ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪ್ರಪ್ರಥಮ ಬಾರಿಗೆ ಸಂಭ್ರಮಿಸಿದ ಸ್ನೇಹ ಸಂಭ್ರಮ

1963 ರಲ್ಲಿ ಸ್ಥಾಪನೆ ಆದ ಶ್ರೀ ಸುಬ್ರಮಣ್ಯಶ್ವರ ಪ್ರೌಢಶಾಲೆಯಲ್ಲಿ ಪ್ರಥಮ ಬಾರಿಗೆ 2005ನೇ ಸಾಲಿನ ವಿದ್ಯಾರ್ಥಿಗಳು 20 ವರ್ಷಗಳ ನಂತರ ಒಂದುಗೂಡಿ ಆಯೋಜಿಸಿದ ಸ್ನೇಹ ಸಂಭ್ರಮ ಹಾಗೂ ಶ್ರೀ ಜ್ಞಾನದೀಪ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವೂ ಪ್ರೌಢಶಾಲ ವಿಭಾಗದ ಮುಖ್ಯ ಗುರುಗಳಾದ ಶ್ರೀಮತಿ ನಂದಾ ಹರೀಶ್ ಇವರ ಅದ್ಯಕ್ಷತೆಯಲ್ಲಿ ದಿನಾಂಕ ಮೇ 11ರಂದು ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಕಾಲೇಜಿನ ಗೌರವಾನ್ವಿತ ಪ್ರಾಂಶುಪಾಲರಾದ ಶ್ರೀ ಸೋಮಶೇಖರ್ ನಾಯಕ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಈ ಸಂಭ್ರಮದ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ವೇದಿಕೆಯಲ್ಲಿ ಗುರುಗಳಾದ ಕೃಷ್ಣ ಭಟ್, ಸ್ಮಿತಾ, ರಾಧಾಕೃಷ್ಣ ನಿವೃತ್ತ ಶಿಕ್ಷಕರಾದ ಯಶವಂತ ರೈ ,ಮೋಹನ್, ರಘು ಬಿಜೂರು, ನಾರಾಯಣ ಹಾಗೂ ಸುಪ್ರಿಯ ನಿವೃತ್ತ ಬೋಧಕಿ ತರ ಸಿಬ್ಬಂದಿಗಳಾದ ದುಗ್ಗಪ್ಪ ರವಿರಾಮ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಎನ್ ಎಸ್, ಕಾರ್ಯಕ್ರಮದ ಸಂಘಟಕರಾದ ಮುರಳಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ 2005 ನೇ ವರ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದ ಗುರುಗಳಿಗೆ ಗುರುವಂದನೆ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಗೌರವಿಸಲಾಯಿತು.

2025 26ನೇ ಸಾಲಿನ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 17 ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅತ್ಯಧಿಕ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಶಾಲೆಗೆ ಕೃತಜ್ಞತಾ ಕಾಣಿಕೆಯಾಗಿ ಎರಡು ಜೊತೆ ಮರದ ಮೇಜು ಹಾಗೂ ಕುರ್ಚಿಗಳನ್ನು ನೀಡಲಾಯಿತು. ತದನಂತರ ಗಣಿತ ,ಆಂಗ್ಲ ಹಾಗೂ ವಿಜ್ಞಾನ ತರಗತಿಗಳನ್ನು ಗುರುಗಳಿಂದ ನಡೆಸಿ 20 ವರ್ಷಗಳ ಹಿಂದಿನ ಗತವೈಭವವನ್ನು ನೆನಪಿಸಲಾಯಿತು.

ಬಳಿಕ 2005 ನೇ ಬ್ಯಾಚಿನ ವಿದ್ಯಾರ್ಥಿಗಳು ಹಾಗೂ ಅವರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.ಈ ವಿದ್ಯಾ ಸಂಸ್ಥೆಯ 45 ನೇ (2005) ಬ್ಯಾಚ್ ನಾ ವಿದ್ಯಾರ್ಥಿಗಳು ಆಯೋಜಿಸಿದ ಸ್ನೇಹ ಸಂಭ್ರಮವು ಸಂಸ್ಥೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಯಾಗಿದ್ದು 20 ವರ್ಷಗಳ ನಂತರವೂ ಗುರುಗಳ ಹಾಗೂ ಶಿಷ್ಯಂದಿರ ಭಾವನಾತ್ಮಕ ಸಂಬಂಧವು ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು

SHARE
Loading spinner

Leave a Reply

Your email address will not be published. Required fields are marked *

error: Content is protected !!