ಜನಾರ್ದನ ಚೆಂಡ್ತಿಮಾರ್ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಂತಾಪ

ಮಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಂದಾಳು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಬಂಟ್ವಾಳ ಪುರಸಭೆ ಸದಸ್ಯ ಜನಾರ್ದನ ಚೆಂಡ್ತಿಮಾರ್ ಅವರ ನಿಧನಕ್ಕೆ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ಸೂಚಿಸಿದೆ.

ಜನಾರ್ದನ ಚೆಂಡ್ತಿಮಾರ್ ಅವರ ನಿಧನದಿಂದ ಜಿಲ್ಲಾ ಕಾಂಗ್ರೆಸ್ ಆಘಾತಕ್ಕೊಳಗಾಗಿದೆ. ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮುಖ ರಾಜಕಾರಣಿಗಳಿಗೆ ಮಾದರಿಯಾಗಿದ್ದರು. ಜನಪರ, ಜೀವಪರ ಚಳವಳಿಗಳಲ್ಲಿ ಭಾಗಿಯಾಗುತ್ತಾ ಜನಸಾಮಾನ್ಯರ ಧ್ವನಿಯಾಗಿದ್ದರು. ರಾಜಕೀಯದ ಜೊತೆಗೆ ಸಾಮಾಜಿಕ ಸೇವೆಯೂ ಅನುಪಮವಾದುದು.

ಭ್ರಷ್ಟಾಚಾರ ರಹಿತ ನಾಯಕರಾಗಿದ್ದ ಅವರ ಸಾರ್ಥಕ ಬದುಕು ಆದರ್ಶಪ್ರಾಯ. ಅವರ ಅಗಲಿಕೆ ಜಿಲ್ಲಾ ಕಾಂಗ್ರೆಸ್ ಗೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ, ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಶಾಸಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಗಂಗಾಧರ್ ಗೌಡ, ಶಾಸಕರಾದ ಅಶೋಕ್ ಕುಮಾರ್ ರೈ, ಐವನ್ ಡಿಸೋಜ, ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ, ಎನ್.ಎಂ.ಅಡ್ಯಂತಾಯ, ಮೊಹಮ್ಮದ್ ಮಸೂದ್, ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ, ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್, ಪದ್ಮರಾಜ್ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಸ್.ಮೊಹಮ್ಮದ್, ಜಿ.ಎ.ಬಾವ, ಮಿಥುನ್ ರೈ, ರಕ್ಷಿತ್ ಶಿವರಾಂ, ಇನಾಯತ್ ಅಲಿ, ಟಿ.ಎಂ.ಶಹೀದ್, ಲಾವಣ್ಯ ಬಳ್ಳಾಲ್, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಬಿ.ಎಚ್.ಖಾದರ್, ಶಶಿಧರ್ ಹೆಗ್ಡೆ, ಯು.ಕೆ.ಮೋನು, ಸುರೇಶ್ ಬಳ್ಳಾಲ್, ಸದಾಶಿವ್ ಉಳ್ಳಾಲ್, ಕೆ.ಹರಿನಾಥ್, ಹಾಜಿ ಟಿ.ಎಸ್. ಅಬ್ದುಲ್ಲಾ, ಮಮತಾ ಗಟ್ಟಿ, ಜಿ.ಕೃಷ್ಣಪ್ಪ, ಭರತ್ ಮುಂಡೋಡಿ, ಹೇಮನಾಥ ಶೆಟ್ಟಿ ಕಾವು, ಅಶ್ವಿನ್ ಕುಮಾರ್ ರೈ, ಸುರೇಂದ್ರ ಕಂಬಳಿ, ಮಹಾಬಲ ಮಾರ್ಲ, ವೆಂಕಪ್ಪ ಗೌಡ, ಮಲಾರ್ ಮೋನು, ಚಂದ್ರಹಾಸ ಕರ್ಕೇರ, ಟಿ.ಹೊನ್ನಯ್ಯ, ಸುಧೀರ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ನೀರಜ್ ಚಂದ್ರಪಾಲ್, ವಿಕಾಸ್ ಶಟ್ಟಿ, ನಝೀರ್ ಬಜಾಲ್, ಪ್ರತಿಭಾ ಕುಳಾಯಿ, ಶಬ್ಬೀರ್ ಸಿದ್ದಕಟ್ಟೆ, ಪ್ರೇಮನಾಥ್ ಬಳ್ಳಾಲ್ ಭಾಗ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ, ಪುರುರೋಷತ್ತಮ ಚಿತ್ರಾಪುರ, ಪ್ರಕಾಶ್ ಸಾಲ್ಯಾನ್, ಜೆ.ಅಬ್ದುಲ್ ಸಲೀಂ, ರಮೇಶ್ ಶೆಟ್ಟಿ ಬೋಲಿಯಾರ್, ಪ್ರಶಾಂತ್ ಕಾಜೆವ, ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್ ಗೌಡ, ಕೃಷ್ಣ ಪ್ರಸಾದ್ ಆಳ್ವ, ಪದ್ಮನಾಭ ಪೂಜಾರಿ, ಪಿ.ಮೋಹನ್ ಕೋಟ್ಯಾನ್, ಪ್ರವೀಣ್ ಕುಮಾರ್ ಜೈನ್, ಪಿ.ಕೆ.ಅಭಿಲಾಷ್, ಯು.ಟಿ. ತೌಸೀಫ್, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಇಬ್ರಾಹೀಂ ನವಾಝ್, ಶಾಲೆಟ್ ಪಿಂಟೋ, ಜೋಕಿಂ ಡಿಸೋಜಾ, ಕೆ.ಕೆ.ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ದಿನೇಶ್ ಮುಳೂರು, ನಾರಾಯಣ ನಾಯ್ಕ್, ಮನೋರಾಜ್ ರಾಜೀವ, ಲಾರೆನ್ಸ್ ಡಿ’ಸೋಜಾ, ಡಾ.ಶೇಖರ್ ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ ಕುಲಾಲು, ಬಿ.ಎಂ.ಅಬ್ಬಾಸ್ ಅಲಿ, ಚೇತನ್ ಬೆಂಗ್ರೆ, ಶೈಲಜಾ, ಸುದರ್ಶನ್ ಜೈನ್, ಅಲಿಸ್ಟರ್ ಡಿಕುನ್ಹ, ಉಲ್ಲಾಸ್ ಕೋಟ್ಯಾನ್, ಸುಹಾನ್ ಆಳ್ವ, ಕೆಪಿಸಿಸಿ ಸದಸ್ಯರಾದ ಸದಾಶಿವ ಶೆಟ್ಟಿ, ಆರ್.ಕೆ.ಪೃಥ್ವಿರಾಜ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ವಸಂತ್ ಬೆರ್ನಾಡ್, ಫಾರೂಕ್ ಪುದು, ಕೆ.ಅಪ್ಪಿ, ಪಿಯೂಸ್ ರೋಡ್ರಿಗಸ್, ಸತೀಶ್ ಕೆಡಿಂಜೆ, ಮೋಹನ್ ಶೆಟ್ಟಿಗಾರ್, ಕೇಶವ ಗೌಡ, ಚಂದ್ರಹಾಸ ಸನೀಲ್, ಕೌಶಲ್ ಪ್ರಸಾದ್ ಶೆಟ್ಟಿ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಸಂಪಾತ ಸೂಚಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!