ಮಂಜೇಶ್ವರ: ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ, ಆದಿಕ್ಷೇತ್ರ ಶ್ರೀ ರಕೇಶ್ವರೀ ದೇವಸ್ಥಾನ ಹೊಸಂಗಡಿ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ (ರಿ) ಕೊಂಡೆವೂರು ಮತ್ತು ಒನ್‌ಸೈಟ್ ಎಸ್ಪಿಲೋರ್ ಲಕೋಟಿಕಾ ಫೌಂಡೇಶನ್ ಬೆಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಂಗಳೂರು ಡಾ. ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ)ಇದರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶ್ರೀ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಪಾಡಿ, ಮಂಗಳೂರು ಇದರ ಸಹಯೋಗದಲ್ಲಿ ಉಚಿತ ಆಯುರ್ವೇದ ಶಿಬಿರವು ವಿ.ಹಿಂ.ಪ ಜಿಲ್ಲಾ ಕಾರ್ಯಾಲಯ “ಪ್ರೇರಣಾ” ಹೊಸಂಗಡಿಯಲ್ಲಿ ತಾರೀಕು 21. 12. 2025ನೇ ಆದಿತ್ಯವಾರರಂದು ನಡೆಯಿತು. .ಶ್ರೀ ನಿತ್ಯಾನಂದ ಯೋಗಶ್ರಮ ಕೊಂಡೆವೂರು ಮಠದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಅದಿಕ್ಷೇತ್ರ ರಕೇಶ್ವರೀ ದೇವಸ್ಥಾನ ಹೊಸಂಗಡಿಯ ಕಾರ್ಯಧ್ಯಕ್ಷರಾದ ಉದ್ಯಮಿ ಶ್ರೀ ಉಮೇಶ್ ಬೆಂಗಳೂರು ಅವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪ್ರಸಾದ್ ನೇತ್ರಾಲಯದ ವೈದ್ಯರಾದ ಡಾ| ಮೋಹನ್ ಅವರು ಉದ್ಘಾಟಿಸಿದರು.
ಶಾರದಾ ನೇತ್ರಾಲಯದ ಡಾ| ಕಾರ್ತಿಕ್, ಶಾರದಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆಸ್ಪತ್ರೆ ವೈದ್ಯರಾದ ಡಾ| ಸೌಮ್ಯ ಲಕ್ಷ್ಮಿ, ಮತ್ತು ಅಯ್ಯಪ್ಪ ಕ್ಷೇತ್ರ ಹೊಸಂಗಡಿಯ ಅಧ್ಯಕ್ಷರಾದ ಶ್ರೀ ನ್ಯಾಯವಾದಿ ನವೀನ್ ರಾಜ್ ಕೆ. ಜೆ, ಮುಖ್ಯ ಅತಿಥಿಗಳಾಗಿ ಉಪಸ್ತಿಸಿ ಇದ್ದರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಸಾದ್ ನೇತ್ರಾಲಯದ ವೈದ್ಯರಾದ ಡಾ| ಮೋಹನ್ ಅವರು ಮೊಬೈಲ್ ,ಕಂಪ್ಯೂಟರ್ ,ಲ್ಯಾಪ್ಟಾಪ್ ಗಳ ಅಮಿತ ಉಪಯೋಗವು ಈಗಿನ ಮಕ್ಕಳಲ್ಲಿ ಕಣ್ಣಿನ ತೊಂದರೆಗೆ ಕಾರಣವಾಗುತ್ತಿದೆ ಆದರಿಂದ ಮಕ್ಕಳಲ್ಲಿ ಆದಷ್ಟು ಹೊರಂಗದ ಕ್ರೀಡೆಯಲ್ಲಿ ತೊಡಗಿಸುವುದರಿಂದ ಸ್ವಲ್ಪ ಮಟ್ಟಿಗೆ ಮಕ್ಕಳಿಲ್ಲಿ ಕಾಣುವ ಕಣ್ಣಿನ ತೊಂದರೆಗಳನ್ನು ದೂರಮಾಡಬಹುದು ಮತ್ತು ಬಿ ಪಿ ಶುಗರ್ ಗಳಿಂದಲೂ ಕಣ್ಣಿನ ದೃಷ್ಟಿ ದೋಷಕ್ಕೆ ಕರಣವಾಗುತ್ತಿದ್ದು ಇಂತಹ ಕಾಯಿಲೆಗಳಿಂದ ಜಾಗರೂಕರಾಗಿದ್ದು ವೈದ್ಯರ ಸಲಹೆಯನ್ನು ಪಡೆದುಕೊಳ್ಳಿವುದು ಉತ್ತಮ ಎಂದರು.
ಆರೋಗ್ಯವಂತರ ಆರೋಗ್ಯವನ್ನು ಕಾಪಾಡೋದು ಆಯುರ್ವೇದ ಗುರಿ ,ಹಾಗೆ ಇಂದ್ರಿಯಗಳಲ್ಲಿ ಪ್ರಮುಖ ವಾದುದ್ದು ಕಣ್ಣು ಈ ಶಿಭಿರವು ಎರಡನ್ನು ಮಾಡುತ್ತಿದೆ,ಕಣ್ಣು ಮತ್ತು ದೇಹದ ಅರೋಗ್ಯ ಕಾಪಾಡುವ ಬಗ್ಗೆ ಮಾಹಿತಿಯನ್ನು ನೀಡಿ ಮಾನವರಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ನೀಡುತ್ತಿದೆ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಮತ್ತು ಕಾರ್ಯಕ್ರಮವನ್ನು ಅಮ್ಮಿ ಕೊಡವರಿಗೂ , ಸಹಕರಿಸಿದ ವೈದ್ಯರಿಗೂ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದರು.
ಶಿಬಿರದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಬಂಡ ಜನರು ತಮ್ಮ ಕಣ್ಣು ಮತ್ತು ದೇಹದ ಪರೀಕ್ಷೆ ಮಾಡಿ ಉಚಿತ ಸೇವೆಯನ್ನು ಸದುಪಯೋಗಗೊಳಿಸಿದರು.
What’s up guys? 16bet4 is a place I’d recommend checking out. They have a lot of variety and easy payment. If you are looking for a fun place to play, checkout 16bet4.