ಗುರುವಾಯೂರು ದೇವಸ್ವಂ ಆಡಿಟ್‌ನಲ್ಲಿ ಗಂಭೀರ ಲೋಪಗಳು: ಪಾರದರ್ಶಕತೆಗೆ ಹೈಕೋರ್ಟ್ ತೀವ್ರ ಅಸಮಾಧಾನ

ಗುರುವಾಯೂರು ದೇವಸ್ವಂನ ಆಡಿಟ್‌ನಲ್ಲಿ ಗಂಭೀರ ಲೋಪಗಳು ಕಂಡುಬಂದಿರುವುದಾಗಿ ಕೇರಳ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆನ್‌ಲೈನ್ ಸೇವೆಗಳು, ಡಿಜಿಟಲ್ ಹಣಕಾಸು ವ್ಯವಹಾರಗಳು ಹಾಗೂ ಮೌಲ್ಯಯುತ ಕಾಣಿಕೆಗಳ ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ಖಚಿತಪಡಿಸಲು ಪ್ರಸ್ತುತ ಇರುವ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ನ್ಯಾಯಾಲಯ ಟೀಕಿಸಿದೆ.

ಆಡಿಟ್‌ಗೆ ಅಗತ್ಯವಿರುವ ಮಾಹಿತಿಯನ್ನೇ ಒದಗಿಸಲಾಗಿಲ್ಲ ಎಂದು ನ್ಯಾಯಾಲಯ ಗಮನಿಸಿದ್ದು, ಕಳೆದ 43 ವರ್ಷಗಳಿಂದ ಮೌಲ್ಯಯುತ ವಸ್ತುಗಳ ವಾರ್ಷಿಕ ಭೌತಿಕ ಪರಿಶೀಲನೆ (Physical Verification) ನಡೆಸಿಲ್ಲ ಎಂಬುದನ್ನೂ ದಾಖಲಿಸಿದೆ.

ದೇವಸ್ವಂನ ಆಡಳಿತ ಮತ್ತು ಹಣಕಾಸು ವ್ಯವಸ್ಥೆಯನ್ನು ಸಮಗ್ರವಾಗಿ ಅಧ್ಯಯನ ಮಾಡಲು ತಜ್ಞ ಸಂಸ್ಥೆಗಳ ಸೇವೆ ಪಡೆಯುವಂತೆ ಹೈಕೋರ್ಟ್ ಸೂಚಿಸಿದೆ.

ಇದೇ ವೇಳೆ, ಆಡಿಟ್‌ನಲ್ಲಿ ಉಲ್ಲೇಖಿಸಲಾದ ಲೋಪಗಳು ಹಾಗೂ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರಿಸಲು ರಾಜ್ಯ ಆಡಿಟ್ ಇಲಾಖೆಯ ಗುರುವಾಯೂರು ದೇವಸ್ವಂ ಆಡಿಟ್‌ನ ಹೊಣೆಗಾರರಾದ ಹಿರಿಯ ಉಪನಿರ್ದೇಶಕರು (Senior Deputy Director) ನಾಳೆ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ಖುದ್ದಾಗಿ ಹಾಜರಾಗುವಂತೆ ಆದೇಶಿಸಲಾಗಿದೆ.

ಇದಲ್ಲದೆ, ಭಕ್ತರಿಂದ ಕಾಣಿಕೆಯಾಗಿಯಾಗಿ ಬಂದ ಚಿನ್ನ, ಬೆಳ್ಳಿ ಪಾತ್ರೆಗಳು ಹಾಗೂ ಕುಂಕುಮ ಸೇರಿದಂತೆ ಮೌಲ್ಯಯುತ ವಸ್ತುಗಳ ವಿವರಗಳನ್ನು ಸರಿಯಾದ ನೋಂದಣಿ ಪುಸ್ತಕದಲ್ಲಿ ದಾಖಲಿಸಿಲ್ಲ ಎಂದು ಆಡಿಟ್ ವರದಿ ಬಹಿರಂಗಪಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!