ಮಂಜೇಶ್ವರ : ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಮಂಜೇಶ್ವರ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕಾಗಿ ನಿರ್ಮಿಸುವ ಆಧುನಿಕ ಕಟ್ಟಡದ ಶಿಲಾನ್ಯಾಸ ಹಾಗೂ NHM ನಿಧಿಯಿಂದ ನಿರ್ಮಿಸಲಾದ ಔಷಧಾಲಯ ಮತ್ತು ವೈಟಿಂಗ್ ಏರಿಯಾವನ್ನು ಗೌರವಾನ್ವಿತ ಆರೋಗ್ಯ ಸಚಿವರಾದ ಶ್ರೀಮತಿ ವೀಣಾ ಜಾರ್ಜ್ ಆನ್ ಮಂಗಳವಾರ ಬೆಳಿಗ್ಗೆ ವಿಡಿಯೋ ಕಾನ್ಸರೆನ್ಸ್ ಮೂಲಕ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಜೇಶ್ವರದ ಗೌರವಾನ್ವಿತ ಶಾಸಕ ಶ್ರೀ ಎ.ಕೆ.ಎಂ ಅಶ್ರಫ್ ವಹಿಸಿದರು.. ಈ ಕಾರ್ಯಕ್ರಮದಲ್ಲಿ ತ್ರಿಸ್ಥರ ಪಂಚಾಯತ್ ಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದರು.