Avatar

Rashmitha Acharya

ಆನ್‌ಲೈನ್ ಟ್ರೇಡಿಂಗ್ ವಂಚನೆ: 6 ಮಂದಿ ಬಂಧನ

ಮಂಗಳೂರು: ಲೈನ್ ವಂಚನೆ ಪ್ರಕರಣಗಳಲ್ಲಿ ಒಟ್ಟು ಆರು ಮಂದಿ ಆರೋಪಿಗಳನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿ, ಒಟ್ಟು ೬ಲಕ್ಷ ರೂ. ನಗದು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಪು ತಾಲೂಕಿನ ಶಂಕರಪುರದ ಜೊಸ್ಸಿ ರವೀಂದ್ರ ಡಿಕ್ರೂಸ್(೫೪), ಎಂಬವರಿಗೆ ಹೂಡಿಕೆ ಹೆಸರಿನಲ್ಲಿ ಒಟ್ಟು ೭೫,೦೦,೦೦೦ರೂ. ಹಣವನ್ನು ಆನ್‌ಲೈನ್ ವಂಚನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸೆನ್ ಪೊಲೀಸರು, ಸುರತ್ಕಲ್ ಕೋಡಿಕೆರೆಯ ಮೊಹಮದ್ ಕೈಸ್(೨೦), ಹೆಜಮಾಡಿ ಕನ್ನಂಗಾರಿನ ಅಹಮದ್ ಅನ್ವೀಜ್ (೨೦), ಬಂಟ್ವಾಳ ಜೋಡುಮಾರ್ಗದ ಸಫ್ವಾನ್(೩೦), ತಾಸೀರ್(೩೧) ಎಂಬವರನ್ನು ಬಂಧಿಸಿ, ಮೊಬೈಲ್ ಫೋನ್‌ಗಳನ್ನು…

Read More

ಗುರುಭ್ಯೋ ನಮಃ

ಅಂಧಕಾರದ ಕತ್ತಲನ್ನು ದೂರ ಮಾಡಿ ಬದುಕಿಗೆ ಜ್ಞಾನಜ್ಯೋತಿಯ ಬೆಳಗಿಸಿ ಜಗದ ಮಾಯೊಳಗಿನ ಮಹಿಮೆಯ ತಿಳಿಸಿದ ನನ್ನೆಲ್ಲಾ ಗುರುಗಳಿಗೆ ಪ್ರಣಾಮಗಳು. ಇಂದು ನನ್ನ ಬದುಕಿನ ಸುಂದರ ಕ್ಷಣಕ್ಕೆ ಕಾರಣರಾದ ನನ್ನ ಗುರುಗಳ ಬಗ್ಗೆ ನಾನು ಹೇಳಲೇಬೇಕು. ಸೋಮಾರಿಯಾದ ನನ್ನಂಥಹಾ ವಿದ್ಯಾರ್ಥಿಯಲ್ಲೂ ಬರವಣಿಗೆಯ ಅಭಿರುಚಿಯನ್ನು ಬೆಳಸಿ, ನನ್ನಿಂದ ಅಸಾಧ್ಯ ಎಂದುಕೊಂಡಿದ್ದ ಸಾಹಿತ್ಯ ರಚನೆಗೆ ನೆರಳಾಗಿ, ಪ್ರತೀ ಅಕ್ಷರದ ಹಿಂದಿನ ಶಕ್ತಿಯಾಗಿ , ಬಾಳಿಗೆ ನವ ಕನಸನ್ನು ಕಾಣಲು – ಅದರ ಸಾಕ್ಷಾತ್ಕಾರ ಮಾಡಲು ಸಾಧ್ಯ ಪಡಿಸುವ ಸೂರ್ತಿಯಾಗಿ, ಪತ್ರಕರ್ತ ದಿಟ್ಟ…

Read More

ಚಂದ್ರ ಗ್ರಹಣ 2025

ಚಂದ್ರ ಗ್ರಹಣವು 2025 ರ ಕೊನೆಯ ಇದೇ ಸೆಪ್ಟೆಂಬರ್ 7 ರಂದು ಸಂಭವಿಸಲಿದೆ. ಈ ಚಂದ್ರ ಗ್ರಹಣವನ್ನು ಭಾರತದಲ್ಲಿ ನೋಡಬಹುದಾಗಿದೆ. ಸೆಪ್ಟೆಂಬರ್ 7ರ ಮಧ್ಯರಾತ್ರಿ 9:57 ಕ್ಕೆ ಶುರುವಾಗಿ 8ರ ಮಧ್ಯರಾತ್ರಿ 1:26 ರವರೆಗೆ ಗ್ರಹಣ ಕಾಲ ಇರಲಿದೆ. ಚಂದ್ರ ಗ್ರಹಣದ ಪೂರ್ಣ ಪ್ರಭಾವದ ಆರಂಭ ಮಧ್ಯರಾತ್ರಿ 12.28 ರಿಂದ 1.56 ರವರೆಗೆ ಇರಲಿದೆ.

Read More

ಮ . ನ . ಪಾ ದಲ್ಲಿ ಕನ್ನಡ ಬಾರದ ಅನ್ಯ ಭಾಷೆಯ ಅಧಿಕಾರಿಯ ನೇಮಕ: ಕನ್ನಡ ಪರ ಸಂಘಟನೆಗಳು ಕಿಡಿ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕನ್ನಡ ಓದಲು ಬರೆಯಲು ಬಾರದ ಅಧಿಕಾರಿ ಕಾನೂನು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಕಿಡಿಕಾರಿವೆ. ಕೇರಳ ಮೂಲದ ಮಹಿಳೆಯು ಕೇರಳದ ಮಲಯಾಳಂ ಮಾಧ್ಯಮದಲ್ಲಿ ವಿಧ್ಯಾಭ್ಯಾಸವನ್ನು ಮಾಡಿರುವುದು ಕನ್ನಡ, ತುಳು ಭಾಷೆ ಬಾರದಿರುವುದು ಜನಸಾಮಾನ್ಯರಿಗೆ ವ್ಯವಹರಿಸಲು ಸಮಸ್ಯೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಹಿಂದೆ ರಾಜಕೀಯ ಒತ್ತಡ ಇದೆ ಎನ್ನುವುದು ಕನ್ನಡ ಸಂಘಗಳ ಆಕ್ರೋಶವಾಗಿದೆ. ಕೆ.ಸಿ.ಎಸ್.ಆರ್ ನಿಯಮಗಳು 1974ರಲ್ಲಿ ಸರಕಾರಿ SSLC/10ನೇ ತರಗತಿಯಲ್ಲಿ ಕನ್ನಡ ಭಾಷೆ…

Read More

ಎ ಟಿ ಎಂ ಕಳ್ಳತನದ ವಿಫಲ ಯತ್ನ ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ

ಉಳ್ಳಾಲ: ರಾತ್ರೋ ರಾತ್ರಿ ಕೋಟೆಕಾರು ಬೀರಿ ಎಟಿಎಂನಲ್ಲಿ ಹಣ ಕದಿಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ದೆಹಲಿಯ ಕಾವಲು ವ್ಯವಸ್ಥೆಯ ಎಚ್ಚರಿಕೆಯ ಮೇರೆಗೆ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯ ನಿವಾಸಿ ನಾಗಪ್ಪ ಕೇರಳಟ್ಟಿ (41) ಎಂಬಾತನನ್ನು ಮುಂಜಾನೆ 3 ಗಂಟೆ ಸುಮಾರಿಗೆ ಎಸ್‌ಬಿಐ ಎಟಿಎಂನಲ್ಲಿದ್ದ ಕ್ಯಾಶ್ ಬಾಕ್ಸ್ ಒಡೆಯಲು ಯತ್ನಿಸುತ್ತಿದ್ದಾಗ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಪೊಲೀಸರ ಪ್ರಕಾರ, ನಾಗಪ್ಪ ಬೆಳಗಿನ ಜಾವ 2:30 ರ ಸುಮಾರಿಗೆ ಎಟಿಎಂ ಒಳಗೆ ಪ್ರವೇಶಿಸಿ, ತಾನು ತಂದಿದ್ದ ಉಪಕರಣಗಳನ್ನು…

Read More

ವೈರಲ್ ಆದ ಕಟೀಲಿನ ಪಡಿತರ ಅಂಗಡಿಯ ಗೋಣಿ ಚೀಲ- ಸುದ್ದಿಗೋಷ್ಠಿಯಲ್ಲಿ ಸತೀಶ್ ಕಟೀಲ್ ಸ್ಪಷ್ಟತೆ

ಮಂಗಳೂರು: ಇತ್ತೀಚಿಗೆ ಬಾರಿ ಪ್ರಮಾಣದಲ್ಲಿ ವೈರಲ್ ಆದ ಕಟೀಲಿನ ಪಡಿತರ ಅಂಗಡಿಯ ಗೋಣಿ ಚೀಲದ ಸಮಸ್ಯೆಯನ್ನು ಮತ್ತು ಪಡಿತರ ಅಂಗಡಿಯಲ್ಲಿ ಏನೇನು ನಡೆಯಿತು ಎನ್ನುವುದರ ಕುರಿತು ಸತೀಶ್ ಕಟೀಲ್ ಸ್ಪಷ್ಟತೆ ನೀಡಿದರು . ಅವರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಟೀಲು ಪಡಿತರ ಅಂಗಡಿಯನ್ನು ಹಲವು ವರ್ಷಗಳಿಂದ ಮಂಜುನಾಥ ನಾಯಕ್ ಎಂಬುವವರು ಕಟೀಲು ಸಮೀಪ ನ್ಯಾಯಬೆಲೆ ಅಂಗಡಿ‌ಮೂಲಕ ಸರಕಾರದಿಂದ ಸಿಗುವ ರೇಷನನ್ನು ನೀಡುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದರು, ಆದರೆ ಇತ್ತೀಚಿನ ಕೆಲವರ್ಷಗಳಿಂದ ಈ…

Read More

ಮಂಗಳೂರಿಗೂ ಉದ್ಯಮ ವಿಸ್ತರಿಸಿದ ರೆಸೊಲೆಕ್ಸ್-ನೋವಾ ಸ್ಟೀಪ್ ಕಂಫರ್ಟ್ಸ್ ಸಹಭಾಗಿತ್ವದಲ್ಲಿ ನೂತನ ಮಳಿಗೆ ಪ್ರಾರಂಭ

ಮಂಗಳೂರು: ಸ್ವಿಂಗ್, ಕಾಯಿರ್ ಮತ್ತು ಫೋಮ್ ಹಾಸಿಗೆಗಳ ಉತ್ಕೃಷ್ಟ ಶ್ರೇಣಿಗೆ ಹೆಸರುವಾಸಿಯಾದ ಪ್ರಮುಖ ಹಾಸಿಗೆ ಬ್ರಾಂಡ್ ರೆಸೊಲೆಕ್ಸ್, ಮಂಗಳೂರಿನ ಬಲ್ಲಾಳಭಾಗ್‌ನಲ್ಲಿ ತನ್ನ ಹೊಸ ವಿಶೇಷ ಪ್ರಾಂಚೈಸಿ ಮಳಿಗೆಗೆ ಚಾಲನೆ ನೀಡಿದೆ. ನೋವಾ ಸೇಲ್ಸ್ ಸ್ಟೀಪ್ ಕಂಫರ್ಟ್ಸ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಳಿಗೆಯು, ಈ ಪ್ರದೇಶದ ಗ್ರಾಹಕರಿಗೆ ಗುಣಮಟ್ಟದ ನಿದ್ರೆಗೆ ಅಗತ್ಯ ಪರಿಕರಗಳನ್ನು ಒದಗಿಸಲಿದೆ. 850 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಮಳಿಗೆಯು ರೆಸ್ಟೋಲೆಕ್ಸ್‌ ನ ಸಂಪೂರ್ಣ ಶ್ರೇಣಿಯ ಕೊಡುಗೆಗಳನ್ನು ಒಳಗೊಂಡಿದೆ. ಇದರಲ್ಲಿ ಹಾಸಿಗೆಗಳು, ದಿಂಬುಗಳು,…

Read More

ಧರ್ಮಸ್ಥಳ ಕೇಸ್ ; ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನಲ್ ಮನಾಫ್‌ ಗೆ ಎಸ್‌ಐಟಿ ನೋಟಿಸ್

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮತ್ತು ಷಡ್ಯಂತ್ರ ಆರೋಪದ ಮೇಲೆ ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಅಭಿಷೇಕ್‌ನನ್ನು ಎಸ್‌ಐಟಿ ವಿಚಾರಣೆ ನಡೆಸಿದೆ. ಈ ಮಧ್ಯೆ ಬುರುಡೆ ಕಥೆಯನ್ನು ಕೇರಳಕ್ಕೆ ಹಬ್ಬಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಯೂಟ್ಯೂಬರ್ ಮನಾಫ್‌ಗೂ ಎಸ್‌ಐಟಿ ನೋಟಿಸ್ ನೀಡಿದೆ. ಬುರುಡೆ ಕೇಸ್​​ನಲ್ಲಿ ಕೇರಳ ಮೂಲದ ಯೂಟ್ಯೂಬರ್ ಮನಾಫ್​ಗೆ ಎಸ್ಐಟಿ ನೊಟೀಸ್ ನೀಟಿದೆ. ಬುರುಡೆ ಪ್ರಕರಣ ಸಂಬಂಧಿಸಿದಂತೆ ಆರಂಭದಿಂದಲೂ ತನ್ನ ಯೂಟ್ಯೂಬ್ ನಲ್ಲಿ ಈ ಮುನಾಫ್​ ನಾನಾ ಕಥೆಗಳನ್ನು ಕಟ್ಟಿದ್ದ ಎನ್ನಲಾಗ್ತಿದೆ. ಜಯಂತ್…

Read More

ಓಣಂ

ಓಣಂ ಹಬ್ಬವನ್ನು ಮಲಯಾಳಿಗಳು ಆಚರಿಸುವಂತಹ ವಿಶಿಷ್ಟ ಬಗೆಯ ಹಬ್ಬವಾಗಿದೆ . ಕರಾವಳಿ ಜಿಲ್ಲೆಗಳಲ್ಲಿಯೂ ಈ ಹಬ್ಬದ ಆಚರಣೆಯನ್ನು ತುಂಬಾನೇ ಸಂಭ್ರಮದಿಂದ ಆಚರಿಸುತ್ತಾರೆ . ಈ ಹಬ್ಬವು ಮಹಾಬಲಿ ಚಕ್ರವರ್ತಿ ಅಥವಾ ಮಾವೇಲಿ ಎಂದು ಕರೆಯುವ ಮಹಾರಾಜನೊಂದಿಗೆ ನಂಟನ್ನು ಆತನ ನೆನೆಪಿಗಾಗಿ ಆಚರಣೆಯನ್ನು ಮಾಡುವ ದೇವರ ನಾಡಿನ ಹಬ್ಬವಾಗಿದೆ . ಈ ಹಬ್ಬ ತನ್ನದೇ ಆದ ಹಿನ್ನಲೆಯನ್ನು ಹೊಂದಿದೆ , ತಲೆ ತಲೆ ಮಾರುಗಳ ಹಿಂದೆ ಮಲಯಾಳಂ ನಾಡನ್ನು ಮಹಾಬಲಿ ಎಂಬ ಅಸುರರಾಜನು ಆಳುತ್ತಿದ್ದನು .ಆತ ಅಸುರನಾದರೂ ಅತ್ಯಂತ…

Read More

ಕಾಞಂಗಾಡ್ ಭಾಗದಲ್ಲಿ ಓಣಂ ಹಬ್ಬದ ಅಂಗವಾಗಿ-ಹೂವಿನ ಮಾರಾಟದ ಝಲಕ್

ಕಾಸರಗೋಡು ಜಿಲ್ಲೆಯ ಪ್ರಮುಖ ನಗರಗಳಲ್ಲಿ ಒಂದಾದ ಕಾಞಂಗಾಡ್ ಭಾಗದಲ್ಲಿ ಓಣಂ ಹಬ್ಬದ ಅಂಗವಾಗಿ ಹೂವಿನ ಮಾರಾಟ ಜಬರ್ದಸ್ತ್ ಆಗಿತ್ತು. ನಗರದ ಬಸ್ ನಿಲ್ದಾಣ ದಲ್ಲಿ ಹೂವು ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು. ಕರ್ನಾಟಕದ ಘಟ್ಟ ಪ್ರದೇಶಗಳಲ್ಲಿನ ಹೂವು ವ್ಯಾಪಾರಿಗಳು ಇಲ್ಲಿಗೆ ಬಂದು ವ್ಯಾಪಾರ ಮಾಡಿದ್ದರು. ವಿಸ್ತಾರವಾದ ಪ್ರದೇಶದಲ್ಲಿ ಹೂವನ್ನು ಮಾರಾಟಕ್ಕೆಂದು ಹರಡಿತ್ತು. ಇದು ನೋಡುಗರ ಕಣ್ಣನ್ನು ಸೆಳೆಯುತ್ತಿತ್ತು. ಪುಷ್ಪ ಕಾಶಿಯೇ ಈ ಭಾಗದಲ್ಲಿ ಮೇಳೈಸ್ತ ಇರುವುದು ಕಂಡು ಬಂದಿದೆ. ಕೇರಳ ದಾದಂತ್ಯ ಇಂದು ಓಣಂ ಹಬ್ಬವನ್ನು ಮಹಾಬಲಿಯ ಸ್ಮರಣಾರ್ಥಕವಾಗಿ…

Read More
error: Content is protected !!