ಮಂಗಳೂರು: ಸಂತ್ರಸ್ತೆ ಪೂಜಾ ಆಚಾರ್ಯ ಪ್ರಕರಣ ಆಗುವ ಮೊದಲು ಜಗನ್ನಿವಾಸ್ ರಾವ್ ಪುತ್ತೂರು ನಗರಸಭಾ ಸದಸ್ಯರಾಗಿ ಕಾರ್ಯ ಚಟುವಟಿಯನ್ನು ನಡೆಸುತ್ತಿದ್ದರು . ಅವರನ್ನು ಈ ಪ್ರಕರಣ ನಡೆದ ಬಳಿಕ ಆ ಸ್ಥಾನದಿಂದ ಉಚ್ಚಾಟನೆಯನ್ನು ಮಾಡಲಾಗಿದೆ ಎಂದು ದ. ಕ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ .
ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಸಿದ ಅವರು , ಇದೀಗ ಅವರನ್ನು 100 ಶತಮಾನ ಪಕ್ಷದ ಚಟುವಟಿಗೆಗೆ ತೊಡಗಿಸಿಕೊಳ್ಳಲಿಲ್ಲ . , ಸಂತ್ರಸ್ತೆ ಪೂಜಾ ಆಚಾರ್ಯ ಜೊತೆ ಕೃಷ್ಣ ಜಿ ರಾವ್ ನ ವಿವಾಹವನ್ನು ಮಾಡಿಸದೇ ಇದ್ದರೆ ಪಕ್ಷದಿಂದ ಹೊರಹಾಕುವುದಾಗಿ ನೋಟೀಸನ್ನು ನೀಡಲಾಗಿತ್ತು . ಆಗ ಅವರು ಡಿ ಎನ್ ಎ ರಿಪೋರ್ಟ್ ನಲ್ಲಿ ಪಾಸೆಟಿವ್ ಬಂದರೆ ಮದುವೆ ಮಾಡಿಸಿ ಕೊಡುವುದಾಗಿ ನನಗೆ , ನನಗಿಂತ ಮೊದಲು ಪುತ್ತೂರಿನ ಸ್ಥಳೀಯ ಶಾಸಕರಿಗೆ ತಿಳಿಸಿದರು . ಆದರೆ ಮಗು ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ಎಂಬಾತನ ಮಗುವೆಂದು ಸಾಬೀತಾದ ಕೂಡಲೇ ಜಗನ್ನಿವಾಸ್ ರಾವ್ ಸತ್ಯ ಪ್ರಮಾಣವನ್ನು ಮುರಿದ್ದಿದ್ದಾರೆ. ವಿವಾಹವನ್ನು ಮಾಡಿಸಲು ಹಿಂದೇಟು ಹಾಕಿದ್ದಾರೆ . ಹೀಗಾಗಿ ನಮ್ಮ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ . ನಮ್ಮ ಪಕ್ಷ ಎಂದು ಸಂತ್ರಸ್ತೆ ಪೂಜಾ ಆಚಾರ್ಯರ ಮತ್ತು ಅವರ ಕುಟುಂಬದ ಪರವಾಗಿರುತ್ತದೆ ಎಂದು ತಿಳಿಸಿದರು .
ಈ ಸಮಯ ಬಿಜೆಪಿ ಮುಖಂಡರಾದ ಪ್ರೇಮಾನಂದ ಶೆಟ್ಟಿ , ಅರುಣ್ ಶೇಟ್ , ಸುನಿಲ್ ಆಳ್ವ , ವಸಂತ ಪೂಜಾರಿ ಉಪಸ್ಥಿತರಿದ್ದರು .