ಬೀಜಿಂಗ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದು, “ಒಪ್ಪಂದ ಮಾಡಿಕೊಳ್ಳಿ, ಇಲ್ಲದಿದ್ದರೆ ಸಂಪೂರ್ಣ ವಿನಾಶ ಎದುರಿಸಿ” ಎಂದು ಹೇಳಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ನಡೆದ ಮಾತುಕತೆ ಬಳಿಕ ಫ್ಯಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಈ ಹೇಳಿಕೆಯನ್ನು ನೀಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆ ಅವರು ಮಾತನಾಡಿದರು, ಇರಾನ್ಗೆ ಅಣ್ವಸ್ತ್ರ ಅಭಿವೃದ್ಧಿಗೆ ಅಮೆರಿಕ ಅವಕಾಶ ನೀಡುವುದಿಲ್ಲ ಸ್ಪಷ್ಟಪಡಿಸಿದರು. “ಇರಾನ್ ಅಂತ್ಯದ ಹಂತದಲ್ಲಿದೆ. ಒಪ್ಪಂದ ಮಾಡಿಕೊಳ್ಳಬಹುದು ಅಥವಾ ಸಂಪೂರ್ಣ ನಾಶವಾಗಬಹುದು” ಎಂದು ಎಚ್ಚರಿಸಿದರು.
ಚೀನಾ ಅಮೆರಿಕಾ–ಇರಾನ್ ಒಪ್ಪಂದವನ್ನು ಬೆಂಬಲಿಸಲು, ಸಹಾಯ ಮಾಡಲು ಸಿದ್ಧವಾಗಿದೆ. ಜೊತೆಗೆ ಇರಾನ್ಗೆ ಸೈನಿಕ ನೆರವು ನೀಡುವುದಿಲ್ಲ ಎಂಬ ಭರವಸೆಯನ್ನು ನೀಡಿದೆ ಎಂದು ಭರವಸೆ ನೀಡಿದರು.
ವಿಶ್ವದಲ್ಲಿ ಇರಾನ್ನ ಸುಮಾರು 90 ಶೇಕಡಾ ತೈಲವನ್ನು ಚೀನಾ ಖರೀದಿಸುತ್ತಿದೆ, ಉಭಯ ದೇಶಗಳ ನಡುವೆ ಆರ್ಥಿಕ ಮತ್ತು ಸೈನಿಕ ಸಂಬಂಧ ಗಟ್ಟಿಯಾಗಿದೆ.
ಇರಾನ್ನ ಸೈನಿಕ ಸಾಮರ್ಥ್ಯದ ಕುರಿತು ಮಾತನಾಡಿದ ಟ್ರಂಪ್, “ಅಮೆರಿಕ ಇರಾನ್ನ ಖಾರ್ಗ್ ದ್ವೀಪವನ್ನು ನಾಲ್ಕು-ಐದು ನಿಮಿಷಗಳಲ್ಲಿ ನಿಷ್ಕ್ರಿಯಗೊಳಿಸಬಹುದು. ನೌಕಾಪಡೆ ಮತ್ತು ವಾಯು ರಕ್ಷಣಾ ವ್ಯವಸ್ಥೆ ದುರ್ಬಲವಾಗಿದೆ. ಪುನರ್ನಿರ್ಮಾಣ ಮಾಡಿದರೂ ಅದನ್ನು ಒಂದೇ ದಿನದಲ್ಲಿ ಧ್ವಂಸ ಮಾಡಬಹುದು” ಎಂದು ಹೇಳಿದ್ದಾರೆ.
ಇದೇ ವೇಳೆ ಕ್ಸಿ ಜಿನ್ಪಿಂಗ್ ಅವರ “ಶಕ್ತಿಶಾಲಿ ನಾಯಕ” ಎಂದು ಹೊಗಳಿದ ಟ್ರಂಪ್, ಚೀನಾ ಪ್ರವಾಸದ ಸೈನಿಕ ಗೌರವ ಸಮಾರಂಭವನ್ನು ಪ್ರಶಂಸಿಸಿದರು.
ವ್ಯಾಪಾರ ಮತ್ತು ಆರ್ಥಿಕ ಸಹಕಾರ ಕುರಿತ ಮಾತುಕತೆಗಳು ನಡೆದಿದ್ದು, ಟೆಕ್ಸಾಸ್, ಲೂಯಿಸಿಯಾನಾ ಹಾಗೂ ಅಲಾಸ್ಕಾದಿಂದ ಚೀನಾಕ್ಕೆ ತೈಲ ರಫ್ತು ಕುರಿತು ಚರ್ಚೆಯಾಗಿತ್ತು.
ಚೀನಾ 200 ಬೋಯಿಂಗ್ ವಿಮಾನ ಖರೀದಿಗೆ ಒಪ್ಪಿದ್ದು, ಅಮೆರಿಕದ ಕೃಷಿ ಉತ್ಪನ್ನಗಳ ಖರೀದಿಯನ್ನೂ ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿದೆ ಟ್ರಂಪ್ ಹೇಳಿದ್ದಾರೆ.