೆರಿಯ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರ ತೀರ್ಪುಗಾರರಾಗಿ ಸುಜಾತ.ಡಿ. ಬಂಗೇರ ಹಾಗೂ ಉಪನ್ಯಾಸಕರಾದ ಚೆನ್ನಯ್ಯ ಪೂಜಾರಿ. ವೀಣಾ ಡಿ ಸಾಲಿಯಾನ್ ನೇಹಾ ಬೇಕೂರು ಭಾಗವಹಿಸಿದರು.ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ ಸ್ವಾಗತಿಸಿ. ಯುವ ಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ ಕಾರ್ಯಕಾರಿ ಸದಸ್ಯ ರಾದ ಉಮೇಶ್ ಶೆಟ್ಟಿ ಬೋಳ್ಳಾರು ವಂದಿಸಿದರು.