ಶ್ರೀ ಮಂಜುನಾಥನ ಹೆಸರಿನಲ್ಲಿ ನಡೆಯುತ್ತಿದೆಯಾ ಅವ್ಯವಹಾರ …… !

ಮಂಗಳೂರು: ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ-ಕರ್ನಾಟಕ ಮತ್ತು ನಾಗರಿಕ ಸೇವಾ ಟ್ರಸ್ಟ್ ನ ವತಿಯಿಂದ ಚಿಂತಕರು, ಸಾಹಿತಿಗಳಾದ ಲಕ್ಷ್ಮೀಶ ತೋಳ್ವಾಡಿ ನೇತ್ರಿತ್ವದಲ್ಲಿ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯು ನಡೆಯಿತು .

ಈ ಕುರಿತು ಮಾತನಾಡಿದ ಅವರು , ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಕುಟುಂಬ ಮತ್ತು ಹೆಗ್ಗಡೆಯವರು ಅಧ್ಯಕ್ಷರೂ ಫಲಾನುಭವಿಗಳೂ ಆಗಿರುವ ಅವರ ಸಂಸ್ಥೆಗಳು ದಶಕಗಳಿಂದ ಅವ್ಯಾಹತವಾಗಿ ನಡೆಸಿಕೊಂಡು ಬಂದಿರುವ ಮತ್ತು ನಡೆಸಿಕೊಂಡು ಬರುತ್ತಿರುವ ರಾಶಿ ರಾಶಿ ಅಪರಾಧಗಳ ಕುರಿತು ಸರ್ವಾಂಗೀಣವಾದ ತನಿಖೆಯೊಂದು ನಡೆಯಲೇಬೇಕಾದ ತುರ್ತು ಅಗತ್ಯವಿದೆ.

ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರು ಹೆಗ್ಗಡೆಯವರ ಕಾನೂನು ಉಲ್ಲಂಘನೆಗಳ ಸಮಗ್ರ ತನಿಖೆ ನಡೆಸಲು ಈ ಹಿಂದೆ ನಿರ್ದೇಶನ ನೀಡಿದ್ದರೂ ಈ ವರೆಗೆ ತನಿಖೆಯಾಗಿಲ್ಲ. ಕೇಂದ್ರ ಸರಕಾರದಿಂದ ರಾಜ್ಯ ಸಭಾ ಸದಸ್ಯರಾಗಿ ನೇಮಕಗೊಂಡ ಶ್ರೀ ವೀರೇಂದ್ರ ಹೆಗ್ಗಡೆಯವರ ಕಾನೂನುಬಾಹಿರ ಕೃತ್ಯಗಳ ಕುರಿತು ತನಿಖೆ ನಡೆಸಲು ಗೃಹಮಂತ್ರಿ ಅಮಿತ್ ಶಾರಿಗೆ ದಾಖಲೆ ಸಹಿತ ಮನವಿ ಮಾಡಿದ್ದೇವೆ . ಶೀಘ್ರವೇ ಈ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿ ಅದಕ್ಕೆ ನಿಗದಿತ ಕಾಲಮಿತಿಯನ್ನು ಸೂಚಿಸಿ ಶೀಘ್ರವಾಗಿ ಕಾರ್ಯಪ್ರವೃತ್ತರಾಗಬೇಕೆಂದು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳನ್ನು ನಾವು ಆಗ್ರಹಪಡಿಸುತ್ತಿದ್ದೇವೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ ಅಧ್ಯಕ್ಷರು, ರಾಷ್ಟ್ರೀಯ ವಿಚಾರವಾದಿಗಳ ಸಂಘಟನೆಗಳ ಒಕ್ಕೂಟದ ಡಾ। ನರೇಂದ್ರ ನಾಯಕ್ ಮಾತನಾಡಿ ,
ಸಾರ್ವಜನಿಕರಿಗೆ ಮೇಲ್ನೋಟದಲ್ಲಿಯೇ ಗಾಬರಿ ಹುಟ್ಟಿಸುವ ಅಳಕ್ಕೆ ಬಗೆದಷ್ಟು ಇನ್ನಷ್ಟು ಆಘಾತಕಾರಿಯಾದ ಹೆಗ್ಗಡೆಯವರು ನಡೆಸಿದ ಭೂಕೇಂದ್ರಿತ ಅಕ್ರಮಗಳು, ಆರ್ಥಿಕ ಅಪರಾಧಗಳು ಮತ್ತು ಕ್ರಿಮಿನಲ್ ಕೃತ್ಯುಗಳ ಕೆಲವು ವಿವರಗಳನ್ನು ಮಾತ್ರ ಅವಗಾಹನೆಗೆ ನೀಡುತ್ತಿದ್ದೇವೆ.
4 ಭೂಮಿಯನ್ನು ಹೆಗ್ಗಡೆ ಕುಟುಂಬದ ಆಸ್ತಿಯಾಗಿ ಪರಿವರ್ತಿಸಿದ್ದು, ಮಂಜುನಾಥಸ್ವಾಮಿ ಮತ್ತು ಅಣ್ಣಪ್ಪಸ್ವಾಮಿ ದೇಗುಲಗಳ ಅಡಿ 5 ಭೂ ನ್ಯಾಯ ಮಂಡಳಿಯ ಮುಂದೆ ಸುಳ್ಳು ಡಿಕ್ಟರೇಷನ್ ಕೊಟ್ಟು ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ ಪರಂಪರೆಯ 1050 ಎಕ್ರೆ ಸ್ಥಳಗಳು ಕೂಡ ವೀರೇಂದ್ರ ಹೆಗ್ಗಡೆ ಹೆಸರಿನಲ್ಲಿರುವಂತೆ ಮಾಡಿಕೊಂಡದ್ದು ವೀರೇಂದ್ರ ಹೆಗ್ಗಡೆಯ ತಮ್ಮನಾದ ಹರ್ಷೇಂದ್ರ ಕುಮಾರ್ ತಾನು ಭೂಮಿ ಇಲ್ಲದ ಬಡವನೆಂದೂ ತನ್ನ ವಾರ್ಷಿಕ ಆದಾಯ ಕೇವಲ 1200 ರೂಪಾಯಿಗಳೆಂದೂ ಅರ್ಜಿ ಗುಜರಾಯಿಸಿ ಕಂದಾಯ ಇಲಾಖೆಯಿಂದ 7.59 ಎಕ್ರೆ ಭೂಮಿಯನ್ನು ಪಡೆದದ್ದು: ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರ ಮನೋರಂಜನೆಗಾಗಿ ಹೂದೋಟ ಮತ್ತು ಮೃಗಾಲಯಗಳ ರಚನೆಗೆ ಎಂದು ಹೇಳಿ ಸರಕಾರದಿಂದ 14.65 ಎಕ್ರೆ ಭೂಮಿಯನ್ನು ಪಡೆದು, ಈ ಭೂ ಮಂಜೂರಾತಿಯ ಆದೇಶವನ್ನೆ ತಿದ್ದಿ. ಈ ಜಾಗದಲ್ಲಿ ಲಾಭದಾಯಕವಾದ ಪ್ರಕೃತಿ ಚಿಕಿತ್ಸಾಲಯವನ್ನು ನಿರ್ಮಿಸಿದ್ದು, 44 ಎಕ್ರೆ ಡಿ.ಸಿ. ಮನ್ನಾ ಭೂಮಿಯನ್ನು ತನ್ನ ಶಿಕ್ಷಣ ಸಂಸ್ಥೆಗೆ ಪಡೆದು ಕಾನೂನು ರೀತ್ಯಾ ಇದಕ್ಕೆ ಪರ್ಯಾಯ ಭೂಮಿಯನ್ನು ಕೊಡದೆ ದಲಿತರನ್ನು ವಂಚಿಸಿದ್ದು, ಶತಮಾನಗಳಿಂದ ದೇವಸ್ಥಾನದ ಸ್ವಚ್ಛತಾ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಾ ಬಂದ ದಲಿತ ಬಂದುಗಳಿಗೆ ಅವರು ವಾಸವಾಗಿರುವ ಮನೆಗಳ ಅಡಿಸ್ಥಳಗಳನ್ನು ಅವರ ಹೆಸರಿಗೆ ಮಾಡಿಕೊಡದಿರುವುದು, ತನ್ನ ಕ್ಷೇತ್ರದ ನೌಕರರಿಗೆ ಪ್ರಾವಿಡೆಂಟ್ ಫಂಡ್ ಕೊಡಲು ತಾನು ಬದ್ಧನಿಲ್ಲವೆಂದು ವಾದಿಸಿ ತನ್ನ ಕಾರ್ಮಿಕ ವಿರೋಧಿ ಧೋರಣೆಯನ್ನು ಬಹಿರಂಗಗೊಳಿಸಿದ್ದು,

ಈ ಮೇಲಿನ ವ್ಯಾಜ್ಯದಲ್ಲಿ ಉಚ್ಚ ನ್ಯಾಯಾಲಯದಿಂದ ಒಂದು ದೇವಸ್ಥಾನದ ಧರ್ಮಾಧಿಕಾರಿ ಎನ್ನಿಸಿಕೊಂಡ ಈ ವ್ಯಕ್ತಿಯು ನ್ಯಾಯಾಲಯಕ್ಕೆ ಶುದ್ಧಹಸ್ತರಾಗಿ ಬಂದಿಲ್ಲವೆಂದು ವಾಗ್ದಂಡನೆಗೆ ಒಳಗಾದದ್ದು. ನಾವು ಪ್ರಕಟಿಸಿದ 8 ಅಧ್ಯಾಯಗಳ 300 ಪುಟಗಳ ಬಯಲಾದ ಹೆಗ್ಗಡೆ ಕರ್ಮಕಾಂಡ ಎಂಬ ಹೊತ್ತಿಗೆಯಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಡೆಸಿದ ಭೂ ಕಬಳಿಕೆಗಳು, ಭೂ ಅತಿಕ್ರಮಗಳು. ಮೇಕ್ರೋಫೈನಾನ್ಸ್ ಬಡ್ಡಿ ದಂಧೆಗಳು, ಬೆಳ್ತಂಗಡಿ ಸಮಾಜ ಮಂದಿರದ ನಾಶ ಮತ್ತು ಒತ್ತುವರಿ, ಅನುದಾನಗಳ ದುರ್ಬಳಕೆ ಮತ್ತು ಶೋಷಣೆ, ವೀರೇಂದ್ರ ಹೆಗ್ಗಡೆ ವಾದಿ ಅಥವಾ ಪ್ರತಿವಾದಿಯಾಗಿರುವ 334 ಕೋರ್ಟ್ ಕೇಸುಗಳು ಇವೆಲ್ಲವುಗಳ ಸವಿವರ ದಾಖಲೆಗಳಿಂದ ಕೂಡಿದ ಚಿತ್ರಣವೇ ಇದೆ.

ಹೆಗ್ಗಡೆಯವರ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕ ಮತ್ತು ಬೋಧಕೇತರ S.C. ಮತ್ತು S.T ಸಿಬ್ಬಂದಿಗಳ ಅನುದಾನ-ದುರ್ಬಳಕೆಯಾಗಿದೆ. ಅನುದಾನದ ಶರ್ತಪ್ರಕಾರ 18% S.C./S.T ಗಳನ್ನು ನೇಮಕ ಮಾಡದೆ, ನೂರಾರು ಕೋಟಿ ದುರುಪಯೋಗ ಮಾಡಿದ್ದು ಇದು ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಮೇಲೆ ದೌರ್ಜನ್ಯ ಕಾಯ್ದೆಯ ವ್ಯಾಪ್ತಿಗೆ ಬರುವ ಗಂಭೀರ ಪ್ರಕರಣವಾಗಿದೆ.

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಳವನ್ನು The Institution at Dharmasthala ಎಂದು ಆದಾಯಕರ ಇಲಾಖೆಯಲ್ಲಿ ನೋಂದಣಿ ಮಾಡಿ, ಇದು “ಸಾರ್ವಜನಿಕ ದೇವಳ” ಎಂದು 100% ಆದಾಯಕರ ವಿನಾಯ್ತಿ ಪಡೆದಿದ್ದಾರೆ. ಆದರೆ ಧಾರ್ಮಿಕದತ್ತಿ ಆಯುಕ್ತರ ನಿರ್ದೇಶನದಂತೆ ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯ ಸೆ.53 ರಡಿ ನೋಂದಣಿ ಮಾಡಲು ವೀರೇಂದ್ರ ಹೆಗ್ಗಡೆಯವರು ನಿರಾಕರಿಸಿದ್ದು ವಿಪರ್ಯಾಸ! ಕಾನೂನು ಪ್ರಕಾರ ಈ ದೇವಳವನ್ನು ನೋಂದಣಿ ಮಾಡಿಸಲು ದ.ಕ. ಜಿಲ್ಲಾಧಿಕಾರಿಗಳು ಬದ್ಧರಾಗಿದ್ದು, ತಕ್ಷಣ ಕ್ರಮಕೈಗೊಳ್ಳಲು ಆಗ್ರಹಿಸುತ್ತೇವೆ. ಈ ನೋಂದಣಿಯಿಂದ ಈಗ ಗೌಪ್ಯವಾಗಿರುವ ದೇವಳದ ಲೆಕ್ಕಪತ್ರ. ಆಸ್ತಿ ಬಹಿರಂಗವಾಗುತ್ತದೆ. ದೇವಳದ ಆಡಳಿತ ಸರಕಾರಕ್ಕೆ ಹೋಗುವುದಿಲ್ಲ.

ಹೆಣ್ಣು ಮಕ್ಕಳ ಮೇಲೆ ಧರ್ಮಸ್ಥಳದಲ್ಲಿ ನಿರಂತರ ದೌರ್ಜನ್ಯ ನಡೆದಿದೆ. ವೇದವಲ್ಲಿ, ಪದ್ಮಲತಾ. ಯಮುನಾ ಮತ್ತು ನಾರಾಯಣ, ಸೌಜನ್ಯ ಇನ್ನೂ ಅದೆಷ್ಟೋ ಹೆಸರಿಲ್ಲದ ಬಾಲೆಯರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣಗಳು! ಆದರೆ ಅಪರಾಧಿಗಳು ಪತ್ತೆಯಾಗುವುದಿಲ್ಲ. ನ್ಯಾಯ ತೀರ್ಮಾನ ನಡೆಯುವ ಜಾಗವೆಂದು ರಾಜಕಾರಣಿಗಳು ಕೊಂಡಾಡುವ ಧರ್ಮಸ್ಥಳದಲ್ಲಿ ಹೇಯ ಕೃತ್ಯಗಳು ನಿರಂತರ ನಡೆದರೂ ಅಪರಾಧಿಗಳು ಪತ್ತೆಯೇ ಆಗುವುದಿಲ್ಲ.ನಾವು ನೊಂದವರು ನಮಗೆ ನ್ಯಾಯ ಬೇಕೆನ್ನುವುದೇ ಅಪರಾಧವೇ?
ಆದ್ದರಿಂದ ಹತ್ಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ SIT ರಚನೆಯನ್ನು ಹೃತೂರ್ವಕಾಗಿ ಸ್ವಾಗತಿಸುತ್ತಾ, ಸಮಗ್ರವಾದ ತನಿಖೆಯು ಶೀಘ್ರವಾಗಿ ಆಗಬೇಕೆಂದು ಅವರು ಆಗ್ರಹಿಸಿದರು .ನಾಗರಿಕ ಸೇವಾ ಟ್ರಸ್ಟ್ ಅದ್ಯಕ್ಷರರಾದ ಕೆ. ಸೋಮನಾಥ ನಾಯಕ್ , ರಂಜನ್ ರಾವ್ ಯರ್ಡೂರ್ , ಕೆ. ವಿಶ್ವನಾಥ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!