ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ನಿಟ್ಟೆ-ಸುದ್ದಿ-ರೋಟರಿ ಎಂಸ್‌ ಎಂಇ ಹಾಗೂ ಸ್ಮಾರ್ಟ್‌ ಅಪ್ ಬೂಟ್ ಕ್ಯಾಂಪ್ – 2025

ಮಂಗಳೂರು: ಉದ್ಯಮೇನ ಹಿ ಸಿಧ್ಯಂತಿ ಕಾರ್ಯಾಣಿ” ಎಂಬ ಶೀರ್ಷಿಕೆ ಅಡಿಯಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ನಿಟ್ಟೆ ಇನ್ಸಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಷನ್, ಮಂಗಳೂರು ಎಐಸಿ ನಿಟ್ಟೆ ಇನ್ಕ್ಯುಬೇಷನ್ ಸೆಂಟರ್, ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಜಂಟಿಯಾಗಿ ಡಿಸೆಂಬರ್ 15 ಮತ್ತು 16 ರಂದು ಮಂಗಳೂರಿನ ಪಡೀಲ್ ನಲ್ಲಿರುವ NIPE ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ನಿರ್ದೇಶಕರಾದ ಸಿಎ.ಎಸ್.ಎಸ್ ನಾಯಕ್ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕರಾವಳಿ ಕರ್ನಾಟಕದ ಅನೇಕ ಉದ್ಯಮಿಗಳು ಮತ್ತು ನವೋದ್ಯಮಗಳು, ಉದಯೋನ್ಮುಖ ಉದ್ಯಮಿಗಳು ಮತ್ತು ಉದ್ಯಮಶೀಲತಾ ಕನಸುಗಳನ್ನು ಹೊಂದಿರುವ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕರಾವಳಿ ಪ್ರದೇಶದಲ್ಲಿ ಅನೇಕ MSMEಗಳು ಮತ್ತು ನವೋದ್ಯಮಗಳು ಹೊರಹೊಮ್ಮಲು ಸಾಧ್ಯವಾಗುವಂತೆ ಉದ್ಯಮಶೀಲತಾ ಮನಸ್ಥಿತಿಯನ್ನು ಬೆಳೆಸುವುದು ಈ ಎರಡು ದಿನಗಳ ಶಿಬಿರದ ಉದ್ದೇಶವಾಗಿದೆ ಎಂದರು .

ಭಾರತದಲ್ಲಿ, 6.80 ಕೋಟಿಗೂ ಹೆಚ್ಚು MSMEಗಳು ಉದ್ಯಮ ಪೋರ್ಟಲ್ ನಲ್ಲಿ ನೋಂದಾಯಿಸಲ್ಪಟ್ಟಿವೆ ಮತ್ತು 30 ಕೋಟಿ ಜನರಿಗೆ ಉದ್ಯೋಗವನ್ನು ಒದಗಿಸುತ್ತಿವೆ MSME ವಲಯವು ದೇಶದ GDP ಗೆ ಶೇಕಡಾ 30 ರಷ್ಟು ಮತ್ತು ಒಟ್ಟು ರಪ್ತಿನ ಶೇಕಡಾ 48 ರಷ್ಟು ಕೊಡುಗೆ ನೀಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ಸಬ್ಸಿಡಿಗಳು, ಅನುದಾನಗಳು, ಸೌಲಭ್ಯಗಳು ಮತ್ತು ಪ್ರೋತ್ಸಾಹ ಹಾಗು ಬ್ಯಾಂಕುಗಳ ಸುಲಭ ಮತ್ತು ಸರಳ ರೀತಿಯಲ್ಲಿ ನೀಡುವ ವಿವಿಧ ಹಣಕಾಸು ಯೋಜನೆಗಳು, CIBIL ಜಾಗೃತಿ, ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ತಂತ್ರಗಳು ಇತ್ಯಾದಿಗಳ ಮಾಹಿತಿಯನ್ನು ಡೊಮೇನ್ ತಜ್ಞರು ಪ್ರಸಾರ ಮಾಡುತ್ತಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ನಿಟ್ಟೆ ಇನ್ಸಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಷನ್‌ ಮಂಗಳೂರು ಇದರ ಸದಸ್ಯರಾದ ಡಾ. ಜ್ಞಾನೇಶ್ವರ ಪೈ ಮಾರೂರ್ , ಡಾ. ಪ್ರದೀಪ ಕೆ. ಎಸ್. , . ಅರ್ವಿನ್ ಡಿಸೋಜಾ , ರೋ ಭಾಸ್ಕರ್ ರೈ ಕಟ್ಟಾ ಸಹಿತ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!