ಕೆ ಎಸ್ ಆರ್ ಟಿ ಸಿ ಸೀಟ್ ಕಥೆ ವ್ಯಥೆ ….!

ಚುನಾವಣೆಯಲ್ಲಿ ಸೀಟ್ ಯಾರಿಗೆ ಸಿಗುತ್ತೆ ಅಂತ ಚಿಂತೆ ಆದ್ರೆ ನನಗೆ ಪಯಣಿಸುವಾಗ ಬಸ್ಸ್ ನಲ್ಲಿ ಒಂದು ಸೀಟ್ ಇದ್ರೆ ಸಾಕಪ್ಪ ಎನ್ನುವ ಚಿಂತೆ ಕಾಡುತಿತ್ತು . ಬಾಲ್ಯದಿಂದಲೂ ಕೇರಳದ ಕೆ ಎಸ್ ಆರ್ ಟಿ ಸಿ ಕಂಡರೆ ಬಲು ಮೆಚ್ಚುಗೆ . ದೀರ್ಘವಾದ ಅದರ ದೇಹ , ಟಿನ್ ಟಿನ್ ಮಾಡುವ ಅದರ ಬೆಲ್ಲು , ವೇಗವಾದ ಪ್ರಯಾಣ , ಮಳೆಯಲ್ಲಂತೂ ಬಸ್ಸ ಪಯಣ ಖುಷಿಯ ದಿಬ್ಬಣವನ್ನೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡು ಹೋಗುತ್ತದೆ .

ಅಜ್ಜಿ ಮನೆಗೆ ಹೋಗಲು ಕೆ ಎಸ್ ಆರ್ ಟಿ ಸಿ ಬಸ್ಸ ನ್ನೇ ಏರಬೇಕಿತ್ತು . ಬಸ್ಸ ಏರುತ್ತಿದ್ದ ನನಗೆ ಸೀಟ್ ಸಿಗುವುದೇ ಒಂದು ಅದೃಷ್ಟದ ಪರೀಕ್ಷೆ ಆಗಿತ್ತು . ಆದ್ರೆ ಆ ಒಂದು ಜಾಗದಲ್ಲಿ ಮಾತ್ರ ಸೀಟ್ ಹೆಚ್ಚಾಗಿ ಇದ್ದೇ ಇರುತ್ತಿತ್ತು . ಅದು ಯಾವುದೆಂದು ಅಂದು ಕೊಂಡ್ರಾ ?. ಅದು ಗೇರ್ ಬಾಕ್ಸ್ . ಹೌದು ಬಿಸಿಯಾದ ಆ ಗೇರ್ ಬಾಕ್ಸ್ ನಲ್ಲಿ ಕುಳಿತು ಕೊಳ್ಳದೇ ಬೇರೆ ವಿಧಿಯೇ ಇರುತ್ತಿರಲಿಲ್ಲ . ಚಿಕ್ಕ ಪ್ರಾಯದಲ್ಲಿ ವ್ಯಾಪಕವಾಗಿ ಕಾಡುತಿದ್ದ ಕಾಲು ನೋವು ಅಲ್ಲೇ ಕುಳಿತು ಕೊಳ್ಳುವಂತೆ ಮಾಡಿ ಬಿಡುತ್ತಿತ್ತು . ಅಲ್ಲೇ ಕೂತು ಡ್ರೈವರ್ ಅಣ್ಣ ನನ್ನು ನೋಡುತ್ತಾ ಕಿರು ನಗೆ ಚೆಲ್ಲುತಾ ದೊಡ್ಡದಾದ ಕನ್ನಡಿಯ ಮೂಲಕ ಹೊರ ನೋಟ ನೋಡಿದರೆ ಕೇರಳದ ಅಂಧ ಚಂಧ ಎಲ್ಲವು ಕಾಣುತಿತ್ತು . ಗುರು ಗುರು ಎನ್ನುವ ಬಸ್ಸ ದೊಡ್ಡದಾದ ಗುಡ್ಡವನ್ನು ಏರಲು ಹರಹಾಸವನ್ನೇ ಪಡುತ್ತಿತ್ತು .ಈಗಿನ ತರ ಇಲ್ಲದ ಮಾರ್ಗವು ದೇಹವನ್ನು ಗಡ ಗಡನೇ ನಡುಗಿಸುತಿತ್ತು . ಹಾಗೆ ಸಲ್ಪ ದೊಡ್ಡದಾದ ಮೇಲೆ , ಹಾಫ್ ಟಿಕೆಟ್ ನಿಂದ ಫುಲ್ ಟಿಕೆಟ್ ಪಡೆಯಲು ಪ್ರಾರಂಭಿಸಿದ್ದಾಗ ಆ ಗೇರ್ ಬಾಕ್ಸ್ ನಲ್ಲಿ ಕುಳಿತು ಕೊಳ್ಳುವ ಗೋಜಿಗೆ ಹೋಗದೆ ಸೀಟಿನಲ್ಲೇ ಕುಳಿತುಕೊಳ್ಳುತ್ತಿದೆ .


ಈ ಸಮಯದಲ್ಲೂ ಪಯಣಿಸುವಾಗ ಹೆಚ್ಚಿನ ಎಲ್ಲ ಸೀಟ್ ಗಳು ಭರ್ತಿ ಆಗ್ತಾ ಇತ್ತು ಆದ್ರೆ ಗೇರ್ ಬಾಕ್ಸ್ ಮತ್ತು ಡೋರ್ ಸೈಡ್ ಸೀಟ್ ಹೆಚ್ಚಾಗಿ ಖಾಲಿ ಉಳಿಯುತಿತ್ತು . ಹೆಚ್ಚಾಗಿ ಅಲ್ಲಿ ಕುಳಿತು ಕೊಳ್ಳಲು ಹಿಂದೆ ಮುಂದೆ ನೋಡ್ತಾ ಇದ್ರೂ ಪಯಣಿಗರು . ಯಾಕೆಂದರೆ ಪ್ರತೀ ನಿಲ್ದಾಣದಲ್ಲೂ ಆ ಡೋರನ್ನು ತೆರೆಯಬೇಕಿತ್ತು , ಮುಚ್ಚ ಬೇಕಿತ್ತು . ವಿಶೇಷ ಸಮಯದಲ್ಲಿ ವಿಶೇಷ ಅತಿಥಿಗಳ ಬಾಯಿಯಿಂದ ಶುಭ ನುಡಿಯನ್ನು ಕೇಳಬೇಕಿತ್ತು .

ಈ ಸೀಟ್ ನಲ್ಲಿ ಕಿರಿ ಕಿರಿ ಆಗುತ್ತೆ ಎಂದು ಹೆಚ್ಚಿನವರು ಅಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸ್ತಾ ಇದ್ರು ಕಾಣುತ್ತೆ . ಹಾಗಾಗಿ ಹೆಚ್ಚಾಗಿ ನನಗೆ ಹಿಂಬದಿಯ ಸೀಟ್ ಸಿಗುವುದು ಮಾಮೂಲಿ ಆಗಿ ಬಿಡುತ್ತಿತ್ತು . ಅದೊಂದು ಮಳೆಗಾಲದ ಸಮಯ ಡೋರ್ ಹಾಕುವ ಕೆಲಸ ನನಗಾಯಿತು . ಮಾದಕ ವ್ಯಸನಿಯೊಬ್ಬ ಬಸ್ಸ ಏರಿದ ಆದ್ರೆ ನಾನು ಪಕ್ಕನೆ ಹೊರಗೆ ಈತ ಬೀಳಬಾರರೆಂದು ಡೋರ್ ಹಾಕಿದೆ , ಕಂಡಕ್ಟರ್ ಟಿನ್ ಟಿನ್ ಎಂದು ಬೆಲ್ ಹೊಡೆದ . ವ್ಯಸನಿಯ ಪಂಚೆ ಡೋರ್ ಗೆ ಸಿಕ್ಕಿ ಹಾಕಿಕೊಂಡಿತ್ತು . ಅದು ಜಾರುವ ಹಾಗೆ ಆಯಿತು . ಇನ್ನೆನ್ನೂ ಜಾರುವಷ್ಟರಲ್ಲಿ ಕಂಡಕ್ಟರ್ ಸಮಯ ಪ್ರಜ್ಞೆ ಮೆರೆದು ಬೆಲ್ ಹೊಡೆದು ಬಸ್ಸ ನಿಲ್ಲಿಸಿದ. ಡೋರ್ ತೆರೆದು ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿದ ಪಂಚೆಯನ್ನು ಸರಿ ಮಾಡಿದ ಕುಡುಕನ ಕಣ್ಣಿಗೆ ಬಿದ್ದದ್ದು ನಾನು . ಆತ ಕಾಲು ಕೆರೆದು ಆತುರ ಕೆಟ್ಟವನಂತೆ ಜಗಳಕ್ಕೆ ಬಂದೇ ಬಿಟ್ಟ . ನಾನೋ ಸುಮ್ಮನಾದೆ . ಆ ಕುಡುಕ ಹೊರಗೆ ಬೀಳ ಬಾರದೆಂದು ಬಾಗಿಲು ಹಾಕಿದರೆ ಆತ ಅದನ್ನು ನೆನೆಯದೆ ಮನಸ್ಸಾರೆ ನಿಂದಿಸಲು ಶುರು ಮಾಡಿದ . ನಾನು ಆ ಕ್ಶಣ ಮಾತಾಡಿದ್ರೆ ಇನ್ನೊಂದು ಹನ್ನೊಂದು ಆಗುತ್ತೆ ಅಂತ ಸುಮ್ಮನಿದ್ದೆ . ಯಾಕೆಂದ್ರೆ ಮತಿಗೆ ಏರಿದ ಕುಡಿತದ ಅವಲಿನ ಮುಂದೆ ನನ್ನ ಮಾತು ಕೇವಲವಾಗುತಿತ್ತು . ಕುಡಿದು ಈ ರೀತಿ ಕೆಲವು ಬಾರಿ ಹಲವು ಸಾರಿ ಮತ್ತೊಬ್ಬರನ್ನು ಕಿರಿ ಕಿರಿ ಮಾಡಿರುವ ಪ್ರಸಂಗವನ್ನು ನಾನು ಕಣ್ಣಾರೆ ಕಂಡಿದ್ದೇನೆ . ಆ ಡೋರ್ ಸೀಟ್ ಆವತ್ತು ತಂದ ಸಂಕಷ್ಟ ಬಸ್ಸ್ ನಲ್ಲಿ ಪ್ರತೀ ಭಾರಿಯೂ ಪಯಣಿಸುವಾಗ ನೆನೆಯುವಂತೆ ಮಾಡಿ ಬಿಡುತ್ತೆ .

ಗಿರೀಶ್ ಪಿ ಎಂ
ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!