ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾರವರ ನೇತೃತ್ವದಲ್ಲಿ 11ನೇ ವರ್ಷದ ಭಾವೈಕ್ಯತೆಯ ಕ್ರಿಸ್ಮಸ್ ಸಂಭ್ರಮಾಚರಣೆ ಮತ್ತು ಕ್ಯಾರಲ್ ಸಂಗೀತ ಸ್ಪರ್ಧೆ

ಕರ್ನಾಟಕ ಸರಕಾರದ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾರವರು ಕಳೆದ 10 ವರ್ಷಗಳಿಂದ ಸರ್ವಧರ್ಮಗಳ ಭಾವೈಕ್ಯತೆಯ ಸಂಗಮವಾದ ದೀಪಾವಳಿ ಹಬ್ಬ, ಕ್ರಿಸ್ಮಸ್ ಸಂಭ್ರಮಾಚರಣೆ ಹಾಗೂ ರಂಜಾನ್ ಹಬ್ಬವನ್ನು ಮಂಗಳೂರಿನ ಹಲವು ಕಡೆಗಳಲ್ಲಿ ಸರ್ವಧರ್ಮಿಯರು ಸೇರಿಕೊಂಡು ಆಚರಿಸುತ್ತಾ ಬರುತ್ತಿದ್ದಾರೆ. ಈ ಭಾರಿ 11ನೇ ವರ್ಷದ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಡಿ 22 ರಂದು ನಗರದ ಜೆಪ್ಪು ಸಂತ ಅಂತೋನಿ ಆಶ್ರಮದ ತೆರೆದ ಮೈದಾನದಲ್ಲಿ ಸಂಜೆ 3:30 ರಿಂದ ರಾತ್ರಿ 8:00ರ ವರೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಜೆ ನಾಗೇಂದ್ರ ಕುಮಾರ್ ತಿಳಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಕ್ಯಾರಲ್ ಸಂಗೀತ ಸ್ಪರ್ಧೆ ಹಾಗೂ ಸರ್ವಧರ್ಮದ ಸಭಾ ಕಾರ್ಯಕ್ರಮ ನಡೆಯಲಿದೆ.ಕ್ಯಾರಲ್ ಸಂಗೀತ ಸ್ಪರ್ಧೆಯು ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗಲಿದೆ. ಈ ಸ್ಪರ್ಧೆಯಲ್ಲಿ ಒಬ್ಬ ವ್ಯಕ್ತಿಗೆ ಭಾಗವಹಿಸುವ ಅವಕಾಶವಿದೆ. ವಿಜೇತರಿಗೆ ಪ್ರಥಮ ರೂ.3,000/- ದ್ವಿತೀಯ ರೂ.2,000/- ತೃತೀಯ ರೂ.1,000/ ರೂಪಾಯಿ ನೀಡಲಾಗುವುದು.ಹಾಗೂ ಕ್ರಿಸ್ಮಸ್ ವೋಟಾಕ್ಸ್ ಇತರ ಸ್ಪರ್ಧೆಗಳು ನಡೆಯಲಿದೆ. ಈ ಸ್ಪರ್ಧೆಗೆ 15 ನಿಮಿಷದ ಕಾಲಾವಕಾಶವಿದೆ.ಈ ಸ್ಪರ್ಧೆಯಲ್ಲಿ ಡ್ಯಾನ್ಸ್, ಸಂಗೀತ, ಸ್ಕಿಟ್, ಸಂತಾಕ್ಲೋಸ್, ಹಾಗೂ ಕಾರ್ಯಕ್ರಮ ನಿರೂಪಣೆ ಕೂಡಾ ಅಳವಡಿಕೆಯಾಗಿದೆ. ವಿಜೇತರರಿಗೆ ಪ್ರಥಮ ಬಹುಮಾನ: ರೂ.20,000/-, ದ್ವಿತೀಯ ಬಹುಮಾನ: ರೂ.15,000/-ತೃತೀಯ ಬಹುಮಾನ: ರೂ.10,000/- ವನ್ನು ನೀಡಲಾಗುವುದೆಂದು ಅವರು ತಿಳಿಸಿದರು.

ಸಂಜೆ ಗಂಟೆ 5:30ಕ್ಕೆ ಕ್ರಿಸ್ಮಸ್ ಸಂಭ್ರಮಾಚರಣೆಯ ಭಾವೈಕ್ಯತೆಯ ಸಂಗಮದ ಸಭಾ ಕಾರ್ಯಕ್ರಮದ ಉದ್ಘಾಟಕರಾಗಿ ವಂ.ಡಾ| ಜೆರಾಲ್ಡ್ ಐಸಾಕ್ ಲೋಬೋ (ಧರ್ಮಾಧ್ಯಕ್ಷರು ಉಡುಪಿ ಧರ್ಮಪ್ರಾಂತ್ಯ) ಹಾಗೂ ಕ್ರಿಸ್ಮಸ್ ಸಂದೇಶವನ್ನು ಶ್ರೀ ಶ್ರೀ ಯುಗೇಶಾನಂದ ಸ್ವಾಮಿಜಿ (ಶ್ರೀ ರಾಮಕೃಷ್ಣ ಮಠ ಮಂಗಳಾದೇವಿ ಮಂಗಳೂರು) ಇವರು ನೀಡಲಿದ್ದಾರೆ.

ಅತಿಥಿಗಳಾಗಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಜಕಾರಿಯಾ ಜೋಕಟ್ಟೆ , ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾದ ದರ್ಶನ್ ಹೆಚ್ ವಿ , ಮಂಗಳೂರು ನಗರ ಪೊಲೀಸ್ ಆಯುಕ್ತಾರದ ಸುಧೀರ್ ಕುಮಾರ್ ರೆಡ್ಡಿ ಸಹಿತ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಎನ್.ಪಿ. ಮನುರಾಜ್, ಮನೀಷ್ ಬೋಳಾರ್, ಮೀನಾ ಟೆಲ್ಲಿಸ್, ಶ್ರೀಮತಿ ವಿದ್ಯಾ ಅತ್ತಾವರ, ಇಮ್ರಾನ್ ಕುದ್ರೋಳಿ ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!