ದೇಶ ಕಂಡ ಅಪರೂಪದ ಮತ್ತು ವಿಶಿಷ್ಟ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ ವಿ ಎಸ್ ಎಂದೇ ಖ್ಯಾತರಾದ ವೇಲಿಕ್ಕತ್ತು ಶೇಖರನ್ ಅಚ್ಚುತಾನಂದನ್.
1923 ಒಕ್ಟೋಬರ್ 20 ಅಲಪ್ಪುಳ ಜಿಲ್ಲೆಯ ಪುನ್ನಪ್ಪುರದ ಶಂಕರನ್ ಮತ್ತು ಅಕ್ಕಮ್ಮ ದಂಪತಿಗಳ ಪುತ್ರನಾಗಿ ಜನಿಸಿ ,ಕೃಷಿಕರ ಮತ್ತು ಶೋಷಿತ ವರ್ಗದ ಜನರ ಧ್ವನಿಯಾಗಿ ಜನಾನುರಾಗಿ ದೇಶದಲ್ಲೇ ಅತಿ ಹಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.ತನ್ನ ನಾಲ್ಕನೇ ವಯಸ್ಸಿನಲ್ಲಿ ತಾಯಿಯನ್ನು ಏಳನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಸಹೋದರನಾದ ಗಂಗಾಧರನ್ ನವರ ಟೈಲರಿಂಗ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು.ತಂದೆ ತಾಯಿಯನ್ನು ಕಳೆದುಕೊಂಡು ತೀರಾ ಕಾಡು ಬಡತನದಲ್ಲಿ ಇದ್ದ ಕಾರಣ ಶಿಕ್ಷಣವನ್ನು ಮುಂದುವರಿಸಲಾಗದೆ ಕೇವಲ ಏಳನೇ ತರಗತಿವರೆಗೆ ಕಲಿಯಬೇಕಾಯಿತು .ನಂತರ ಅಶ್ವಿನ್ ವಾಲಾ ಎಂಬ ಹುರಿಹಗ್ಗ ತಯಾರಿಯ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದರು .ಈ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ವಹಿಸಿದ ಇವರಿಗೆ ಎಡ ಪಂಕ್ತಿಯ ಚಿಂತನೆಗಾರ ಹುಟ್ಟು ಹೋರಾಟದ ವಿಶಿಷ್ಟ ರಾಜಕಾರಣಿ ಕೃಷ್ಣಪಿಳ್ಳೆ ಪರಿಚಯವಾದರು . ಇವರು ವಿ ಎಸ್ ಅವರನ್ನು ರಾಜಕೀಯಕ್ಕೆ ಕರೆತಂದರು .1940 ರಲ್ಲಿ ಕುಟ್ಟನಾಡಿನಲ್ಲಿ ಕೃಷಿಕರನ್ನು ಬೃಹತ್ ಸಂಖ್ಯೆಯಲ್ಲಿ ಒಟ್ಟುಗೂಡಿಸುವ ಜವಾಬ್ದಾರಿಯನ್ನು ವಿ ಎಸ್ ಅವರಿಗೆ ನೀಡಲಾಯಿತು .ಕಾರ್ಮಿಕ ಸಂಘಟನೆಗಳನ್ನು ಸಕ್ರಿಯರಾದ ವಿ ಎಸ್ ರವರನ್ನು ಕಾರ್ಮಿಕ ಸಂಘದ ನಾಯಕರನ್ನು ,ಕಾರ್ಮಿಕರನ್ನು ಒಟ್ಟು ಗೂಡಿಸಲು ವಿ ಎಸ್ ರವರಿಗೆ ಕೃಷ್ಣ ಪಿಳ್ಳೆ ಯವರು ಜವಾಬ್ದಾರಿ ನೀಡಿದರು.
ಜಮ್ಮಿನುದಾರರ ಮತ್ತು ಭೂ ಹಿಡುವಳಿದಾರರ ಏಕಾಧಿಪತ್ಯ ನಡೆಯುತ್ತಿದ್ದ ಸಂಧರ್ಭದಲ್ಲಿ ಶೋಷಿತ ವರ್ಗ ,ಕೃಷಿಕರನ್ನು,ಕಾರ್ಮಿಕರನ್ನು ಒಟ್ಟು ಗೂಡಿಸುವಲ್ಲಿ ವಿ ಎಸ್ ಯಶಸ್ವಿಯಾದರು.ಉತ್ತಮ ಜೀವನ ನಿರ್ವಹಣೆಗೆ ಬೇಕಾದ ಎಲ್ಲಾ ಮಾರ್ಗದರ್ಶನ ನೀಡುತ್ತಿದ್ದ ಕೃಷ್ಣ ಪಿಳ್ಳೆಯವರ ಮಾತನ್ನು ಅಕ್ಷರಶ ವಿ ಎಸ್ ಪಾಲಿಸುತ್ತಿದ್ದರು.ವಿ ಎಸ್ ರವರ ನಿರಂತರ ಹೋರಾಟದಿಂದ ಕೆಲಸಗಾರರಿಗೆ ಸರಿಯಾದ ವೇತನ ಹಾಗೂ ಇತರ ಸೌಲಭ್ಯಗಳು ದೊರಕುವಂತಾಯಿತು.ಪುನ್ನಪ್ರದಲ್ಲಿ ನಡೆದ ಪಕ್ಷದ ವಿವಿಧ ತರಬೇತಿ ಶಿಬಿರಗಳಿಗೆ ಇವರು ನೇತೃತ್ವ ನೀಡಿದರು.300 ರಿಂದ 400 ರಷ್ಟು ಇರುವ ವೊಲಿಎಂಟರ್ ಕ್ಯಾಂಪುಗಳನ್ನು ಇವರೇ ನಡೆಸುತ್ತಿದ್ದರು.1940 ರಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರಾದರು.ಕೃಷಿಕರು ಹಾಗೂ ಶ್ರಮಿಕ ವರ್ಗದವರಿಗೆ ಹೋರಾಟ ಮಾಡಿ ಹಲವು ಭಾರಿ ಜೈಲು ವಾಸ ಮಾಡಿದರು.1940 -1980 ರ ಮದ್ಯೆ 40 ವರ್ಷಗಳಲ್ಲಿ 5 ವರ್ಷ 8 ತಿಂಗಳು ಜೈಲು ವಾಸ ಅನುಭವಿಸಿದರು.1952 ರಲ್ಲಿ ಪಕ್ಷದ ಅಲಪ್ಪುಳ ಡಿವಿಷನ್ ಸೆಕ್ರೇಟರಿಯಾಗಿ ,1957 ರಾಜ್ಯ ಕಮ್ಯುನಿಸ್ಟ್ ನ ಸೆಕ್ರೇಟರಿಯಾಗಿ ,ಪೊಲಿಟ್ ಬ್ಯುರೋ ಸದಸ್ಯರಾದರು.
ವಿ ಎಸ್ ರವರ ಸಂಘಟನಾ ಸಾಮರ್ಥ್ಯವನ್ನು ಅರಿತ ಪಕ್ಷವು ಇವರಿಗೆ ಕೆಲವು ಮಹತ್ವದ ಜವಾಬ್ದಾರಿಗಳನ್ನು ನೀಡಿತು. 1967 ಜುಲೈ 18 ರಂದು ಅಳ್ಳ ಪುಳ್ಳ ಜಿಲ್ಲೆಯ ಮುಕ್ಕಿ ಕಲ್ ನಲ್ಲಿ ವಸುಮತಿ ಎಂಬವರನ್ನು ಮದುವೆಯಾದರು. ವಧು ವರರು ಕೇವಲ ಹಾರ ಬದಲಾವಣೆ ಮಾಡುವುದು ಮಾತ್ರ ಇವರ ಮದುವೆಯ ಸಂಭ್ರಮವಾಗಿತ್ತು ಯಾಕೆಂದರೆ ಆ ಸಮಯದಲ್ಲಿ ಇವರಿಗೆ ಅತೀವ ಬಡತನ ಕಾಡುತ್ತಿತ್ತು. ಮದುವೆಯಾದ ನವ ವಧುವರರು ಬಾಡಿಗೆ ಮನೆಯಲ್ಲಿ ತನ್ನ ಜೀವನ ನಡೆಸಿದರು. 1967 ರಲ್ಲಿ ಕಮ್ಯುನಿಸ್ಟ್ ಪಕ್ಷದೊಂದಿಗೆ ಭಿನ್ನಾಭಿಪ್ರಾಯ ಹೊಂದಿ ಪಕ್ಷದಿಂದ ಹೊರ ಬಂದ CPIM ನ 37 ಜನರಲ್ಲಿ ವಿ ಎಸ್ ಒಬ್ಬರಾಗಿದ್ದರು.1965 ರಲ್ಲಿ ಮೊಟ್ಟಮೊದಲಾಗಿ ವಿಧಾನ ಸಭೆಗೆ ಸ್ಪರ್ಧಿಸಿ ಕಾಂಗ್ರೆಸ್ಸಿನ ಕೃಷ್ಣ ಕುರುಪ್ ರವರ ಎದುರು ಸೋಲು ಕಂಡರು. 1967 ರಲ್ಲಿ ಅಂಬಲಪುರದಿಂದ ವಿಧಾನಸಭೆಗೆ ಪ್ರವೇಶಿಸಿದರು.
ಪುನಪ್ರ ವಯಲಾರ್ ಪ್ರಕರಣದಲ್ಲಿ 3 ವರ್ಷ ಜೈಲುವಾಸ ಅನುಭವಿಸಿದರು. 1975 ರ ತುರ್ತು ಪರಿಸ್ಥಿತಿ ಸಮಯದಲ್ಲಿ 20 ತಿಂಗಳು ಜೈಲ್ ವಾಸ ಅನುಭವಿಸಿದರು.1977 ರಲ್ಲಿ ಅಂಬಲಪುರದಲ್ಲಿ RSP ಪಕ್ಷದ ಕುಮಾರ ಪಿಳ್ಳೆ ಸೋಲು ಕಂಡರು. 1980-1992 ರ ಮದ್ಯೆ 12 ವರ್ಷ ಪಕ್ಷದ ರಾಜ್ಯ ಸೆಕ್ರೆಟರಿ, 1991 ರಲ್ಲಿ ಪಾಲಿಟ್ ಬ್ಯೂರೋ ಸದಸ್ಯರಾದರು. 1991 ರ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದರು. 1996 ರಲ್ಲಿ ಮಾರಾರಿಕುಳ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡರು. ಈ ಸೋಲಿಗೆ ಸ್ವಪಕ್ಷೀಯರೇ ಕಾರಣವೆಂದು ಬಾರಿ ವಿವಾದ ಉಂಟಾಗಿತ್ತು. ಪಕ್ಷದಲ್ಲಿ ಇವರ ಏಳಿಗೆಯನ್ನು ಸಹಿಸದ ಕೆಲವರು ಉದ್ದೇಶಪೂರ್ವಕವಾಗಿ ಪಕ್ಷ ವಿರೋಧಿ ಚಟುವಟಿಕೆಯ ಮೂಲಕ ಪಿಎಸ್ ರವರ ಸೋಲಿಗೆ ಕಾರಣ ವೆಂದು ಈ ಸಮಯದಲ್ಲಿ ಭಾರಿ ಸುದ್ದಿ ಮಾಡಿತ್ತು. ಆದರೆ ಈ ಸೋಲಿನಿಂದ ವಿ. ಎಸ್. ಮತಷ್ಟು ಬಲಿಷ್ಠ ರಾಗಿ 2001 ರ ಚುನಾವಣೆ ಯಲ್ಲಿ ಮೇಲಂಬೂಲ ಕ್ಷೇತ್ರದಲ್ಲಿ ವಿಜಯ ರಾಗಿ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರ ದರು. 2006 ರ ವಿಧಾನಸಭಾ ಚುನಾವಣೆ ಯಲ್ಲಿ ಭಾರಿ ಬಹುಮತ ದೊಂದಿಗೆ ವಿಜಯ್ಯಾಗಿ ಕೇರಳದ 20 ನೇ ಮುಖ್ಯಮಂತ್ರಿಯಾದರು. 2011 ರ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಪುನ ವಿಜಯಿ ಯಾಗಿ ವಿರೋಧ ಪಕ್ಷ ದ ನಾಯಕ ರದರು. ಪಕ್ಷ ದ ಕೆಲ ಪತ್ರಿಕೆಗಳಲ್ಲಿ ಎಡಪಂಥೀಯ ಚಿಂತನೆಗಳ ಸಂಪಾದಕರಾಗಿ ಜವಾಬ್ದಾರಿ ನಿರ್ವಹಿಸಿದರು. ತನ್ನ 87ನೇ ವಯಸ್ಸಿನಲ್ಲಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದಾಗ, ದೇಶದ ಹಿರಿಯ ಮುಖ್ಯಮಂತ್ರಿಗಳು ಎಂಬ ಖ್ಯಾತಿ ಹೊಂದಿದ್ದರು.
ಕೃಷಿಕರ ಹಕ್ಕು, ಪಹಣಿ ಪತ್ರ ಪಡೆಯುವಿಕೆ, ಕೃಷಿ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತು ಇವೆಲ್ಲದರ ಬಗ್ಗೆ ವಿ. ಎಸ್ ರವರು ಹೋರಾಟ ದ ಮುಂಚೂಣಿಯಲ್ಲಿದ್ದರು. 2011 ರಲ್ಲಿ ಸ್ವಪಕಿಯರೇ ಇವರಿಗೆ ವಿರುದ್ಧವಾಗಿದ್ದರು ಕೇಂದ್ರ ನಾಯಕರು ಇವರಿಗೆ ಪೂರಕವಾಗಿದ್ದರು ಪೂರಕ ವಾಗಿದ್ದರು. ಸುಮಾರು 13 ವರ್ಷ ಇವರು ವಿರೋಧ ಪಕ್ಷದ ನಾಯಕರಾಗಿದ್ದರು.
✍️SURESH MANGALPADY