ಕರಾವಳಿ ಜಿಲ್ಲೆಗಳಲ್ಲಿ ಕೆಂಪು ಕಲ್ಲು ಹಾಗೂ ಮರಳಿನ ಸಮಸ್ಯೆಗೆ ಸೂಕ್ತ ಪರಿಹಾರಕ್ಕೆ ಕರ್ನಾಟಕ ಸರಕಾರದ ಮಾಜಿ ಮಂತ್ರಿಗಳಾದ ಬಿ ನಾಗರಾಜ ಶೆಟ್ಟಿ ಆಗ್ರಹ

ಮಂಗಳೂರು: ನಮ್ಮ ಅವಿಬಾಜ್ಯ ದ. ಕ. ಜಿಲ್ಲೆ (ಮಂಗಳೂರು ಜಿಲ್ಲೆ ಮತ್ತು ಉಡುಪಿ ಜಿಲ್ಲೆ ) ಸುಮಾರು 50-60 ವರ್ಷಗಳಿಂದ ನಮ್ಮ ಕಟ್ಟಡಗಳು, ಮನೆಗಳು, ಬಹುಮಹಡಿ ಕಟ್ಟಡಗಳನ್ನು ಸ್ಥಳೀಯ ಕೆಂಪು ಕಲ್ಲು ಮರಳು ಹಾಗೂ ನಿಮಂಟ್ ಮೂಲಕ ಕಟ್ಟುತ್ತಾ ಇದ್ದೇವೆ ಕಳೆದ 2-3 ತಿಂಗಳಿಂದ ಮರಳು ಹಾಗೂ ಕೆಂಪು ಕಲ್ಲಿನ ಅಭಾವ ಜಾಸ್ತಿ ಆಗಿದ್ದು 2 ಜಿಲ್ಲೆಯಲ್ಲಿ ಎಲ್ಲಿಯೂ ಸಿಗಲಾರದ ಪರಿಸ್ಥಿತಿಯಲ್ಲಿ ನಾವಿದ್ದೇವೆ.

ಸ್ಥಳೀಯ ಕೆಂಪು ಕಲ್ಲು ಹಾಗೂ ಮರಳಿನಿಂದ ಅತೀ ಕಡಿಮೆ ಖರ್ಚಿನಲ್ಲಿ ಬಡವರು, ಹಿಂದುಳಿದ ವರ್ಗದವರು, ದೀನದಲಿತರು ಮನೆ, ಹಟ್ಟಿ ಕೊಟ್ಟಿಗೆಗಳನ್ನು ಕಟ್ಟುತ್ತಾರೆ. ಕಳೆದ 2-3 ತಿಂಗಳಿಂದ ಸಂಪೂರ್ಣವಾಗಿ ಕೆಲಸ ಸ್ಥಗಿತಗೊಂಡು ಬಹಳ ಕಷ್ಟದಲ್ಲಿದ್ದಾರೆ. ಅಷ್ಟೆ ಅಲ್ಲದೆ ಅತೀ ಹೆಚ್ಚು ಮಳೆ. ನೆರೆ ಮತ್ತು ಸುಂಟರಗಾಳಿಯಿಂದ ಅನೇಕ ಮನೆಗಳು ಹಟ್ಟಿ ಕೊಟ್ಟಿಗೆಗಳು ನಾಶವಾಗಿರುತ್ತದೆ. ಇದನ್ನು ಸರಿಪಡಿಸಲು ಪುನಃ ನಿರ್ಮಾಣ ಮಾಡಲು ಈ ಮಳೆಗಾಲದಲ್ಲಿ ಬಹಳ ಕಷ್ಟವಾದರೂ ಕೆಂಪುಕಲ್ಲು ಮತ್ತು ಮರಳು ಸಿಗದಿದ್ದರಿಂದ ಇನ್ನಷ್ಟು ಅಡಚಣೆ ತೊಂದರೆಯಾಗಿದೆ. ಈ ಬಗ್ಗೆ ನೂರಾರು ವರ್ಷದಿಂದ ನಡೆಯುತ್ತಿರುವ ವ್ಯವಸ್ಥೆಗೆ ವಿರುದ್ಧವಾಗಿ ಸರಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ನಮ್ಮ ಗಮನಕ್ಕೆ ಬಂದಿದೆ.

ನಮ್ಮ ಜಿಲ್ಲೆಯ ಹಿಂದಿನ ಲೋಕಸಭಾ ಸದಸ್ಯರು ಆದ ಶ್ರೀಯುತ ನಳಿನ್ ಕುಮಾರ್ ಕಟೀಲು ಈ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕೋಸ್ಕರ ಬಹಳ ಕಡಿಮೆ ಬೆಲೆಯಲ್ಲಿ ಸಿಗುವಂತಹ ವ್ಯವಸ್ಥೆಗೆ ಪ್ರಯತ್ನ ಪಟ್ಟಿರುವುದನ್ನು ನೆನಪಿಸಿಕೊಳ್ಳಬಹುದು ಈಗಿನ ನಮ್ಮ ಸ್ಥಳೀಯ ಸಂಸದರು, ಹಾಗೂ ಶಾಸಕರು (ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆ) ಬಹಳಷ್ಟು ಪ್ರಯತ್ನವನ್ನೂ ಮಾಡಿದರೂ ಫಲಕಾರಿಯಾಗದೆ ಕರ್ನಾಟಕ ಸರಕಾರ ತಟಸ್ಥವಾಗಿರುವುದು ಬಹಳ ನೋವನ್ನು ತಂದಿದೆ.

ತಾವು ದ. ಕ. ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾಗಿ ಇತ್ತೀಚೆಗೆ ದ. ಕ. ಜಿಲ್ಲಾ ಪಂಚಾಯಿತಿ ಸಭಾಂಗಣದ ಸಭೆಯಲ್ಲಿ ರಾಜ್ಯದ ಗೃಹ ಮಂತ್ರಿಗಳು, ಸಂಸದರು, ಸ್ಥಳೀಯ ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅನೇಕ ಜಿಲ್ಲೆಯ ರಾಜಕೀಯ ನಾಯಕರುಗಳು ಅತೀ ಶೀಘ್ರದಲ್ಲೇ ಮೇಲಿನ ಸಮಸ್ಯೆಯನ್ನು ಪರಿಹಾರ ಮಾಡುವುದಾಗಿ ಆಶ್ವಾಸನೆ ಕೊಟ್ಟಿರುತ್ತೀರಿ. ಆದುದರಿಂದ ತಾವು ಕೂಡಲೇ ಈ ಮೇಲಿನ ಸಮಸ್ಯೆಯನ್ನು ಪರಿಹಾರ ಮಾಡಿಸಿ ಬಡವರಿಗೆ, ದೀನದಲಿತರಿಗೆ ಸಹಾಯ ಮಾಡಬೇಕಾಗಿ ಈ ಮೂಲಕ ವಿನಂತಿಸುತ್ತೇನೆ.

ಮನೆಗಳು ದನದ ಕೊಟ್ಟಿಗೆಗಳು, ಮನೆಯ ಆವರಣಗೋಡೆಗಳು ಹಾಗೂ ತಡೆಗೋಡೆಗಳು ಬಿದ್ದಿರುವುದರಿಂದ ಭಾರೀ ಮಳೆಯಾಗುವ ಈ ಜಿಲ್ಲೆಯಲ್ಲಿ ಕೂಡಲೇ ದುರಸ್ತಿ ಕಾರ್ಯ ಆಗಬೇಕಿದೆ. ಅಷ್ಟೇ ಅಲ್ಲದೆ ಸಾವಿರಾರು ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಕಷ್ಟದಲ್ಲಿದ್ದಾರೆ ಎಂದು ತಮ್ಮ ಗಮನಕ್ಕೆ ತರುತ್ತಿದ್ದೇವೆ.

ಈ ಬಗ್ಗೆ ಕೂಡಲೇ ತಾವು ಕ್ರಮ ಕೈಗೊಂಡು ಈ ಸಮಸ್ಯೆಯನ್ನು ಪರಿಹಾರ ಮಾಡಬೇಕಾಗಿ ವಿನಂತಿಸುತ್ತೇನೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!