Avatar

Rashmitha Acharya

200 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ನಡೆಸಿದ್ದಾನೆ ಎನ್ನಲಾದ ಬಹುಕೋಟಿ ವಂಚಕ ರೋಶನ್ ಸಲ್ದಾನ ಪ್ರಕರಣದಲ್ಲಿ ಹೈಕೋರ್ಟ್ ಆರೋಪಿಗೆ ಬಿಗ್ ರಿಲೀಫ್

ಬಿಹಾರದ ಉದ್ಯಮಿಗೆ ಹತ್ತು ಕೋಟಿ ವಂಚನೆ ಮತ್ತು ಮಂಗಳೂರಿನ ವ್ಯಕ್ತಿಗೆ ಒಂದೂವರೆ ಕೋಟಿ ವಂಚನೆ ಪ್ರಕರಣದಲ್ಲಿ ಹೈಕೋರ್ಟ್ ಪೊಲೀಸರ ತನಿಖಾ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇತ್ತೀಚೆಗೆ ಸಾಲ ನೀಡುವ ನೆಪದಲ್ಲಿ ಭಾರೀ ವಂಚನೆ ನಡೆಸಿದ ಜಾಲದಲ್ಲಿ ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ರೋಶನ್ ಸಲ್ದಾನ ಎಂಬಾತನನ್ನು ಸಿಇಎನ್ ಪೊಲೀಸರು ಬಂಧಿಸಿದ್ದರು. ಆತನ ಬಂಧನ ವಿಚಾರ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆ ಹಲವಾರು ಉದ್ಯಮಿಗಳು ತಮಗೆ ವಂಚನೆ ನಡೆಸಿರುವ ಬಗ್ಗೆ ದೂರು ನೀಡಲು ಮುಂದೆ ಬಂದಿದ್ದರು. ಬಿಹಾರ ಮೂಲದ ಉದ್ಯಮಿ ತನಗೆ ಹತ್ತು…

Read More

ಪದ್ಮನಾಭ ಶೆಟ್ಟಿಯನ್ನು ಗ್ರಾಮದ ದೈವ ಪಡ್ರೆ ಜುಮಾದಿಯೇ ನೋಡಿಕೊಳ್ಳಲಿ“ ಸಮಿತಿಯ ಸದಸ್ಯ ರೂಪೇಶ್ ರೈ ಹೇಳಿಕೆ

ಮಂಗಳೂರು: “ಪಡ್ರೆ ಶ್ರೀ ಧೂಮಾವತಿ ದೈವಸ್ಥಾನಕ್ಕೆ ಸುಮಾರು 800 ವರ್ಷಗಳಿಗೂ ಮೇಲ್ಪಟ್ಟ ಇತಿಹಾಸವಿದ್ದು ಇತ್ತೀಚೆಗೆ ಗ್ರಾಮದ ಪದ್ಮನಾಭ ಶೆಟ್ಟಿ ಎಂಬವರು ನ್ಯಾಯಾಲಯದಲ್ಲಿ ಸುಮಾರು 13 ಜನರ ಮೇಲೆ ಖಾಸಗಿ ದೂರು ನೀಡಿದ್ದು ಅದರ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಆಗಿರುತ್ತದೆ. ಆ ದೂರಿನಲ್ಲಿ ಜಾತ್ರೆಯ ಸಮಯ ಭಕ್ತಾದಿಗಳಿಂದ ಸಂಗ್ರಹವಾದ ಸುಮಾರು 6 ಲಕ್ಷ ರೂಪಾಯಿ ಹಣ ಮತ್ತು ಸುಮಾರು 14-15 ಪವನ್ ಚಿನ್ನ, ಬೆಳ್ಳಿ, ಹಿತ್ತಾಳೆ ಸಹಿತ ಇದನ್ನು ಆಡಳಿತ ಸಮಿತಿಗೆ ಹಸ್ತಾಂತರಿಸದೆ ಕೊಂಡು…

Read More

ಕರಾವಳಿ ಜಿಲ್ಲೆಗಳಲ್ಲಿ ಕೆಂಪು ಕಲ್ಲು ಹಾಗೂ ಮರಳಿನ ಸಮಸ್ಯೆಗೆ ಸೂಕ್ತ ಪರಿಹಾರಕ್ಕೆ ಕರ್ನಾಟಕ ಸರಕಾರದ ಮಾಜಿ ಮಂತ್ರಿಗಳಾದ ಬಿ ನಾಗರಾಜ ಶೆಟ್ಟಿ ಆಗ್ರಹ

ಮಂಗಳೂರು: ನಮ್ಮ ಅವಿಬಾಜ್ಯ ದ. ಕ. ಜಿಲ್ಲೆ (ಮಂಗಳೂರು ಜಿಲ್ಲೆ ಮತ್ತು ಉಡುಪಿ ಜಿಲ್ಲೆ ) ಸುಮಾರು 50-60 ವರ್ಷಗಳಿಂದ ನಮ್ಮ ಕಟ್ಟಡಗಳು, ಮನೆಗಳು, ಬಹುಮಹಡಿ ಕಟ್ಟಡಗಳನ್ನು ಸ್ಥಳೀಯ ಕೆಂಪು ಕಲ್ಲು ಮರಳು ಹಾಗೂ ನಿಮಂಟ್ ಮೂಲಕ ಕಟ್ಟುತ್ತಾ ಇದ್ದೇವೆ ಕಳೆದ 2-3 ತಿಂಗಳಿಂದ ಮರಳು ಹಾಗೂ ಕೆಂಪು ಕಲ್ಲಿನ ಅಭಾವ ಜಾಸ್ತಿ ಆಗಿದ್ದು 2 ಜಿಲ್ಲೆಯಲ್ಲಿ ಎಲ್ಲಿಯೂ ಸಿಗಲಾರದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸ್ಥಳೀಯ ಕೆಂಪು ಕಲ್ಲು ಹಾಗೂ ಮರಳಿನಿಂದ ಅತೀ ಕಡಿಮೆ ಖರ್ಚಿನಲ್ಲಿ ಬಡವರು, ಹಿಂದುಳಿದ…

Read More

ಮುಲ್ಕಿ: ಕಾರಿಗೆ ಲಾರಿ ಡಿಕ್ಕಿ; ಇಬ್ಬರು ಪವಾಡ ಸದೃಶ ಪಾರು

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ವಿಜಯ ಸನ್ನಿಧಿ ಹೆದ್ದಾರಿ ಜಂಕ್ಷನ್ ಬಳಿ ಕಾರಿಗೆ ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಪವಾಡ ಸದೃಶ ಪಾರಾಗಿದ್ದಾರೆ. ಕಿನ್ನಿಗೋಳಿ ಕಡೆಯಿಂದ ಮುಲ್ಕಿ ಕಡೆಗೆ ಬರುತ್ತಿದ್ದ ಕಾರು ಮೂಲಕ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಎದುರು ಭಾಗ ಹಾನಿಯಾಗಿದ್ದು ಕಾರಿನ ಚಾಲಕ ಮುಲ್ಕಿ ಕೊಳಚಿ ಕಂಬಳ ನಿವಾಸಿ ಅಲ್ತಾಫ್ ಮತ್ತೋರ್ವ ಮಹಿಳೆ…

Read More

ಧರ್ಮಸ್ಥಳ ಕೊಲೆಗಳ ತನಿಖೆಗೆ ನೇಮಕವಾದ SIT ಮುಂದಾಳತ್ವ ವಹಿಸಿರುವ ಐಪಿಎಸ್ ಅಧಿಕಾರಿ ಮೊಹಾಂತಿಯನ್ನು ಕೈಬಿಡುವಂತೆ ಮಾಜಿ ಡಿ ವೈ ಎಸ್ ಸ್ಪಿ ಅನುಪಮ ಶೆಣೈ ಆಗ್ರಹ

ಮಂಗಳೂರು : ಧರ್ಮಸ್ಥಳ ಕೊಲೆಗಳ ತನಿಖೆಗೆ ನೇಮಕವಾದ SIT ತಂಡದ ಮುಂದಾಳತ್ವ ವಹಿಸಿರುವ ಐಪಿಎಸ್ ಅಧಿಕಾರಿ ಪ್ರನಬ್ ಮೊಹಾಂತಿಯವರ ಬದಲು ಇದರ ಮುಂದಾಳತ್ವವನ್ನು ಡಾ.ಕೆ. ರಾಮಚಂದ್ರ ರಾವ್ ಅಥವಾ ದಯಾನಂದರಂತಹ ಐಪಿಎಸ್ ಅಧಿಕಾರಿಗಳಿಗೆ ನೀಡಬೇಕೆಂದು ಆಗ್ರಹಿಸಿ ಮಾಜಿ ಡಿ ವೈ ಎಸ್ ಸ್ಪಿ ಅನುಪಮ ಶೆಣೈ ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸರಕಾರಕ್ಕೆ ಆಗ್ರಹಿಸಿದರು . ಸುದ್ದಿಗಾರೊಂದಿಗೆ ಮಾತನಾಡಿದ ಅವರು , ”ಪ್ರನಬ್ ಮೊಹಾಂತಿಯವರನ್ನು SITಯ ಮುಖ್ಯಸ್ಥರಾಗಿ ನೇಮಿಸುವ ಕುರಿತು ಮಾನ್ಯ ಘನ ಉಚ್ಚ ನ್ಯಾಯಾಲಯದ ರಿಟ್…

Read More

ಉಪ್ಪಳ : ಮೊಸರುಕುಡಿಕೆ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಳ ಪಚ್ಲಂಪಾರೆಯ ಮೊಸರು ಕುಡಿಕೆ ಉತ್ಸವದ ಆಶ್ರಯದಲ್ಲಿ ನಡೆಯಲಿರುವ 40 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಉಮಾ ಭಗವತಿ ಭಜನಾ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು. ಅಗೋಸ್ಟ್ 17 ರ ಆದಿತ್ಯವಾರ ಪಚ್ಲಂಪರೆ ಉಮಾ ಭಗವತಿ ಭಜನಾ ಮಂದಿರ ವಠಾರದಲ್ಲಿ ಮೊಸರುಕುಡಿಕೆ ಉತ್ಸವ ನಡೆಯಲಿದೆ. ಮಂದಿರದ ಅರ್ಚಕರಾದ ರಾಮಚಂದ್ರ ಐತಾಳ್ ನೇತೃತ್ವದಲ್ಲಿ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಮಂದಿರದ ಪದಾಧಿಕಾರಿಗಳು, ಸ್ಥಳೀಯರು ಹಾಜರಿದ್ದರು.

Read More

ಅವಕಾಶಕ್ಕಾಗಿ ಹೊಂಚು ಹಾಕುತ್ತಿರುವ ಮತೀಯ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ ಕರೆ

ವರ್ಕಾಡಿ- ಜನತೆಗೆ ಯಾವುದೇ ಉಪಯೋಗಕಾರಿ ಕೆಲಸಗಳನ್ನು ಮಾಡದೆ ಏಕೋದರ ಸಹೋದರರಂತೆ ಬಾಳುತ್ತಿರುವ ಜನರನ್ನು ಧರ್ಮ, ಆಹಾರ, ವಸ್ತ್ರ, ಆಚರಣೆಗಳ ಹೆಸರಲ್ಲಿ ಪರಸ್ಪರ ಕಚ್ಚಾಡಿಸಿ ಅಧಿಕಾರಕ್ಕೇರಲು ಮತೀಯ ಶಕ್ತಿಗಳು ಸಂಚು ರೂಪಿಸುತ್ತಿದ್ದು, ನಾಡಿನ ಅಭಿವೃದ್ಧಿ ಮತ್ತು ನೆಮ್ಮದಿಯ ಜೀವನ ಬಯಸುವ ಸಜ್ಜನ ನಾಗರಿಕರು ಈ ಶಕ್ತಿಗಳನ್ನು ದೂರವಿಡಲು ಸಿದ್ಧರಾಗಬೇಕೆಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಕರೆ ನೀಡಿದ್ದಾರೆ. ಅವರು ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪುರುಷೋತ್ತಮ…

Read More

ಉಡುಪಿ: ಭಾರೀ ಗಾಳಿ ಮಳೆಗೆ ಮನೆ ಕುಸಿತ- ಶಾಸಕ ಯಶ್ ಪಾಲ್ ಸುವರ್ಣ ಭೇಟಿ, ಪರಿಶೀಲನೆ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಕೆಂಜೂರು ಮತ್ತು ವಾರಂಬಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಹಾಗೂ ಮರ ಬಿದ್ದು ಮನೆ ಕುಸಿತವಾಗಿರುವ ಸ್ಥಳಗಳಿಗೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೆಂಜೂರು ಗ್ರಾಮದ ಗೋಪಾಲ ನಾಯ್ಕ, ದಾಮೋದರ ನಾಯ್ಕ್ ಹಾಗೂ ವಾರಂಬಳ್ಳಿ ಗ್ರಾಮದ ಕಿಣಿಯರಬೆಟ್ಟುವಿನಲ್ಲಿ ಮರಬಿದ್ದು ಹಾನಿಗೀಡಾದ ಗಿರಿಜಾ ಮತ್ತು ಯಶೋಧ ಅವರ ಮನೆಗೆ ಭೇಟಿ ನೀಡಿ ಘಟನೆಯಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿ ವೈಯುಕ್ತಿಕ ನೆಲೆಯಲ್ಲಿ ಪರಿಹಾರ…

Read More

ಜ್ಞಾನಿಗಳ ಗೌರವ ದೇವರಿಗೆ ಸಲ್ಲುತ್ತದೆ- ಕೃಷ್ಣಾಪುರಶ್ರೀ ಅಗ್ರಹಾರ ನಾರಾಯಣ ತಂತ್ರಿಗಳ ಸುವರ್ಣ ಸಂಸ್ಮರಣೆ

ಉಡುಪಿ: ಜ್ಞಾನಿಗಳಿಗೆ ಪರಮಾತ್ಮ, ಪರಮಾತ್ಮನಿಗೆ ಜ್ಞಾನಿಗಳು ಪ್ರಿಯರಾಗಿದ್ದು ಜ್ಞಾನಿಗಳ ಗೌರವ ದೇವರಿಗೂ ಸಲ್ಲುತ್ತದೆ ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದರು. ಅವರು ಬೆಂಗಳೂರಿನ ಅಗ್ರಹಾರ ನಾರಾಯಣ ತಂತ್ರಿ ಟ್ರಸ್ಟ್ ವತಿಯಿಂದ ಉಡುಪಿ ರಥಬೀದಿಯ ಶ್ರೀಕೃಷ್ಣ ಸಭಾ ಮಂದಿರದಲ್ಲಿ ಆಯೋಜಿಸಿದ ಅಗ್ರಹಾರ ನಾರಾಯಣ ತಂತ್ರಿಗಳ ಸುವರ್ಣ ಸಂಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ನಿಯಮದಲ್ಲಿ ಬದುಕಿದ ಧರ್ಮಿಷ್ಠರಿಗೆ ಆಯ್ಕೆಗಳು ಕಡಿಮೆ, ಆದರೆ ಅಧರ್ಮಿಷ್ಠರಿಗೆ ಆಯ್ಕೆಗಳು ಬಹಳವಿರುತ್ತವೆ. ಆಚಾರ್ಯ ಎನಿಸಿಕೊಂಡವರು ಆಚಾರವಂತರಾಗಿರಬೇಕು. ಮಧ್ವ ಶಾಸ್ತ್ರ, ಗ್ರಂಥಗಳ ಅನುವಾದಕ್ಕೆ…

Read More

ಮಣಿಪಾಲ: ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆಗೆ ಯತ್ನ; ಆರೋಪಿಯ ಬಂಧನ

ಉಡುಪಿ: ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಏಕವಚನದಲ್ಲಿ ನಿಂದಿಸಿ ಹಲ್ಲೆಗೆ ಯತ್ನಿಸಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಕೊಡವೂರು ಗ್ರಾಮದ ಜುಮಾದಿನಗರದ ಸಾಗರ್ (25) ಬಂಧಿತ ಆರೋಪಿ. ಜು.26ರ ಶನಿವಾರ ಬೆಳಿಗ್ಗೆ ಸುಮಾರು 2.30 ಕ್ಕೆ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಸಾಗರ್ ನನ್ನು ಮಹಿಳಾ ಪೊಲೀಸ್ ಅಧಿಕಾರಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಮಹಿಳಾ ಪೊಲೀಸ್ ಅಧಿಕಾರಿಗೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ‌. ಬಂಧಿತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,…

Read More
error: Content is protected !!