ಅಕ್ಟೋಬರ್ 13 14 ರಂದು ನಡೆಯುವ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳ ಉದ್ಘಾಟನಾ ಸಮಾರಂಭವು ಕೊಡ್ಲಮೊಗರಿನ ಶ್ರೀ ವಾಣಿ ವಿಜಯ ಹೖಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.ಶ್ರೀ ವಾಣಿ ವಿಜಯ ಹೖಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ವಿಜಯಕುಮಾರ್ ಧ್ವಜಾರೋಹಣಗೈದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಯುತ ಜಾರ್ಜ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ವೀಪ ಪ್ರಜ್ವಲಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು ಮಂಜೇಶ್ವರ ಶಾಸಕರಾದ ಶ್ರೀಯುತ ಎ ಕೆ ಎಂ ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ನಾರಾಯಣ ನಾಯ್ಕ, ಶ್ರೀಮತಿ ಕಮಲಾಕ್ಷಿ ಕೆ, ಮುಖ್ಯ ಅತಿಥಿಗಳಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಚೌಟ, ಶ್ರೀಮತಿ ವಿದ್ಯಾ ಬಾರಿಕೆ, ವರ್ಕಾಡಿ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮಮತಾ ಶೆಟ್ಟಿ, ವರ್ಕಾಡಿ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ವಿ ಸಾಮಾನಿ, ಸ್ಥಳೀಯ ವಾರ್ಡ್ ಸದಸ್ಯೆ ಶ್ರೀಮತಿ ಆಶಾಲತಾ, ಶಾಲಾ ಪಿಟಿಎ ಅಧ್ಯಕ್ಷರಾದ ಶ್ರೀ ಅಬ್ದುಲ್ ಮಜಿದ್ ಮುಖ್ಯೋಪಾಧ್ಯಾಯರ ವೇದಿಕೆಯ ಕಾರ್ಯದರ್ಶಿ ಶ್ರೀ ಶ್ಯಾಮ್ ಭಟ್ ಶ್ರೀ ವಾಣಿವಿಜಯ ಎ ಯು ಪಿ ಶಾಲೆಯ ಪಿಟಿಎ ಅಧ್ಯಕ್ಷರಾದ ಮೊಹಮ್ಮದ್ ರಫೀಕ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೃಷ್ಣವೇಣಿ ಬಿ, ಶ್ರೀ ವಾಣಿವಿಜಯ ಎ ಯು ಪಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸುಬ್ರಮಣ್ಯ ಭಟ್, ಪಿ ಇ ಸಿ ಕಾರ್ಯದರ್ಶಿ ಶ್ರೀಮತಿ ಪ್ರತಿಭಾ ಟೀಚರ್, ವಿವಿಧ ಕ್ಲಬ್ ಗಳ ಕಾರ್ಯದರ್ಶಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀ ವಾಣಿ ವಿಜಯ ಹೖಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ವಿಜಯಕುಮಾರ್ ಸ್ವಾಗತಿಸಿ ಶಿಕ್ಷಕಿ ಆಶಾ ದಿಲೀಪ್ ರೈ ಧನ್ಯವಾದಗಳನ್ನರ್ಪಿಸಿದರು. ಶ್ರೀ ರಾಕೇಶ್ ಆರ್ ಶೆಟ್ಟಿ ಮತ್ತು ಸಂಧ್ಯಾ ಟೀಚರ್ ಅವರ ನಿರೂಪಣೆಯಲ್ಲಿ ಸಭೆ ನಡೆಯಿತು