ವಿವಿಧ ನಿಗಮ, ಪ್ರಾಧಿಕಾರ ಮತ್ತು ಅಕಾಡೆಮಿ ಅಧ್ಯಕ್ಷರೊಂದಿಗೆ ಶಾಸಕ ಮಂಜುನಾಥ ಭಂಡಾರಿ ಸಭೆ.ಪಕ್ಷದ ಬಲವರ್ಧನೆಗೆ ಸೂಚನೆ.

ಮಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಮಂಗಳವಾರ ವಿವಿಧ ನಿಗಮಗಳು, ಪ್ರಾಧಿಕಾರಗಳು ಮತ್ತು ಅಕಾಡೆಮಿಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿದರು.ಈ ಸಂದರ್ಭದಲ್ಲಿ ತಮ್ಮ ತಮ್ಮ ನಿಗಮ, ಪ್ರಾಧಿಕಾರ ಹಾಗೂ ಅಕಾಡೆಮಿಗಳಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳಿಗೆ ಸರ್ಕಾರದಿಂದ ಸಿಗುವ ಪರಿಹಾರವನ್ನು ಒದಗಿಸಿಕೊಡಲು ನಿಮ್ಮೊಂದಿಗೆ ನಾನಿದ್ದೇನೆಂಬ ಭರವಸೆ ನೀಡಿದರು.
ನಿಗಮದ ಅಧ್ಯಕ್ಷರುಗಳು ಸರ್ಕಾರದ ಅಧಿಕಾರಿಗಳು ಹಾಗೂ ಜನರೊಂದಿಗೆ ಸ್ಪಂದನಾಶೀಲವಾಗಿ ಸಮನ್ವಯತೆಯಿಂದ ವರ್ತಿಸಬೇಕೆಂದು ಈ ವೇಳೆ ಶಾಸಕರು ಸಲಹೆ ನೀಡಿದರು.


ಪಕ್ಷವೂ ತಮ್ಮನ್ನು ಗುರುತಿಸಿ ನೀಡಿರುವ ಸ್ಥಾನಮಾನಗಳಿಗೆ ಪ್ರತಿಯಾಗಿ ಪಕ್ಷದ ಸಂಘಟನೆಯ ಬಲವರ್ಧನೆಗಾಗಿ ಪ್ರತಿಯೊಬ್ಬ ಅಧ್ಯಕ್ಷರು ಹೆಚ್ಚು ಸಮಯ ಮೀಸಲಿಡಬೇಕೆಂದು ಸೂಚಿಸಿದರು.ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಸೇರಿದಂತೆ ವಿವಿಧ ನಿಗಮ ಪ್ರಾಧಿಕಾರ ಹಾಗೂ ಅಕಾಡೆಮಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!