ಯುಡಿಎಫ್ ನೇತೃತ್ವದ ಗೂಂಡಾ ತಂಡಗಳು ಎಡರಂಗದ ಕಾರ್ಯಕರ್ತರ ಮೇಲೆ ವಿನಃಕಾರಣ ಆಕ್ರಮಣ -ಕೆ ಆರ್ ಜಯಾನಂದ

ಮಂಜೇಶ್ವರ ತ್ರಿಸ್ತರ ಚುನಾವಣೆಯ ನಂತರ ಮಂಜೇಶ್ವರ ಮಂಡಲದ ವಿವಿಧ ಪ್ರದೇಶಗಳಲ್ಲಿ ಯುಡಿಎಫ್ ನೇತೃತ್ವದ ಗೂಂಡಾ ತಂಡಗಳು ಎಡರಂಗದ ಕಾರ್ಯಕರ್ತರ ಮೇಲೆ ಏನೇ ಕಾರಣ ಇಲ್ಲದೆ ಆಕ್ರಮಣ ನಡೆಸುತ್ತಿರುವುದು ಖಂಡನೀಯವಾಗಿದೆ.ಈ ಅಕ್ರಮಕಾರಿಗಳಿಗೆ ಮಂಜೇಶ್ವರ ಶಾಸಕರ ಬೆಂಬಲವು ಗೂಂಡಾ ತಂಡಗಳಿಗೆ ಅಕ್ರಮಕ್ಕೆ ಪ್ರೋತ್ಸಾಹ ನೀಡುವುದಾಗಿದೆ.ಚುನಾವಣೆಯ ನಂತರ ಜನಪ್ರತಿನಿಧಿಗಳು ಈ ರೀತಿಯ ಆಕ್ರಮಣಗಳಿಗೆ ನೇತೃತ್ವ ನೀಡುವುದು ಈ ಪರಿಸರದ ಜನರ ನೆಮ್ಮದಿಯನ್ನು ಕೆಡಿಸುವುದಾಗಿದೆ.

ಸಮಾಧಾನ ಪರವಾಗಿ ಚುನಾವಣೆಯ ನಂತರ ಈ ಆಕ್ರಮಣ ನಡೆಸುವುದು ಗೂಂಡಾ ರಾಜ್ಯವನ್ನಾಗಿಸುವ ಮುಸ್ಲಿಂ ಲೀಗಿನ ತಂತ್ರವಾಗಿದೆ.ಗರ್ಭಿಣಿ ಮಹಿಳೆ ಸಹಿತವಿರುವ ಹೆಣ್ಣು ಮಕ್ಕಳ ಮೇಲೆ ನಡೆಸುವ ಆಕ್ರಮಣ ಶಿರಿಯ ಪ್ರದೇಶದಲ್ಲಿ ಮನೆಯ ಒಳಗೆ ಪಟಾಕಿ ಸಿಡಿಸುವುದು ಹಿತ್ತಿಲಿಗೆ ಬೆಂಕಿ ಹಾಕುವುದು.ಎಡರಂಗ ಅಭ್ಯರ್ಥಿಯಾದವರ ಮೇಲೆ ಆಕ್ರಮಣ ನಡೆಸುವ ಈ ಚಟುವಟಿಕೆ ಮುಸ್ಲಿಂ ಲೀಗ್ ಗೂಂಡಾ ತಂಡವು ಹಿಂದೆ ಸರಿಯದಿದ್ದರೆ ಜನರನ್ನು ಸಂಘಟಿಸಿಕೊಂಡು ಪ್ರತಿಭಟಿಸಲಿದೆ ಎಂದು ಸಿಪಿಐಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ ಆರ್ ಜಯಾನಂದ ಹೇಳಿಕೆ ನೀಡಿದ್ದಾರೆ.

SHARE
Loading spinner

One thought on “ಯುಡಿಎಫ್ ನೇತೃತ್ವದ ಗೂಂಡಾ ತಂಡಗಳು ಎಡರಂಗದ ಕಾರ್ಯಕರ್ತರ ಮೇಲೆ ವಿನಃಕಾರಣ ಆಕ್ರಮಣ -ಕೆ ಆರ್ ಜಯಾನಂದ

Leave a Reply

Your email address will not be published. Required fields are marked *

error: Content is protected !!