ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ಕೇರಳ ಥೆಯ್ಯಮ್ ಆಚರಣೆಗೆ ಪ್ರಸಿದ್ದ. ಕರ್ನಾಟಕದ ಕರಾವಳಿ ಜಿಲ್ಲೆ ಅರ್ಥಾತ್ ತುಳುನಾಡೆಂದು ಪರಿಗಣಿಸಿಲ್ಪಟ್ಟ ಅವಿಭಜಿತ ದಕ್ಷಿಣ ಕನ್ನಡ ಭೂತಾರಾಧನೆ ಗೆ ಪ್ರಸಿದ್ದ, ಕೇರಳದ ಥೆಯ್ಯಮ್ ಕುರಿತು ಒಂದು ನೊಟ ಇಲ್ಲಿದೆ. ಚಂದ್ರಗಿರಿ ನದಿಯ ದಕ್ಷಿಣದ ಪುಣ್ಯ ಕ್ಷೇತ್ರ ,ಕಾವು, ಗುಡಿಗಳಲ್ಲಿ ಕಳಿಯಾಟ ಮಹೋತ್ಸವ ಎಂಬ ವಿಶಿಷ್ಟ ಆರಾಧನೆ ವೃಶ್ಚಿಕ ಮಾಸದಲ್ಲಿ ನಡೆಯುತ್ತದೆ. ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೂರದ ಊರುಗಳಿಂದಲ್ಲು ಭಕ್ತರು ಬಂದು ಹರಕೆ ಸಲ್ಲಿಸುತ್ತಾರೆ .
ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚಿತ್ತಾರಿಯಲ್ಲಿರುವ ಚಾಮುಂಡಿಕುನ್ನು ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಈ ವರ್ಷದ ಕಳಿಯಾಟ ಮಹೋತ್ಸವವು ಸಂಪ್ರದಾಯಬದ್ದವಾಗಿ ಮತ್ತು ಅದ್ದೂರಿಯಾಗಿ ನಡೆಯಿತ್ತು . ಈ ಸಂದರ್ಭದಲ್ಲಿ ಪುಮಾರುತನ್ ವೆಳ್ಳಾಟ್ಟಂ ದೈವವು ಮಕ್ಕಳೊಂದಿಗೆ ತಾನು ಮಕ್ಕಳಂತೆ ಕುಣಿಯಿತು . ಮಡಿಯನ್ ಭಾಗದಿಂದ ವರ್ಣರಂಜಿತವಾದ ಉಲ್ಪೆ ಸಮರ್ಪಣೆ ನಡೆಯಿತು . ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು .