ಮಂಜೇಶ್ವರ :ಕೃಷಿಕರ ಬ್ಯಾಂಕ್ ಎಂದು ಪ್ರಸಿದ್ದಿ ಪಡೆದಿರುವ ಕೇರಳ ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು 635 ಶಾಖೆ ಹೊಂದಿರುವ ಬ್ಯಾಂಕಿನಲ್ಲಿ ಅರುವತ್ತು ಸಾವಿರ ಕೋಟಿ ಗ್ರಾಹಕರ ಠೇವಣಿ ತುಂಬಿದ ಈ ಸಂದರ್ಭದಲ್ಲಿ ಗ್ರಾಹಕರು ಕೃಷಿಕರು ಬ್ಯಾಂಕ್ ಸಿಬ್ಬಂದಿಗಳು ಸೇರಿ ಕೇಕ್ ಕತ್ತರಿಸುವ ಮೂಲಕ ಪಾವೂರು ಕೇರಳ ಗ್ರಾಮೀಣ ಬ್ಯಾಂಕಿನನಲ್ಲಿ ಸಂತೋಷ ಕೂಟ ಆಚರಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾವೂರು ಶಾಖೆಯ ಮೆನೇಜರ್ ಶ್ರುತಿ C. ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ನೆರವೇರಿಸಿದರು ಕಾರ್ಯಕ್ರಮದಲ್ಲಿ ತ್ಯಾoಪಣ್ಣ ರೈ ಮುಟ್ಲ.ಸುಧಾಕರ ಕೊಂಬಗುರಿ.ಪೋಸ್ಟ್ ಮಾಸ್ಟರ್ ಪ್ರಕಾಶ್ ಕಾಪು.ಬ್ಯಾಂಕ್ ಸಿಬ್ಬಂದಿಗಳಾದ ರಿಜಿನ್.ಶಾನೇಶ್. ವೀಣಾ. ಯೋಗೇಶ್ ಆಚಾರಿ. ಹಾಗೂ ಕೃಷಿಕರು ಗ್ರಾಹಕರು ಭಾಗವಹಿಸಿದರು ರಿಜಿನ್. ಸ್ವಾಗತಿಸಿ ವೀಣಾ ವಂದಿಸಿದರು