ರಾಜ್ಯಮಟ್ಟದ ಗಣಿತ ಶಾಸ್ತ್ರೋತ್ಸವದಲ್ಲಿ ದ್ವಿತೀಯ ರನ್ನರಪ್ ಪ್ರಶಸ್ತಿ ಮುಡಿಗೇರಿಸಿದ ಎಸ್ ಎ ಟಿ ವಿದ್ಯಾಸಂಸ್ಥೆ

ಮಂಜೇಶ್ವರ: ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಳದ ಶಾಲೆಯ ಪ್ರೌಢ ಶಾಲಾ‌ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಗಣಿತ ಶಾಸ್ತ್ರೋತ್ಸವದಲ್ಲಿ ಭಾಗವಹಿಸಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ರಾಜ್ಯ ಮಟ್ಟದ ಗಣಿತ ಪಝಲ್ ವಿಭಾಗದಲ್ಲಿ ಧನ್ಯ ಸಿ ಐಲ್ ದ್ವಿತೀಯ ಸ್ಥಾನದೊಂದಿಗೆ ಎ ಗ್ರೇಡ್, ನಂಬರ್ ಚಾರ್ಟ್ ವಿಭಾಗದಲ್ಲಿ ಚೈತ್ರಿಕಾ ಎಮ್ ಎ ಗ್ರೇಡ್, ಗ್ರೂಪ್ ಪ್ರೊಜೆಕ್ಟ್ ನಲ್ಲಿ ಅನುಶ್ರೀ ಮತ್ತು ಶೃಷ್ಠಿ ಶೆಟ್ಟಿ ಎ ಗ್ರೇಡ್, ಅದರ್ ಚಾರ್ಟ್ ವಿಭಾಗದಲ್ಲಿ ವರ್ಷ ಜಿ.ಕೆ ಎ ಗ್ರೇಡ್, ಸ್ಟಿಲ್ ಮೋಡಲ್ ವಿಭಾಗದಲ್ಲಿ ಪ್ರಣವಿ ಎ ಗ್ರೇಡ್ ಪಡೆದು ಮಂಜೇಶ್ವರದ ಎಸ್ ಎ ಟಿ ವಿದ್ಯಾಸಂಸ್ಥೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.

ಪ್ರಶಸ್ತಿಯನ್ನು ಪಡೆದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ರಕ್ಷಕ ಶಿಕ್ಷಕ‌ ಸಮಿತಿ ಅಭಿನಂದಿಸಿದರು.

ಚಿತ್ರ: ಡಿಡಿಇ, ಜಿಲ್ಲಾ ಗಣಿತ ಸೆಕ್ರೆಟರಿ, ಶಾಲಾ ಅಧ್ಯಾಪಕರ ಜೊತೆ ಸಾಧಕ ವಿದ್ಯಾರ್ಥಿಗಳು

SHARE
Loading spinner

Leave a Reply

Your email address will not be published. Required fields are marked *

error: Content is protected !!