ಮಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ಪ್ರೇರಣಾ ಮಂತ್ರ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಹಿನ್ನಲೆಯಲ್ಲಿ ದೇಶಾದಾದ್ಯಂತ 150 ಕಡೆಗಳಲ್ಲಿ ವಂದೇ ಮಾತರಂ ಗೀತೆಯನ್ನು ಇಂದು ಹಾಡಲಿರುವವರು . ಈ ಸಂಭ್ರಮದ ಪ್ರಯುಕ್ತ ಜಿಲ್ಲಾ ಬಿಜೆಪಿ ಕಛೇರಿಯ ಮುಂದೆ ಬಿಜೆಪಿ ನಾಯರು, ಕಾರ್ಯಕರ್ತರ ಸಮ್ಮುಖದಲ್ಲಿ ಸಾಮೂಹಿಕವಾಗಿ ವಂದೇಮಾತರಂ ಗೀತೆಯನ್ನು ಹಾಡಲಾಯಿತು.
ಸಾಮೂಹಿಕ ಗೀತೆಯ ನಂತರ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಇಂದು ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬಿದೆ. ಈ ಗೀತೆಯು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ವೀರ ಸೇನಾನಿಗಳು ಪರಕೀಯರ ವಿರುದ್ದ ಹೋರಾಡುವಂತೆ ಮಾಡಿತ್ತು. ಭಾರತೀಯರು ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಹುಟ್ಟುಹಾಕಿತ್ತು.ರಾಷ್ಟ್ರೀಯ ಭಾವನೆಯನ್ನು ಈ ಗೀತೆ ಜಾಗರೂಕತೆ ಮಾಡಿತ್ತು .
ಪ್ರಾಯಶಃ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇರದೇ ಇರುತ್ತಿದ್ದರೆ ಈ ಸಂಭ್ರಮ ನಡೆಯುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಜಿಯವರ ಕನಸಿನ ಕೂಸಾದ ವಿಕಸಿತ ಭಾರತದ ಕಲ್ಪನೆಗೂ ಈ ವಂದೇ ಮಾತರಂ ಗೀತೆ ಪ್ರೇರಣಾ ದಾಯಕವಾಗಿದೆ.ಅವರು ಕಳೆದ ೧೧ ವರ್ಷಗಳಿಂದ ವಿಕಸಿತ ಭಾರತ ಆತ್ಮನಿರ್ಭರ ಭಾರತ ಸ್ವದೇಶೀ ಭಾರತಕ್ಕೆ ಪ್ರಯತ್ನವನ್ನು ಪಡುತ್ತಿದ್ದಾರೆ . ಅದಕ್ಕೆ ಈ ಗೀತೆ ಅಡಿಗಲ್ಲು ಹಾಕಿದೆ . ಇನ್ನು ಸಾಮಾನ್ಯ ಒಂದು ಹಳ್ಳಿಯಲ್ಲಿ ಹುಟ್ಟಿ ಮಿಸೈಲ್ ಮ್ಯಾನ್ ಎಂದು ಗುರುತಿಸಿಕೊಂಡ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರಿಗೂ ಈ ವಂದೇ ಮಾತರಂ ಗೀತೆ ಪ್ರೇರಣೆಯನ್ನು ನೀಡಿತ್ತು . ಅವರ ಸಾಧನಾ ಬದುಕಿಗೂ ಇದು ಕೈಗನ್ನಡಿಯನ್ನು ಹಿಡಿದಿತ್ತು ಎಂದರು .
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ , ಶಾಸಕರಾದ ವೇದವ್ಯಾಸ್ ಕಾಮತ್ , ವೈ ಭರತ್ ಶೆಟ್ಟಿ , ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ , ಕಿಶೋರ್ ಕುಮಾರ್ , ವಂದೇ ಮಾತರಂ ಗೀತೆಯ ರಾಜ್ಯ ಸಂಚಾಲಕರಾದ ಶಾಮಲಾ ಕುಂದರ್ ಮುಂತಾದವರು ಉಪಸ್ಥಿತತರಿದ್ದರು .