ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಪೊಲೀಸ್‌ ವಶಕ್ಕೆ…. !

ಮಂಗಳೂರು :ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಮೆಂಟ್‌ವೊಂದನ್ನು ಟ್ಯಾಗ್ ಮಾಡಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಅವರನ್ನು ಕದ್ರಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

RSS ಮುಖಂಡರ ಒಂದು ಭಾಷಣಕ್ಕೆ ಸಂಬಂಧಿಸಿದ ವಿಡಿಯೋ ತುಣುಕುನ್ನು ವಿಕಾಸ್ ಪುತ್ತೂರು ಎಂಬುವವರು ಸಾಮಾಜಿಕ ಜಾಲತಾಣದಲ್ಲಿ “ಮುಸ್ಲಿಂರ ಜನಸಂಖ್ಯೆ ಜಿಹಾದ್ ಮೆಟ್ಟಿ ನಿಲ್ಲೋಣ” ಎಂಬ ವಾಕ್ಯದೊಂದಿಗೆ ಶೇರ್ ಮಾಡಿದ್ದರು. ಇದನ್ನು ಶರಣ್ ಪಂಪ್‌ವೆಲ್ ಅವರು ಮತ್ತೊಮ್ಮೆ ಶೇರ್ ಮಾಡಿ ಜನಸಂಖ್ಯೆ ಬೆಳವಣಿಗೆಯ ಬಗ್ಗೆ ಚರ್ಚೆಯನ್ನು ಉಂಟುಮಾಡಿದ್ದರು. ಈ ಸಂಬಂಧ ಕದ್ರಿ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.


ವಿಕಾಸ್ ಎಂಬಾತ ಹಾಕಿದ್ದ ಕಮೆಂಟ್ ಅನ್ನು ಶರಣ್ ಪಂಪ್ ವೆಲ್ ಶೇರ್ ಮಾಡಿದ್ದರು. ಶರಣ್ ಪಂಪ್ ವೆಲ್ ಶೇರ್ ಮಾಡಿದ್ದ ಕಮೆಂಟ್ ಈಗಾಗಲೇ ಡಿಲೀಟ್ ಆಗಿದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಕಮೀಷನರ್‌ ತಿಳಿಸಿದರು. ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಅವರಿಗೆ ನೋಟಿಸ್ ಕೊಡದೆ, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಕದ್ರಿ ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!