ಕಾಸರಗೋಡು ಕೋಟೆ, ಪಳ್ಳದ ಕೊಟ್ಯ ಧೂಮಾವತಿ ಉತ್ಸವ ಸಮಿತಿ ಸಭೆ ಸಂಪನ್ನ

ಕಾಸರಗೋಡು : ಕಾಸರಗೋಡು ಕೋಟೆ, ಪಳ್ಳದ ಕೊಟ್ಯ ದೂಮಾವತಿ ಉತ್ಸವ ಸಮಿತಿಯ ಉತ್ಸವ ಖರ್ಚು, ವೆಚ್ಚಗಳ ಹಾಗೂ ಸಮಿತಿ ವಾರ್ಷಿಕ ಸಭೆ ನಾಗರಕಟ್ಟೆಯ ಶ್ರೀ ಶಾರದಾ ಭಜನಾಶ್ರಮ ಪರಿಸರದಲ್ಲಿ ನಡೆಯಿತು. ಸಮಿತಿ ಅಧ್ಯಕ್ಷರಾದ ನವೀನ್ ನಾಯ್ಕ್ ಅದ್ಯಕ್ಷತೆಯಲ್ಲಿ ಖರ್ಚು, ವೆಚ್ಚಗಳ ಸಮೀಕ್ಷೆ ನಡೆಯಿಸಲಾಯಿತು. ಕೋಶಾಧಿಕಾರಿ ಕನ್ನಡ ಭವನದ ಡಾ ವಾಮನ್ ರಾವ್ ಬೇಕಲ್ ಆಯ -ವ್ಯಯ ಲೆಕ್ಕ ಪತ್ರ ಮಂಡಿಸಿ ಸರ್ವ ಸದಸ್ಯರ ಅಂಗೀಕಾರ ಪಡೆದರು. ಸಮಿತಿ ಯನ್ನು ಮುಂದಿನ ವರ್ಷಕ್ಕೆ ಮುಂದುವರೆಸಲು ಅಂಗೀಕರಿಸಲಾಯಿತು.

ಕೋಶಾಧಿಕಾರಿ ಲೆಕ್ಕ ಪತ್ರ ಪುಸ್ತಕವನ್ನು ಅಧ್ಯಕ್ಷರೀಗೆ ಹಸ್ತಾಂತರಿಸಿದರು. ಕಾರ್ಯದರ್ಶಿ ಮೋಹನ್ ದಾಸ್ ಕೊರಕೋಡು ಕಾರ್ಯಕ್ರಮ ನಿರ್ವಹಿಸಿದರು. ಉದಯ ನಾಗರಕಟ್ಟೆ ಕೇಶವ, ಸ್ವಾಗತಿಸಿ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!