ಮಂಜೇಶ್ವರ: ಸ್ಥಳೀಯಾಡಳಿತ ಚುನಾವಣಾ ಕಣ ದಿನದಿಂದ ದಿನಕ್ಕೆ ಬಿಸಿಯೇರುತ್ತಿರುವ ಹಿನ್ನೆಲೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತು ಎರಡನೇ ವಾರ್ಡಿನ ಯು ಡಿ ಎಫ್ ಚುನಾವಣಾ ಕಚೇರಿಯನ್ನು ವಡಗರ ಸಂಸದ ಶಾಫಿ ಪರಂಬಿಲ್ ಉದ್ಘಾಟಿಸಿದರು.ಉದ್ಘಾಟನಾ ಸಮಾರಂಭವು ಉತ್ಸಾಹಭರಿತ ವಾತಾವರಣದಲ್ಲಿ ನಡೆದಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ದೊಡ್ಡ ಉಪಸ್ಥಿತಿ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಎರಡನೇ ವಾರ್ಡ್ ಯುಡಿಎಫ್ ಅಭ್ಯರ್ಥಿ ಇಲ್ಯಾಸ್ ತೂಮಿನಾಡು, ಜಿಲ್ಲಾ ಪಂಚಾಯತ್ ವರ್ಕಾಡಿ ಡಿವಿಷನ್ ಅಭ್ಯರ್ಥಿ ಹರ್ಷಾದ್ ವರ್ಕಾಡಿ ಸೇರಿದಂತೆ ವಿವಿಧ ವಾರ್ಡ್, ಬ್ಲಾಕ್ ಹಾಗೂ ಜಿಲ್ಲಾ ಪಂಚಾಯತು ಡಿವಿಷನ್ಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳು, ಯುಡಿಎಫ್ ನಾಯಕರರು ಮತ್ತು ನೂರಾರು ಕಾರ್ಯಕರ್ತರು ಪಾಲ್ಗೊಂಡರು.ಬಳಿಕ ಕೆ ಪಿ ಎಸ್ ಸಭಾಂಗಣದಲ್ಲಿ ಯುಡಿಎಫ್ ಕುಟುಂಬ ಸಂಗಮ ನಡೆಯಿತು
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ, ಶಾಸಕರು ಹಾಗೂ ನಾಯಕರು, ಮಂಜೇಶ್ವರದ ಅಭಿವೃದ್ಧಿಗೆ ಯುಡಿಎಫ್ ನೀಡಿರುವ ಕೊಡುಗೆಯನ್ನು ಸ್ಮರಿಸಿಕೊಂಡು, ಮುಂದಿನ ಚುನಾವಣೆಯಲ್ಲೂ ಜನತೆ ಅಭಿವೃದ್ಧಿ ಪರವಾದ ಯುಡಿಎಫ್ ಅಭ್ಯರ್ಥಿಗಳಿಗೆ ಭರ್ಜರಿ ಬೆಂಬಲ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.ಚುನಾವಣಾ ಕಚೇರಿ ಉದ್ಘಾಟನೆಯೊಂದಿಗೆ ಎರಡನೇ ವಾರ್ಡ್ನಲ್ಲಿ ಯುಡಿಎಫ್ ಪ್ರಚಾರ ಮತ್ತಷ್ಟು ಜೋರಾಗಿದೆ. ಜನರಿಗೆ ನೇತೃತ್ವದ ಯೋಜನೆಗಳು ಹಾಗೂ ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಲುಪಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಪಕ್ಷದ ಕಾರ್ಯಕರ್ತರು ತಿಳಿಸಿದರು