ಜೋಡು ದಂಟೆ ಶ್ರೀ ಕೊರಗಜ್ಜ ದೈವದ ಭಕ್ತಿ ಹಾಡು ಚಿತ್ರೀಕರಣ ಮುಹೂರ್ತ.

ವಿಟ್ಲ:ಸಿಂಚನ ಕ್ರಿಯೇಷನ್ಸ್ ಅರ್ಪಿಸುವ ರೋಹಿತ್ ನೋಣಯ್ಯ ಪೂಜಾರಿ, ಇರಂದೂರು ಪಡೀಲ್. ನಿರ್ಮಾಣ ದ “ಜೋಡು ದಂಟೆ”ಕೊರಗಜ್ಜ ನ ಭಕ್ತಿ ಹಾಡು ಟೈಟಲ್ ಬಿಡುಗಡೆ, ಹಾಗೂ ಚಿತ್ರೀಕರಣ ದ ಮುಹೂರ್ತ ಸುರುಳಿ ಮೂಲೆ ಕೊರಗಜ್ಜ ದೈವ ಸ್ಥಾನದಲ್ಲಿ ನಡೆಯಿತು..

ವೇದಿಕೆ ಯಲ್ಲಿ ಕೃಷ್ಣ ಯ್ಯ ಕೆ. ವಿಟ್ಲ ಅರಮನೆ, ಮಾಮೇಶ್ವರ ದೇವಸ್ಥಾನ ದ ವೀರಪ್ಪ ಗೌಡ, ಹಿಂದೂ ಜಾಗರಣೆ ವೇದಿಕೆ ಮಂಗಳ ಪದವು ಘಟಕದ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಶೆಟ್ಟಿ,ಕೊರಗಜ್ಜ ಕ್ಷೇತ್ರ ಸುರುಳಿ ಮೂಲೆ ಇದರ ಗೌರವ ಅಧ್ಯಕ್ಷರು ಸಂಜೀವ, ಚುಕ್ಕಿ ಚಿತ್ರ ಕಲಾವಿದರಾದ ಸೂರ್ಯ ಆಚಾರ್ ವಿಟ್ಲ, ರಾಜೇಶ್ ಆರ್. ಕೆ ಆರ್ಟ್ಸ್ ವಿಟ್ಲ, ಶಿವರಾಮ್ ಅಳಿಕೆ, ಕೊರಗಜ್ಜ ಕ್ಷೇತ್ರದ ಸೋಮಪ್ಪ ಸುರುಳಿಮೂಲೆ, ವಿಠಲ ಪದವಿ ಪೂರ್ವ ಕಾಲೇಜು ಇದರ ಅಧ್ಯಾಪಕರಾದ ಅಣ್ಣಪ್ಪ ಸಾಸ್ತಾನ, ಲಿಂಗಪ್ಪ ಸುರುಳಿ ಮೂಲೆ, ಉದ್ಘಾಟನೆ ಮಾಡಿ ಶುಭ ಹಾರೈಸಿದರು. ನಿರ್ದೇಶಕ ಪ್ರವೀಣ್ ಜಯ ವಿಟ್ಲ, ಸಹ ನಿರ್ದೇಶಕ ಚೇತನ್ ವಿಟ್ಲ, ಆಚಲ್ ವಿಟ್ಲ ಮತ್ತು ಶಶಾಂಕ್.ಪೂವಪ್ಪ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!