ಅಚ್ಚಳಿಯದೆ ಮಾಸದಂತ ನೆನಪು

ಅಚ್ಚಳಿಯದೆ ಮಾಸದಂತ ನೆನಪುಗಳಿತ್ತು
ಅಲ್ಲಿ ಸಾವಿರಾರು ಅಪರೂಪದ ಕ್ಷಣಗಳಿತ್ತು
ಅದೇ ಶಾಲಾ ಜೀವನವಾಗಿತ್ತು…
ಸಾಲು ಸಾಲು ಕಂಬಗಳಲ್ಲಿ
ಅಡಗಿ ನಿಂತು ಕಣ್ಣಾ ಮುಚ್ಚಾಲೆ
ಆಡೋ ಆಟವಿತ್ತು.
ಸ್ನೇಹಿತರ ಪರಿಚಯವೇ
ಅಲ್ಲೇ ಶುರುವಾಗಿತ್ತು.
ಮೊದಲ ಬೆಂಚಿಯಲ್ಲಿ ಕುಳಿತ ನಮಗೆ
ಮನದಲ್ಲಿ ಸಂತಸವಿತ್ತು
ಅದೇ ಕೊನೆಯ ಬೆಂಚಿಯಲ್ಲಿ ಕುಳಿತವರ ನೋಡಿ
ಹಾಸ್ಯದಿಂದ ನಗುವುದಿತ್ತು
ಕಪ್ಪು ಗೋಡೆಯಲ್ಲೇ ಗೀಚಿದ
ಎಷ್ಟೋ ಬರಹಗಳಿದ್ದವು..
ಗೋಡೆಯಲ್ಲಿ ತೂಗಡಿಸಿದ ಸ್ವಾತಂತ್ರ ಹೋರಾಟಗಾರರ
ಮತ್ತು ಸಾಧಕರ ಭಾವಚಿತ್ರವಿತ್ತು
ಇಂದಿಗೂ ನನ್ನೀ ಚಿತ್ತ ಕ್ಕೆ ದೇಶ ಪ್ರೇಮವ ಸಾರುತಿದೆ
ಗಣಿತ ಅಗಣಿತದ ಪಾಠ ಕುತೋಹಲವಿತ್ತು
ಕನ್ನಡ ಪಾಠದ ಕಥಾಭಾಗ ಕೇಳಲು ಖುಷಿಯಿತ್ತು
ಸಮಾಜ ಪಾಠ ಕೇಳಿ ಕೇಳಿ
ಕಣ್ಣು ತೂಕಾಡಿಸುವುದಿತ್ತು
ವಿಜ್ಞಾನ ಪಾಠ ಕ್ಕಿಂತ ಪ್ರಯೋಗಗಳ
ಮೇಲೆ ಆಸಕ್ತಿ ಜಾಸ್ತಿಯಿತ್ತು
ಇಂಗ್ಲಿಷ್ ಪಾಠದಲ್ಲಿ
ಗ್ಲಾಮರ್ ಮಿಸ್ಟೇಕ್ ತುಂಬಾ ಇತ್ತು
ಹಿಂದಿ ಪಾಠವು ತಲೆಗೆ ಬೇಗ ಹೊಕ್ಕುತಿತ್ತು
ವಿದ್ಯಾ ಕಲಿಸಿ ಕೊಟ್ಟ ಗುರುಗಳ
ಸಾಧನೆ ಅಪಾರವಿತ್ತು
ಅಂದು ಕಲಿತ ಕಾರಣ ಇಂದು ನಮ್ಮ ಕಾಲಲ್ಲಿ
ನಾವು ನಿಲ್ಲುವಂತಾಯಿತು.

ಬರವಣಿಗೆ-ರಶ್ಮಿತಾ ಆಚಾರ್ಯ ಹೊಸಂಗಡಿ

SHARE
Loading spinner

Leave a Reply

Your email address will not be published. Required fields are marked *

error: Content is protected !!