‘ಕೊತ್ತಲವಾಡಿ ಚಿತ್ರದ ಪ್ರಚಾರಕ್ಕೆ ಯಶ್ ಸಾತ್ ‘; ‘ರಾಕಿ ಭಾಯ್’ ಅಮ್ಮ ಚಿತ್ರದ ನಿರ್ಮಾಪಕಿ

ಪೃಥ್ವಿ ಅಂಬಾರ್ ಅಭಿನಯದ ‘ಕೊತ್ತಲವಾಡಿ’ ಸಿನಿಮಾದಲ್ಲಿ ಮಂಡ್ಯ ಸೊಗಡಿನ ಕಥೆ ಇದ್ದು, ಪೃಥ್ವಿ ಮೊದಲ ಬಾರಿಗೆ ಆಕ್ಷನ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ಈ ಚಿತ್ರವನ್ನು ಶ್ರೀರಾಜ್ ನಿರ್ದೇಶಿಸಿದ್ದಾರೆ. ಈ ಸಿನಿಮಾವು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಕೊತ್ತಲವಾಡಿ…ಚಾಮರಾಜನಗರ ಜಿಲ್ಲೆಯ ಒಂದು ಸಣ್ಣ ಹಳ್ಳಿ. ಹಳ್ಳಿಯ ಯುವಕ, ಹಳ್ಳಿಯ ಲವ್‌ ಸ್ಟೋರಿ, ಹಳ್ಳಿ ರಾಜಕೀಯ, ಹಳ್ಳಿಯ ಹಾಡು ಹಸೆ ಕುರಿತ ಸಾಕಷ್ಟು ಸಿನಿಮಾಗಳು ಬಂದಿವೆ.

ಅದರೆ ‘ಕೊತ್ತಲವಾಡಿ’ ಅದಲ್ಲ. ಕನ್ನಡದ ಮೋಸ್ಟ್‌ ಹ್ಯಾಪನಿಂಗ್‌ ಹ್ಯಾಂಡಸಮ್‌ ಹೀರೊಗಳ ಪೈಕಿ ಒಬ್ಬರಾಗಿರುವ ಪೃಥ್ವಿ ಅಂಬಾರ್ ಮೊದಲ ಬಾರಿಗೆ ಹಳ್ಳಿ ಯುವಕನಾಗಿ, ಅದರಲ್ಲೂ ಮಂಡ್ಯ ಹೈದನ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾವಿದು. ಇದೇ ಮೊದಲ ಬಾರಿಗೆ ಅವರು ಆ್ಯಕ್ಷನ್‌ ಪ್ರಧಾನ ಹಳ್ಳಿ ಕಥೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದು ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಸಿನಿಮಾ ಅನ್ನೋದು ವಿಶೇಷ.

SHARE
Loading spinner

Leave a Reply

Your email address will not be published. Required fields are marked *

error: Content is protected !!