ಮಂಗಳೂರು: ನಮ್ಮ ದೇಶದ , ಪ್ರಪಂಚದ ನಂಬರ್ ಒನ್ ಸಂಘಟನೆಯೆಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ . ದೇಶ ಸೇವೆಯಲ್ಲಿ ತೊಡಗಿರುವ ಸಂಘಟನೆಯನ್ನು ಕೇವಲವಾಗಿ ಮಾತನಾಡಿದ ಪ್ರಿಯಾಂಕ ಖರ್ಗೆ ಕೂಡಲೇ ರಾಜಿನಾಮೆ ನೀಡಬೇಕು , ಆರ್ ಎಸ್ ಎಸ್ ಬಗ್ಗೆ ಪುಂಕಾನು ಪುಂಕವಾಗಿ ತುಟಿ ಬಿಚ್ಚುವುದನ್ನು ಕೂಡಲೇ ನಿಲ್ಲಿಸಬೇಕು , ಕೂಡುವುದಾದರೆ ಎಸ್ ಡಿ ಪಿ ಐ ಸಂಘಟನೆಯನ್ನು ಇಲ್ಲಿ ಬ್ಯಾನ್ ಮಾಡಿ ಎಂದು ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರು , ಬಿಜೆಪಿ ರಾಜ್ಯ ನಾಯಕರಾದ ರವಿ ಕುಮಾರ್ ಗುಡುಗಿದರು .
ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಆರ್ ಎಸ್ ಎಸ್ ಈ ದೇಶಕ್ಕೆ ಇಬ್ಬರು ಪ್ರಧಾನಿಗಳನ್ನು ನೀಡಿದ ಸಂಘ . ಪ್ರಾಕೃತಿಕ ವಿಕೋಪ , ಕೊರೋನ ಸಮಯ , ರೈಲ್ವೇ ಅವಘಡದಂತಹ ತುರ್ತು ಸಂಧರ್ಭದಲ್ಲಿ ಸಹಾಯಕ್ಕಾಗಿ ಸಂಘ ಧಾಮಿಸುತ್ತದೆ .
ಪ್ರಿಯಾಂಕಾ ಖರ್ಗೆಗೆ ಈ ಸಂಘಟನೆಯ ಹಿರಿಮೆ ಗೊತ್ತಿಲ್ಲ . ಮಲ್ಲಿಕಾರ್ಜುನ ಖರ್ಗೆ ಅಟಲ್ ಬಿಹಾರಿ ವಾಜಪೇಯಿ ಅವರ ಸಾಧನೆಗಳನ್ನು ಹೊಗಳಿದ್ದರು , ವಾಜಪೇಯಿ ಆರ್ ಎಸ್ ಎಸ್ ಸಂಘಟನೆಯಲ್ಲಿ ಗುರುತಿಸಿಕೊಂಡವರು . ಆರ್ ಎಸ್ ಎಸ್ ದ್ಯೇಯ – ದೇಶ ಸೇವೆಯ ಕಾರ್ಯವನ್ನು ನಿಮ್ಮ ಅಪ್ಪ ಮಲ್ಲಿಕಾರ್ಜುನ ಖರ್ಗೆ ಅವರ ಬಾಯಿಯಿಂದಲೇ ತಿಳಿದುಕೊಳ್ಳಿ ಎಂದು ಹೇಳಿದರು .
ಆರ್ ಎಸ್ ಎಸ್ ಸಂಘದವರು ದಂಡ ಹಿಡಿದರೆ ಅಶಾಂತಿ ವಾತಾವರಣ ನಿರ್ಮಾಣ ಆಗುತ್ತೆ ಎಂದರೆ ಈ ಭಾಗದಲ್ಲಿ ಅಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡುವ ಭಯೋತ್ಪಾದಕ ಸಂಘಟನೆಯನ್ನು ಮಟ್ಟ ಹಾಕುವುದಿಲ್ಲ ಏಕೆ ನಿಮ್ಮ ಸರಕಾರ ? . ಕುಕ್ಕರ್ ಬಾಂಬ್ , ಗೋ ಅಕ್ರಮ ಸಾಗಾಟಗಾರರು , ಗೋ ಕಳ್ಳರ ಕೇಸ್ ಗಳನ್ನು ತೆಗೆದು ಹಾಕಿದ ಸರ್ಕಾರದ ನಿಲುವು ಸರಿಯೇ ಎಂದು ಪ್ರಶ್ನೆ ಮಾಡಿದರು .
ಸಂಘವನ್ನು ಈ ಹಿಂದೆ ನೆಹರು , ತುರ್ತು ಸಂದರ್ಭದಲ್ಲಿ ಇಂದಿರಾ ಗಾಂಧಿ ನಿಷೇಧವನ್ನು ಹೇರಿದರು ಆದರೆ ಕೆಲವೇ ದಿನಗಳಲ್ಲಿ ಹಿಂದಕ್ಕೆ ಪಡೆಯಲಾಗಿತ್ತು . ಇದು ಸಂಘದ ಶಕ್ತಿಯನ್ನು ಕಾಣಿಸುತ್ತದೆ ಎಂದರು .
ಸಂಘವು ವಿದ್ಯಾರ್ಥಿಗಳಲ್ಲಿ , ಯುವಕರಲ್ಲಿ ದೇಶ ಭಕ್ತಿಯನ್ನು ಬಿತ್ತರಿಸುತ್ತದೆ . ಯುವಕರಲ್ಲಿ ದೇಶ ಭಕ್ತಿಯನ್ನು ಬಿತ್ತರಿಸುವಾಗ ಸರಕಾರದ ಪರವಾನಿಗೆಯನ್ನು ಪಡೆಯಬೇಕಾ ? . ಆರ್ ಎಸ್ ಎಸ್ ಬಗ್ಗೆ ಸರಿಯಾಗಿ ತಿಳಿಯದೆ ಪ್ರಿಯಾಂಕಾ ಖರ್ಗೆ ದೊಣ್ಣೆ ನಾಯಕನ ತರಹದ ಮಾತನ್ನು ಬಿಜೆಪಿ ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು .
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ , ಶಾಸಕರಾದ ವೇದವ್ಯಾಸ್ ಕಾಮತ್ , ಭರತ್ ಶೆಟ್ಟಿ , ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ಸುನಿಲ್ ಆಳ್ವ , ಬಿಜೆಪಿ ಮುಖಂಡರು ಉಪಸ್ಥಿತತಿರಿದ್ದರು .