ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಪಂ.ನಲ್ಲಿ ಯುಡಿಎಫ್‌ನ ಸಯ್ಯದ್ ಸೈಫುಲ್ಲ ತಂಘಳ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಕಮಲಾಕ್ಷಿ ಕೆ. ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ.
ಬ್ಲೋಕ್ ಪಂಚಾಯತ್‌ನಲ್ಲಿ ಒಟ್ಟು 14 ವಾರ್ಡ್ ಇದ್ದು, IIರಲ್ಲಿ ಯುಡಿಎಫ್, 3ರಲ್ಲಿ ಬಿಜೆಪಿ, 2ರಲ್ಲಿ ಎಡರಂಗ ಜಯಗಳಿಸಿದೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಚಂದ್ರಾವತಿ ಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ರೈ ಸ್ಪರ್ಧಿಸಿದ್ದರು. ಎಡರಂಗದ ಸದಸ್ಯರ ಮತ ಅಧ್ಯಕ್ಷರ ಚುನಾವಣೆಯಲ್ಲಿ ಅಸಿಂಧುಗೊಂಡಿದ್ದು, ಉಪಾಧ್ಯಕ್ಷ ಚುನಾವಣೆಯಲ್ಲಿ ಇವರು ಹಾಜರಾಗಿರಲಿಲ್ಲ.