Avatar

NAMMA MEDIA 24X7

ವಿಷ ಸೇವಿಸಿ ಚಿಕಿತ್ಸೆಗೊಳಗಾಗಿದ್ದ ಯುವಕ ಸಾವು

ಮಂಜೇಶ್ವರ: ವಿಷ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಚಿಕಿತ್ಸೆಗೂ ಸ್ಪಂದಿಸದೆ ಸಾವನ್ನಪ್ಪಿರುವ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ತಲಪಾಡಿ ಮರಿಯಾಶ್ರಮ ಚರ್ಚ್ ಕಂಪೌಂಡ್ ಸಮೀಪದ ನಿವಾಸಿ ಅಶೋಕ ಕ್ರಾಸ್ತ (32) ಮೃತ ದುರ್ದೈವಿ. ಮಂಗಳೂರಿನ ಅಂಗಡಿಯೊಂದರಲ್ಲಿ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಅವಿವಾಹಿತರಾದ ಅಶೋಕ ಕ್ರಾಸ್ತ ಅವರು ಜನವರಿ 31ರಂದು ರಾತ್ರಿ ಸುಮಾರು 8 ಗಂಟೆಗೆ ತಮ್ಮ ನಿವಾಸದಲ್ಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇದೀಗ ಸಾವು ಸಂಭವಿಸಿದೆ….

Read More

ಮಣ್ಣಂಗುಝಿಯಲ್ಲಿ ಭೀಕರ ರಸ್ತೆ ಅಪಘಾತ-ನಾಲ್ವರು ಯುವಕರಿಗೆ ಗಾಯ

ಉಪ್ಪಳ : ಉಪ್ಪಳ ಮಣ್ಣಂಗುಝಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಗಾಯಗೊಂಡಿದ್ದಾರೆ. ಮಣ್ಣಂಗುಝಿ ಪರಿಸರ ನಿವಾಸಿಗಳಾದ ಶಾಹಿಲ್ (22), ಮನಾಫ್ (19), ಫಹಾಲ್ (19) ಹಾಗೂ ರಾಶಿದ್ (25) ಗಾಯಗೊಂಡವರು. ಎರಡು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಬಾಯಾರು ಭಾಗದತ್ತ ತೆರಳುತ್ತಿದ್ದ ವೇಳೆ, ಮಣ್ಣಂಗುಝಿ ಇಳಿಜಾರಿನಲ್ಲಿ ಮುಂದೆ ಸಾಗುತ್ತಿದ್ದ ಕಾರು ರಸ್ತೆ ಬದಿಗೆ ತಿರುಗಿಸುವ ಸಂದರ್ಭ ಹಿಂದಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಎರಡೂ ಕಾರುಗಳು ನಿಯಂತ್ರಣ ತಪ್ಪಿ ಪಲ್ಟಿಯಾಗಿವೆ. ಅಪಘಾತದಲ್ಲಿ…

Read More

ಕನ್ನಡ ಸೇನೆ ಕರಾವಳಿ ಜಿಲ್ಲೆಗಳಿಗೆ ವಿಸ್ತರಣೆಯಾಗಿ ಕನ್ನಡ ಕಟ್ಟುವ ಮನಸುಗಳನ್ನು ಒಂದು ಮಾಡಲಿದೆ : ಸಮಿತಿಯ ಉಪಾಧ್ಯಕ್ಷ ಎನ್ ನಾಗೇಂದ್ರ

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಕನ್ನಡ ಸೇನೆಯು ಸುಮಾರು ನಾಲ್ಕು ದಶಕಗಳಿಂದಲೂ ಸತತವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ. ಇದರ ರಾಜ್ಯಾಧ್ಯಕ್ಷರಾಗಿ ಕೆ ಆರ್ ಕುಮಾರ್ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುತ್ತಾರೆ. ಕನ್ನಡ ಸೇನೆ ಘಟಕಗಳು ಎಲ್ಲಾ ಜಿಲ್ಲೆಯಲ್ಲೂ ರೂಪುಗೊಂಡಿದ್ದು ಅದರಂತೆ ದಕ್ಷಿಣ ಕನ್ನಡ ಜಿಲ್ಲೆಗೂ ಸಹ ವಿಸ್ತರಿಸುವ ಉದ್ದೇಶವನ್ನು ಹೊಂದಿದೆ ಎಂದು ಸಮಿತಿಯ ಉಪಾಧ್ಯಕ್ಷರಾದ ಎನ್ ನಾಗೇಂದ್ರ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿಯಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಿತಿಯು ಈಗಾಗಲೇಹೊಸ ಪ್ರತಿನಿಧಿಗಳನ್ನು ಆಯ್ಕೆ…

Read More

ಬೆಳ್ತಂಗಡಿ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ

ಮಂಗಳೂರು :ಬೆಳ್ತಂಗಡಿಯ ಗಡಾಯಿಕಲ್ಲು ಚಾರಣ ಪ್ರವೇಶ ತಾತ್ಕಾಲಿಕ ನಿಷೇಧ ವಿಧಿಸಲಾಗಿದೆ.ಗಡಾಯಿಕಲ್ಲು ಚಾರಣವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಆದೇಶ ಹೊರಡಿಸಲಾಗಿದೆ. ಬೇಸಿಗೆಯಿಂದ ಕಾಡ್ಕಿಚ್ಚು ಸಂಭವಿಸುವ ಸಾಧ್ಯತೆ ಇರುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಗಡಾಯಿಕಲ್ಲು ಚಾರಣ ಅವಕಾಶವನ್ನು ಫೆ.7ರಿಂದ ಮುಂದಿನ ಆದೇಶ ದವರೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

Read More

ಎಂಸಿಎಫ್ ಹೆಸರನ್ನು ಪಾರಾದೀಪ್ ಫಾಸ್ಟೇಟ್ಸ್ ಲಿಮಿಟಿಡ್ ನಾಮಫಲಕಕ್ಕೆ ಸೇರಿಲಾಯಾಗಿದ್ದು ಹೋರಾಟಕ್ಕೆ ಸಿಕ್ಕ ಜಯ : ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ

ಮಂಗಳೂರು: ಮಂಗಳೂರಿನ ಹೆಮ್ಮೆಯ ಗುರುತಾದ ಎಂಸಿಎಫ್ ಹೆಸರನ್ನು ತೆಗೆದು ಪಾರಾದೀಪ್ ಫಾಸ್ಟೇಟ್ಸ್ ಲಿಮಿಟಿಡ್ ಎಂದು ನಾಮಫಲಕವನ್ನು ಈ ಹಿಂದೆ ಹಾಕಲಾಗಿತ್ತು . ಈ ಬಗ್ಗೆ ವಿರೋಧಿಸಿದ ಮೇಲೆ ಮತ್ತೊಮ್ಮೆ ಎಂಸಿಎಫ್ ಹೆಸರನ್ನು ನಾಮಫಲಕಕ್ಕೆ ಸೇರ್ಪಡೆ ಮಾಡಲಾಯಿತ್ತು ಇದು ಹೋರಾಟಕ್ಕೆ ಸಿಕ್ಕ ಫಲವಾಗಿದೆ ಎಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ತಿಳಿಸಿದರು . ಅವರು ಮನಪಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಎಂಸಿಎಫ್ ಹೆಸರನ್ನು ಕೂಡಲೇ ನಾಮಫಲಕ್ಕೆ ಮರುಸ್ಥಾಪಿಸುವಂತೆ ಪಾರಾದೀಪ್ ಫಾಸ್ಟೇಟ್ಸ್ ಲಿಮಿಟಿಡ್ ಆಡಳಿತ ಮಂಡಳಿಗೆ…

Read More

ಉಳ್ಳಾಲಿಗೆ ₹186 ಕೋಟಿ ವೆಚ್ಚದ ಅಂಡರ್‌ಗ್ರೌಂಡ್ ವಿದ್ಯುತ್ ಕೇಬಲ್ ಯೋಜನೆ

ಮಂಗಳೂರು: ಉಳ್ಳಾಲ ಪಟ್ಟಣದಲ್ಲಿ ಅಂಡರ್‌ಗ್ರೌಂಡ್ ವಿದ್ಯುತ್ ಕೇಬಲಿಂಗ್ ಯೋಜನೆಗೆ ರಾಜ್ಯ ಸರ್ಕಾರ ₹186 ಕೋಟಿ ಮಂಜೂರು ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿಧಾನಸಭಾಧ್ಯಕ್ಷ ಹಾಗೂ ಮಂಗಳೂರು ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಉಳ್ಳಾಲ ಪಟ್ಟಣದ ಸುಂದರೀಕರಣ ಯೋಜನೆಯ ಭಾಗವಾಗಿ ಅಂಡರ್‌ಗ್ರೌಂಡ್ ಕೇಬಲಿಂಗ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಂಡಿದೆ ಎಂದರು. ಕಾಮಗಾರಿ ಪೂರ್ಣಗೊಂಡ ಬಳಿಕ ಪಟ್ಟಣದಲ್ಲಿ ಮೇಲ್ಭಾಗದಲ್ಲಿ ಹಾದು ಹೋಗುತ್ತಿರುವ ಜೀವಂತ ವಿದ್ಯುತ್ ತಂತಿಗಳ ಸಮಸ್ಯೆ…

Read More

ಸಾಹಿತಿ , ಶಿಕ್ಷಕಿ,ಸಂಘಟಕಿ ಬಹುಮುಖ ಪ್ರತಿಭೆಯ ಡಾ.ಶಾಂತಾಪುತ್ತೂರುರವರಿಗೆ”ಕವಿಕಾವ್ಯ ವಿಭೂಷಣ” ಪ್ರಶಸ್ತಿಗೆ ಆಯ್ಕೆ …!

ಕಾಸರಗೋಡು:ಸಾಹಿತಿ, ಶಿಕ್ಷಕಿ, ಸಂಘಟಕಿ ಕೇರಳ ರಾಜ್ಯ ಕರ್ನಾಟಕ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕಿ ಡಾ.ಶಾಂತಾಪುತ್ತೂರುರವರಿಗೆ ಕವಿಕಾವ್ಯ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾಸರಗೋಡು ಕನ್ನಡಭವನ ಸಂಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ. ಕನ್ನಡಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಪ್ರಯುಕ್ತ 22.02.2026.ಭಾನುವಾರ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದ “ಚುಟುಕು ಯುಗಾಚಾರ್ಯ ಎಂ.ಜಿ.ಆರ್. ಅರಸ್ “ವೇದಿಕೆಯಲ್ಲಿ ನಾಡೋಜ ಡಾ.ನೇತ್ರಾಲಯ…

Read More

ಒಂಭತ್ತು ಗುಳಿಗ ದೈವಗಳ ಆವೇಷ, ವಿಶೇಷ ಕೋಲ ಸೇವೆ ಕಾಣಲು ಬರ್ಕಜೆಯಲ್ಲಿ ಜನಸ್ತೋಮ

ಕರಾವಳಿಯಲ್ಲಿ ಗುಳಿಗ ದೈವದ ಕೋಲ ಸೇವೆಯೇ ವಿಶಿಷ್ಟ. ಕರಾವಳಿಯ ಇತಿಹಾಸದಲ್ಲೇ ಅತ್ಯಂತ ವಿಶೇಷ ಆಗಿರುವ ಈ ಆಚರಣೆಗಳು ವರ್ಷಕ್ಕೊಮ್ಮೆ ಜರಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ನಿಟ್ಟೆಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ, ನವಗುಳಿಗ ಕ್ಷೇತ್ರದಲ್ಲಿ ನಡೆಯುವ ಒಂಬತ್ತು ಗುಳಿಗ ದೈವಗಳ ಏಕಕಾಲದ ಸೇವೆ ತುಳುನಾಡಿನಲ್ಲಿ ಅತಿ ವಿಶಿಷ್ಟ ಸೇವೆಗಳಲ್ಲಿ ಒಂದು. ಈ ಬಾರಿಯ ವಾರ್ಷಿಕ ಉತ್ಸವ ಗುರುವಾರ ರಾತ್ರಿ ನಡೆದಿದ್ದು ಒಂಭತ್ತು ಗುಳಿಗ ದೈವಗಳ ಗಗ್ಗರ ಸೇವೆ. ಆ ಒಂಭತ್ತು ಗುಳಿಗಗಳ…

Read More

ಮಲೆಯಾಳ ಕಡ್ಡಾಯ ಮಸೂದೆ ವಿರೋಧ: ವಿ.ಡಿ. ಸತೀಶನ್‌ಗೆ ಕಾಸರಗೋಡಿನಲ್ಲಿ ಮನವಿ

ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ. ಆರ್. ಸುಬ್ಬಯಕಟ್ಟೆ, ಗಮಕ ಕಲಾ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷ ಟಿ. ಶಂಕರ ನಾರಾಯಣ ಭಟ್, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ ಜಯಪ್ರಕಾಶ್…

Read More

ಕುಂದಾಪುರ: ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ

ಉಡುಪಿ: ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ (90) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 1935ರ ಡಿ.24ರದು ಬಸ್ರೂರಿನಲ್ಲಿ ಜನಿಸಿದ ಅಪ್ಪಣ್ಣ ಹೆಗ್ಡೆ ಅವರು 1960ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಬಳಿಕ ಅಧ್ಯಕ್ಷರಾಗಿ ಸಾರ್ವಜನಿಕ ಬದುಕಿಗೆ ಕಾಲಿರಿಸಿದ್ದರು. ಅಪ್ಪಣ್ಣ ಹೆಗ್ಡೆ 1983-85ರ ಅವಧಿಯಲ್ಲಿ ಬೈಂದೂರಿನಿಂದ ಜನತಾ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. ಆನಂತರ 1988-94ರ ಅವಧಿಗೆ ವಿಧಾನ ಪರಿಷತ್ ಗೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಪ್ಪಣ್ಣ ಹೆಗ್ಡೆ…

Read More
error: Content is protected !!