ರಾಷ್ಟ್ರಗೀತೆಗೆ ಅಪಮಾನ ಆರೋಪ; ಮಾಜಿ ಸ್ಪೀಕ‌ರ್ ಕಾಗೇರಿ ವಿರುದ್ಧ ಗುಡುಗಿದ ಮಾಜಿ ಸಚಿವ ಬಿ ರಮಾನಾಥ ರೈ .

ಮಂಗಳೂರು: ನಾವು ಪ್ರಾಥಮಿಕ ಶಿಕ್ಷಣ ಪಡೆದಾಗಿನಿಂದಲೂ ಜನಗಣಮನ ರಾಷ್ಟ್ರ,ಗಾನವಾಗಿ ಪ್ರತಿಯೊಬ್ಬರೂ ಗೌರವಿಸುವ ವಿಚಾರ ತಿಳಿದಿದೆ. ದೊಡ್ಡ ವ್ಯಕ್ತಿಯಾಗಿದ್ದರೂ ವಂದೇ ಮಾತರಂ ಮತ್ತು ಜನಗಣಮನಕ್ಕೆ ಬೇಧಭಾವವನ್ನು ಹುಟ್ಟಿಸುವಂತಹ ಹೇಳಿಕೆ ನೀಡುವುದು ತಪ್ಪು. ರವೀಂದ್ರನಾಥ ಠಾಗೋರರು ಜನಗಣಮನ ಗೀತೆ ರಚಿಸಿ ಬಿಡುಗಡೆ ಮಾಡಿದ್ದು 1911 ಡಿಸೆಂಬರ್ 11ಕ್ಕೆ. ಇದನ್ನು ಬ್ರಿಟಿಷರ ಸ್ವಾಗತ ಗೀತೆ ಅಂತಾರಲ್ಲ.ಇದು ಮಾಜಿ ಸ್ಪೀಕ‌ರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಷ್ಟ್ರಗೀತೆಗೆ ಮಾಡಿದ ಅಪಮಾನವೇ ಸರಿ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಗುಡುಗಿದರು .

ಅವರು ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಳ್ಳಿನಿಂದ ಎಲ್ಲವನ್ನು ಮಾಡಿಕೊಂಡು ಹೋಗ್ತವೆ ಎಂದು ನಂಬಿಕೆ ಇರುವವರು ಮಾತ್ರ ಈ ರೀತಿ ಹೇಳಿಕೆಯನ್ನು ನೀಡಲು ಸಾಧ್ಯ . ಸತ್ಯಕ್ಕೆ ತಲೆಬಾಗುವವರು ಈ ರೀತಿ ಮಾತನಾಡೋದಿಲ್ಲ. ರಾಷ್ಟ್ರಗೀತೆಯನ್ನು ಗೌರವಿಸೋದು ಎಲ್ಲಾ ಭಾರತೀಯ ನಾಗರಿಕನ ಆದ್ಯ ಕರ್ತವ್ಯ . ರಾಷ್ಟ್ರ ಗೀತೆಗೆ ಅಪಮಾನ ಮಾಡಿದವರ ವಿರುದ್ದ ಇನ್ನೂ ಕ್ರಮ ಕೈಗೊಂಡಿಲ್ಲ . ರಾಷ್ಟ್ರ ಗೀತೆಗೆ ಅಪಮಾನವನ್ನು ಮಾಡುವ ಮೂಲಕ ಸಂವಿಧಾನವನ್ನು ಉಲ್ಲಂಘಿಸಿ ಮೂಲಭೂತ ಕರ್ತವ್ಯಕ್ಕೆ ಚ್ಯುತಿ ತಂದಿದ್ದಾರೆ. ರಾಷ್ಟ್ರಗೀತೆಯನ್ನು ಅಪಮಾನಿಸೋದು ಘೋರ ಅಪರಾಧ ಎಂದು ವಿರೋಧ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮಾಜಿ ಮೇಯರ್ ಶಶಿಧರ್ ಹೆಗ್ಡೆ , ಕಾಂಗ್ರೆಸ್ ಮುಖಂಡರಾದ ಯೋಗೀಶ್ , ಸುದರ್ಶನ್ ಜೈನ್ , ಮಂಜುಳಾ ನಾಯಕ್ ಸಹಿತ ಮುಂತಾದವರು ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!