Avatar

Rashmitha Acharya

ವಿಟ್ಲ: ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ ಬೈಕ್ ಗೆ ಡಿಕ್ಕಿ: ಬೈಕ್‌ ಸವಾರ ಗಂಭೀರ

ವಿಟ್ಲ : ಖಾಸಗಿ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಚಂದಳಿಕೆ ಎಂಬಲ್ಲಿ ಜು.೨೯ರಂದು ರಾತ್ರಿ ನಡೆದಿದೆ.ಗಾಯಗೊಂಡ ಬೈಕ್ ಸವಾರನನ್ನು ಪೆರುವಾಯಿ ನಿವಾಸಿ ಅರ್ಚಕ ಹರ್ಷ ಭಟ್ ಎಂದು ಗುರುತಿಸಲಾಗಿದೆ. ವಿಟ್ಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಪೂರ್ಣಿಮಾ ಹೆಸರಿನ ಖಾಸಗಿ ಬಸ್ ನ ಚಾಲಕ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಪುತ್ತೂರು ಕಡೆಯಿಂದ ಬರುತ್ತಿದ್ದ ಬೈಕ್‌ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರ ಗಂಭೀರ ಗಾಯ…

Read More

ಧರ್ಮಸ್ಥಳ ಪ್ರಕರಣ – ಉತ್ಖನನ ಆರಂಭ, ಕಾಣ ಸಿಗುತ್ತಿಲ್ಲ‌ ಕಳೇಬರ ಅವಶೇಷ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆ ಮುಂದುವರಿಸಿದ್ದು, ದೂರುದಾರ ಗುರುತಿಸಿರುವ ಸ್ಥಳಗಳನ್ನು ಅಗೆಯುವ ಪ್ರಕ್ರಿಯೆ ಪೊಲೀಸ್ ಬಿಗು ಭದ್ರತೆಯೊಂದಿಗೆ ಇಂದು ಆರಂಭಗೊಂಡಿದೆ. ಈ ಪ್ರಕರಣದ ದೂರುದಾರ ವ್ಯಕ್ತಿಯೂ ಮುಸುಕು ಧರಿಸಿ ಸ್ಥಳದಲ್ಲಿದ್ದನು. ೧೩ ಮಂದಿ ಕಾರ್ಮಿಕರು ಅಗೆಯುವ ಕೆಲಸದಲ್ಲಿ ತೊಡಗಿದ್ದಾರೆ.ಧರ್ಮಸ್ಥಳದ ಸ್ನಾನ ಘಟ್ಟದ ಸಮೀಪದ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಜಾಗವನ್ನು ಕಾರ್ಮಿಕರು…

Read More

ಯುವಕನನ್ನು ಅಪಹರಿಸಿ ಕೊಲೆಗೈದುಶವವನ್ನು ಉಪೇಕ್ಷಿಸಿದ ಪ್ರಕರಣ – 10 ನೇ ಆರೋಪಿಯನ್ನು ಬಂಧಿಸಿದ ಪೊಲೀಸ್

ಮಂಜೇಶ್ವರ: ಕೊಲ್ಲಿ ಉದ್ಯೋಗಿ ಯುವಕನನ್ನುಅಪಹರಣಗೈದು ಹಿಗ್ಗಾ ಮಗ್ಗಾ ಥಳಿಸಿ ಕೊಲೆಗೈದ ಬಳಿಕ ಶವವನ್ನು ಕಾರಿನಲ್ಲಿ ಕೊಂಡೊಯ್ದು ಖಾಸಗಿ ಆಸ್ಪತ್ರೆಯಲ್ಲಿ ಉಪೇಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಡನ್ನು ನಡುಗಿಸಿದ ಈ ಪ್ರಕರಣದ 10ನೇ ಆರೋಪಿಯಾದ ಮಂಜೇಶ್ವರ ಆಚೆಕೆರೆಯ ಅಶರ್ ಅಲಿ (27) ಎಂಬಾತನನ್ನು ಕಾಸರಗೋಡು ಕ್ರೈಂಬ್ರಾಂಚ್ ತಂಡ ಬಂಧಿಸಿದೆ. ಕೊಲ್ಲಿ ರಾಷ್ಟ್ರದಿಂದ ಊರಿಗೆ ಮರಳುತ್ತಿದ್ದ ವೇಳೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಈತ ನನ್ನು ಬಂಧಿಸಲಾಗಿದೆ. ಕಾಸರಗೋಡಿಗೆ ತಲುಪಿಸಿದ ಆರೋಪಿಯನ್ನು ಸಮಗ್ರ ವಾಗಿ ತನಿಖೆಗೊಳಪಡಿಸಿದ ಬಳಿಕ…

Read More

ಧರ್ಮತ್ತಡ್ಕ ಶಾಲೆಯಲ್ಲಿ ರಂಜಿಸಿದ ಗಮಕ ವಾಚನ-ವ್ಯಾಖ್ಯಾನ.

ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ,ಕೇರಳ ಗಡಿನಾಡ ಘಟಕ ,ಕಾಸರಗೋಡು ಮತ್ತು ಸಿರಿಗನ್ನಡ ವೇದಿಕೆ ಬೆಂಗಳೂರು ಕೇರಳ ಗಡಿನಾಡ ಘಟಕ ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ”ಗಮಕ ವಾಚನ -ವ್ಯಾಖ್ಯಾನ ಕಾರ್ಯಕ್ರಮ”ವು ” ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆ, ಧರ್ಮತ್ತಡ್ಕದಲ್ಲಿ ಇಂದು ನಡೆಯಿತು. ಗಮಕ ಪರಿಷತ್ತು ನಡೆದು ಬಂದ ಬಗೆ -ಮಹತ್ವ, ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ನಿವೃತ್ತ ಅಧ್ಯಾಪಕ, ಸಾಹಿತಿಯಾದಂತಹ ” ಶ್ರೀ.ವಿ ಬಿ ಕುಳಮರ್ವ “ನುಡಿದರು.ಶಾಲಾ ವ್ಯವಸ್ಥಾಪಕ…

Read More

ಮಂಜೇಶ್ವರ ಕ್ವಾಟರ್ಸ್ನಲ್ಲಿ ಯುವಕನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ : ಮಂಜೇಶ್ವರ ಕಡಂಬಾರ್ ನಲ್ಲಿ ಕಾರ್ಯಾಚರಿಸುತ್ತಿರುವ ಕೆ ಎ ಅಬ್ದುಲ್ಲ ಮಾಲಕತ್ವದ ಕೆ ಎ ಬೋರ್ಡ್ ಪ್ಲೈವುಡ್ ಕಾರ್ಖಾನೆಯಲ್ಲಿ ನೌಕರನಾಗಿರುವ ಬಿಹಾರ ಮೂಲದ ಯುವಕನೊಬ್ಬ ಅಲ್ಲೇ ಸಮೀಪವಿರುವ ಕ್ವಾರ್ಟರ್ಸ್ ನಲ್ಲಿ ಸೋಮವಾರ ಸಂಜೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಿಹಾರ ನಿವಾಸಿ ಸೂರಜ್ ಸಾವನ್ನಪ್ಪಿದ ಯುವಕನಾಗಿದ್ದಾನೆ. ಈತ 8 ತಿಂಗಳು ಮೊದಲು ಬಿಹಾರದಿಂದ ಕೆಲಸಕ್ಕಾಗಿ ಬಂದಿದ್ದಾನೆನ್ನಲಾಗಿದೆ. ಜೊತೆಯಾಗಿದ್ದ ಈತನ ಭಾವ ಸೂರಜ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡ ಮೊದಲ ವ್ಯಕ್ತಿಯಾಗಿದ್ದಾನೆ. ಬಳಿಕ ಈತನೇ ಸೂರಜ್…

Read More

ಕಾರ್ಯಕರ್ತರ ಶ್ರಮ ಗೆಲುವಿನ ಸೂತ್ರ-ಆದರ್ಶ ಬಿ ಎಂ

ಕಾರ್ಯಕರ್ತರು ಗಳ ಶ್ರಮ ಹಾಗೂ ಸಿದ್ದಂತಗಳ ಮೇಲಿನ ನಂಬಿಕೆ ಗೆಲುವಿನ ಸೂತ್ರ.. ಗೆಲುವು ಪರಿಶ್ರಮಕ್ಕೆ ಮಾತ್ರ ದೊರೆಯುತ್ತದೆ ಎಂದುಬಿಜೆಪಿ ಪೈವಳಿಕೆ ಪೆರ್ವೋಡಿ ವಾರ್ಡ್ ಸಮ್ಮೇಳನ ಉದ್ಘಾಟಿಸಿ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು. ಸಂಘಟನಾ ಚಟುವಟಿಕೆ, ಹಾಗೂ ಪಕ್ಷದ ಕಾರ್ಯಕ್ರಮ ಗಳ ವಿವರ ನೀಡಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಪಂಚಾಯತ್ ಸಮಿತಿ ಅಧ್ಯಕ್ಷರಾದ ಸತ್ಯ ಶಂಕರ್ ಭಟ್ ಪ್ರವೀಣ್ ರೈ ಪಟ್ಲ, ಸುಬ್ರಮಣ್ಯ ಭಟ್, ಗಣೇಶ ಪೆರ್ವೋಡಿ, ಚಂದ್ರವತಿ ಶೆಟ್ಟಿ, ಕಮಲ,…

Read More

ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸೋ ಸ್ವಿಮಿಂಗ್ ಪುಲೋ ?!

ಮಂಗಳೂರು : ಆಮೆಗತಿಯಲ್ಲಿ ಸಾಗುತ್ತಿರುವ ಮಂಗಳೂರು ನಗರದ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ಕಾಮಗಾರಿಯು ಸುತ್ತಮುತ್ತಲಿನ ಪ್ರದೇಶವಾಸಿಗಳಿಗೆ ತೊಂದರೆ ಕೊಡುವುದಂತೂ ಸತ್ಯ . ಒಂದು ವರ್ಷದಲ್ಲಿ ಕಾಮಗಾರಿ ಪೂರ್ತಿಯಾಗುತ್ತೆ ಎನ್ನುವ ವಿಸ್ವಾಸವನ್ನು ನೀಡಿದ್ದ ರೈಲ್ವೇ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಮೂರು ವರುಷ ಕಳೆಯುತ್ತಾ ಬಂದರೂ ಕಾಮಗಾರಿಯನ್ನು ಪೂರ್ತಿ ಮಾಡದೇ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲವಾಗಿದೆ . ಅತ್ಯಂತ ನುರಿತ ತಾಂತ್ರಿಕರು ಇದ್ದರೂ ಕಾಮಗಾರಿ ಪೂರ್ತಿಯಾಗದೇ ಅಲ್ಲಿನ ನಗರವಾಸಿಗಳಿಗೆ ತೊಂದರೆಯನ್ನು ನೀಡುತ್ತದೆ ….

Read More

ನಿರಂತರ 170 ಗಂಟೆ ಭರತನಾಟ್ಯ: ವಿಶ್ವ ದಾಖಲೆ ಬರೆದ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ

ನಿರಂತರವಾಗಿ ಏಳು ದಿನಗಳ ಕಾಲ ರಾತ್ರಿ ಹಗಲೆನ್ನದೆ ದಿನವಿಡೀ 170 ಗಂಟೆಗಳ ಭರತನಾಟ್ಯ ಪ್ರದರ್ಶಿಸುವ ಮೂಲಕ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಅಂತಿಮ‌ ಬಿಎ ವಿದ್ಯಾರ್ಥಿನಿ ರೆಮೋನಾ ಸಾಧನೆ ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರ್ಪಡೆಯಾಗಿದೆ. ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್​​ನಲ್ಲಿ ರೆಮೋನಾ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಸತತ 127 ಗಂಟೆ ಭರತನಾಟ್ಯ ಪ್ರದರ್ಶನ ನೀಡಿದ್ದೇ ಈವರೆಗಿನ ದಾಖಲೆಯಾಗಿತ್ತು. ಇದೀಗ 170 ಗಂಟೆ ಸತತ ಪ್ರದರ್ಶನ…

Read More

ಕನ್ನಡ ಕಟ್ಟುವ ಕಟ್ಟಾಳುಗಳನ್ನು ಜೋಡಿಸುವುದೇ ಕನ್ನಡ ಜಾಗೃತಿ ಅಭಿಯಾನದ ಉದ್ದೇಶ. ಡಾ. ವಾಮನ್ ರಾವ್ ಬೇಕಲ್.

ಕಾಸರಗೋಡು : ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕನ್ನಡದ ಕಟ್ಟಾಳುಗಳನ್ನು ಪರಸ್ಪರ ಜೋಡಿಸುವುದೇ “ಮನೆ ಮನೆ -ಕನ್ನಡ ಜಾಗೃತಿ ಅಭಿಯಾನದ ಪ್ರದಾನ ಉದ್ದೇಶ. ಕನ್ನಡ ಮನಸುಗಳು ಒಂದಾಗಬೇಕು. ಕನ್ನಡ ಪ್ರಜ್ಞೆ ಹೊಸ ತಲೆಮಾರಿನಲ್ಲಿ ಬೆರೂರಿಸುವ ಪ್ರಯತ್ನಕ್ಕೆ, ಕವಿಗಳು, ಸಾಹಿತಿಗಳು, ಕಲಾವಿದರು, ಸಂಘಟಕರು ಒಂದಾಗಿ ಸೇರಿ ಚರ್ಚಿಸುವ ವೇದಿಕೆ ನಿರ್ಮಾಣವಾಗಬೇಕು. ಹೊಸ ಹೊಸ ಯೋಚನೆ -ಯೋಜನೆಗಳ ಮೂಲಕ ಒಟ್ಟಾಗಿ ಕನ್ನಡ ಉಳಿಸುವ, ಬೆಳೆಸುವ ಪ್ರಯತ್ನಕ್ಕೆ ಪ್ರತಿಜ್ಞಾಬದ್ಧರಾಗಬೇಕು ಎಂದು ಕನ್ನಡ ಭವನ ಮತ್ತು ಕೇರಳ ರಾಜ್ಯ…

Read More

ಕಾಮಾಲೆ ರೋಗದಿಂದ ಯುವಕ ಬಲಿ

ಮಂಗಳೂರು: ಶ್ರೀಹರಿ ವಾರಿಕ್ಕಾಡ್ (24) ಕಾಮಾಲೆ (Jaundice) ರೋಗ ದಿಂದ ಮಂಗಳೂರಿನ ದೇರಳಕಟ್ಟೆ ಏನೋಪೇಯ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದು ಇಂದು ಪೂರ್ವಾಹ್ನ 9.41 ಗಂಟೆಗೆ ದೈವಾಧೀನರಾಗಿರುತ್ತಾರೆ . ನಾರಾಯಣನ್ ವಾರಿಕ್ಕಾಡ್ತ್ತಾಯರ್ ಮತ್ತು ಶ್ರೀ ದೇವಿ ದಂಪತಿಗಳ ದ್ವಿತೀಯ ಪುತ್ರರಾಗಿದ್ದಾರೆ.

Read More
error: Content is protected !!