ಕುಂಬಳೆ ಅನಂತಪುರ ಕೈಗಾರಿಕಾ ಪ್ರಾಂಗಣದ ಡೆಕೋರ್ ಪ್ಯಾನೆಲ್ ಇಂಡಸ್ಟ್ರೀಸ್ ನಲ್ಲಿ ಬಾಯ್ಲರ್ ಸ್ಟೋಟ .ಓರ್ವ ಸಾವು, ಹಲವರಿಗೆ ಗಾಯ.

ಮಂಜೇಶ್ವರ : ಕುಂಬಳೆ ಅನಂತಪುರ ಕೈಗಾರಿಕಾ ಪ್ರಾಂಗಣದ ಡೆಕೋರ್ ಪ್ಯಾನೆಲ್ ಇಂಡಸ್ಟ್ರೀಸ್ ನಲ್ಲಿ ಬಾಯ್ಲರ್ ಸ್ಟೋಟಗೊಂಡು ಸಂಭವಿಸಿದ ದುರಂತದಲ್ಲಿ ಒಬ್ಬ ಘಟನಾ ಸ್ಥಳದಲ್ಲೇ ಸಾವನ್ನಪ್ಪಿ 16 ಮಂದಿ ಕಾರ್ಮಿಕರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಪೈಕಿ 6 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.

NAMMA MEDIA 24X7

ಪರಿಸರದ ಮನೆ, ಕಾರ್ಖಾನೆಗಳಿಗೆ ಛಿದ್ರಗೊಂಡ ಕಲ್ಲುಗಳು ರಟ್ಟಿದ್ದಲ್ಲದೇ, ಸ್ಫೋಟದ ಕಂಪನಕ್ಕೆ ಅನಂತಪುರ ಕ್ಷೇತ್ರ ಪರಿಸರವೇ ಕಂಪಿಸಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಂಭಾವ್ಯತೆ ಇರುವುದಾಗಿ ತಿಳಿದು ಬಂದಿದೆ.

NAMMA MEDIA 24X7

ಸ್ಫೋಟದ ಸದ್ದು ಪರಿಸರದಲ್ಲಿ ಭಯ, ಭೀತಿಯ ಆತಂಕ ಸೃಷ್ಟಿಸಿ ಹಲವರು ಮನೆಯಿಂದ ಹೊರಗೆ ಓಡಿದರೆ, ಅನೇಕ ಮನೆಗಳ ಗಾಜಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಕಾರ್ಖಾನೆ ಪರಿಸರದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಠಿಕಾಣಿ ಹೂಡಿದ್ದಾರೆ. ಸಾರ್ವಜನಿಕ ಯಾರನ್ನೂ ಅತ್ತ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಅಪೂರ್ವ ತಟಾಕ ಕ್ಷೇತ್ರ ಅನಂತಪುರ ದೇವಳ ಸುತ್ತಲಿನ ಪರಿಸರ ಕೈಗಾರಿಕಾ ಕೇಂದ್ರವಾಗಿದ್ದು, ಇಂಥಾ ದುರಂತ ಇದೇ ಮೊದಲಬಾರಿ ನಡೆದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.ಪರಿಸರಕ್ಕೆ ವಾಹನ ಸಂಚಾರ ನಿಷೇಧಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!