ಕಾಫಿ ಕಳ್ಳತನದ ವೇಳೆ ತಡೆಯೊಡ್ಡಿದ್ದ ಮಾಲಿಕನ ಮೇಲೆ ಖದೀಮರಿಂದ ಮಾರಣಾಂತಿಕ ಹಲ್ಲೆ*
ಅರೇಹಳ್ಳಿ:ಮಲೆನಾಡು ಭಾಗವಾದ ಅರೇಹಳ್ಳಿ ಹಾಗೂ ಸುತ್ತಮುತ್ತಲಿನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಮಿತಿಮೀರಿದ ಕಾಡಾನೆಗಳ ಹಾವಳಿಯ ನಡುವೆಯೂ ಕೃಷಿಯನ್ನೇ ಅವಲಂಬಿಸಿ ಕಾಫಿ ಹಾಗೂ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾ ಆರ್ಥಿಕ ಸಂಕಷ್ಟದೊಂದಿಗೆ ಜೀವನ ಸಾಗಿಸುತ್ತಿರುವ ಅದೆಷ್ಟೋ ಮಧ್ಯಮ ವರ್ಗದ ಬೆಳೆಗಾರರಿಗೆ ಇದೀಗ ಕಾಫಿ ಬೆಳೆಗೆ ತುಸು ಬೆಲೆ ಏರಿಕೆ ಕಂಡಿದ್ದು ನಿರಾಳತೆಯ ಸಮಯದಲ್ಲಿಯೆ ಖದೀಮರ ಹಾವಳಿ ಮಿತಿ ಮೀರುತ್ತಿದ್ದು ಬೆಳೆಗಾರರಲ್ಲಿ ದಿನನಿತ್ಯ ಆತಂಕ ಸೃಷ್ಟಿಯಾಗುತ್ತಿದೆ. ರಾತ್ರಿ ಹಗಲೆನ್ನದೆ ಕಷ್ಟ ಪಟ್ಟು ಬೆಳೆಸಿದ ಕಾಫಿಯನ್ನು ಖದೀಮರು ದೋಚಿ ಪರಾರಿಯಾಗುತ್ತಿದ್ದು ಮಾತ್ರವಲ್ಲದೆ, ಅದನ್ನು…