ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ, ಬೆಳ್ತಂಗಡಿ, ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆಗಳಲ್ಲಿ ಅಕ್ರಮ ಜಾನುವಾರು ವಧೆ ಮಾಡುವ ಶೆಡ್‌ಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣಾ ಅಕ್ರ:125/2025, ಕಲಂ: 303(2), BNS, ಕಲಂ: 4,12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ಹಾಗೂ ಕಲಂ 11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಲ್ಲಿ ತನಿಖೆಯ ವೇಳೆ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಕೆರೆಬಳಿ ಎಂಬಲ್ಲಿ ನಾಸೀರ್ ಮತ್ತು ಇತರರು ದನವನ್ನು ತಂದು ವಧೆ ಮಾಡಿದ ಸ್ಥಳವಾದ ಇದಿನಬ್ಬರವರ ವಾಸದ ಮನೆ, ಕಸಾಯಿಖಾನೆಯ ಶೆಡ್ ಮತ್ತು ವಧೆ ಮಾಡಲು ಜಾನುವಾರನ್ನು ಕಟ್ಟು ಹಾಕಿದ ಶೆಡ್ ಅನ್ನು ಕಲಂ 8 (1) ರ ಪ್ರಕಾರ ತನಿಖಾಧಿಕಾರಿಯವರು ಜಪ್ತಿ ಮಾಡಿಕೊಂಡು ಮುಟ್ಟುಗೋಲಿಗಾಗಿ ಉಪವಿಭಾಗ ದಂಡಾಧಿಕಾರಿ ಮಂಗಳೂರು ರವರಿಗೆ ವರದಿ ನಿವೇದಿಸಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣಾ 103/2025 ಕಲಂ ಕಲಂ: 4, 5, 7, 12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020, 112 (2), 303(2) ಬಿಎನ್‌ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ. ತನಿಖೆಯ ಸಮಯ ಆರೋಪಿಯು ಕೃತ್ಯಕ್ಕೆ ಬಳಸಿರುವ ಸ್ಥಳವಾದ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬಳಿ ಇರುವ ಮಹಮ್ಮದ್ ರಫೀಕ್ ಅವರ ಮನೆ ಪ್ರಸ್ತುತ ಖಾಲಿ ಜಾಗವನ್ನು ಕಲಂ 8 (1) ರ ಪ್ರಕಾರ ತನಿಖಾಧಿಕಾರಿಯವರು ಜಪ್ತಿ ಮಾಡಿ ಕೊಂಡು ಮುಟ್ಟುಗೋಲಿಗಾಗಿ ಉಪವಿಭಾಗಿ ದಂಡಾಧಿಕಾರಿ ಪುತ್ತೂರು ರವರಿಗೆ ವರದಿ ನಿವೇದಿಸಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಅಕ್ರ:76/2025, Sec:331(4), 305 BNS, 2023 ಕಲಂ: 4,12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ರಲ್ಲಿ ತನಿಖೆಯ ಸಮಯ ಆರೋಪಿ ಮೊಹಮ್ಮದ್ ಮನ್ಸೂರ ಎಂಬಾತನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದ ಸ್ಥಳವಾದ ಮಂಗಳೂರು ನಗರ ವ್ಯಾಪ್ತಿಯ ಜೆ.ಎಮ್ ರಸ್ತೆ ಭಟ್ಕಳ ಬಜಾರ್ ಬಂದರ್ ಕುದ್ರೋಳಿ ಬಳಿಯಿರುವ ಕಟ್ಟಡವನ್ನು ಕಲಂ 8 (1) ರ ಪ್ರಕಾರ ತನಿಖಾಧಿಕಾರಿಯವರು ಜಪ್ತಿ ಮಾಡಿ ಕೊಂಡು ಮುಟ್ಟುಗೋಲಿಗಾಗಿ ಉಪವಿಭಾಗಿ ದಂಡಾಧಿಕಾರಿ ಮಂಗಳೂರು ರವರಿಗೆ ವರದಿ ನಿವೇದಿಸಲಾಗಿದೆ.
ಈ ಹಿಂದೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಅಕ್ರ 123/2025 ಕಲಂ 303 ಬಿಎನ್ ಎಸ್ ಕಲಂ 4,7,12 ಗೋಸಂರಕ್ಷಣಾ ಕಾಯಿದೆ ಮತ್ತು 11(ಡಿ) ಗೋಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ಹಸನಬ್ಬ ರವರ ಮನೆ/ಅಕ್ರಮ ಕಸಾಯಿಖಾನೆಯನ್ನು ಉಪವಿಭಾಗಿ ದಂಡಾಧಿಕಾರಿ ಮಂಗಳೂರು ಮುಟ್ಟುಗೋಲು ಹಾಕಲಾಗಿದೆ.
ಈ ಮೇಲಿನ ಮೂರು ಪ್ರಕರಣದಲ್ಲಿ ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ಅಡಿಯಲ್ಲಿ ಕೃತ್ಯಕ್ಕೆ ಬಳಸಿರುವ ಸ್ಥಳ ಮತ್ತು ಕಟ್ಟಡಗಳನ್ನು ಜಪ್ತಿ ಮಾಡಲಾಗಿರುತ್ತದೆ. ಈ ಮೂಲಕ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಹಾಗೂ ಅಕ್ರಮ ಚಟುವಟಿಕೆಗಳಿಗೆ ಸ್ಥಳವಕಾಶ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ.