ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಜಿ.ಎಲ್.ಪಿ.ಯಸ್.ವಾಮಂಜೂರು ಶಾಲೆ ಎಲ್.ಪಿ ಜನರಲ್ ವಿಭಾಗದಲ್ಲಿ ಪ್ರಥಮ ಸ್ಥಾನ ವನ್ನು ಗಳಿಸಿ ಚಾಂಪಿಯನ್ ಶಿಪ್ ಪಡೆದುಕೊಂಡಿದೆ.ಅರೆಬಿಕ್ ಶಾಲಾ ಕಲೋತ್ಸವದಲ್ಲಿ ರನ್ನರ್ ಅಪ್ ಆಗಿ ಮೂಡಿಬಂದಿದೆ.
ಈ ಸಂತೋಷದ ವಿಚಾರವನ್ನು ಪ್ರಕಟ ಪಡಿಸಲು ಶಾಲೆಯಿಂದ ಹೊರಟು ಹೊಸಂಗಡಿ ಪೇಟೆಗೆ ಮೆರವಣಿಗೆಯ ಮೂಲಕ ಸಾಗಿ ವಿಜಯೋತ್ಸವವನ್ನು ಆಚರಿಸಲಾಯಿತು..
ಮೆರವಣಿಗೆಯ ನೇತೃತ್ವವನ್ನು ಪಿ.ಟಿ.ಎ.ಅಧ್ಯಕ್ಷ ರಾದ ಶ್ರೀಯುತ ಕಲಂದರ್ ತಾಜುದ್ದೀನ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾದ ಶ್ರೀಯುತ ಶೇಖ್ ಉಸ್ಮಾನ್, ಯಂ.ಪಿ.ಟಿ.ಎ ಅಧ್ಯಕ್ಷೆಯಾದ ಶ್ರೀಮತಿ ರಮೀಝ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಿಲ್ವಿಯಾ ಟೀಚರ್,ಶಾಲಾ ಶಿಕ್ಷಕ ವೃಂದ ಹಾಗೂ ರಕ್ಷಕರು ವಹಿಸಿದ್ದರುಮಕ್ಕಳಿಗೆ ಸಿಹಿ ತಿಂಡಿ ಹಾಗೂ ತಂಪು ಪಾನೀಯ ವಿತರಿಸಲಾಯಿತು.