ಅವಕಾಶಕ್ಕಾಗಿ ಹೊಂಚು ಹಾಕುತ್ತಿರುವ ಮತೀಯ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ ಕರೆ

ವರ್ಕಾಡಿ- ಜನತೆಗೆ ಯಾವುದೇ ಉಪಯೋಗಕಾರಿ ಕೆಲಸಗಳನ್ನು ಮಾಡದೆ ಏಕೋದರ ಸಹೋದರರಂತೆ ಬಾಳುತ್ತಿರುವ ಜನರನ್ನು ಧರ್ಮ, ಆಹಾರ, ವಸ್ತ್ರ, ಆಚರಣೆಗಳ ಹೆಸರಲ್ಲಿ ಪರಸ್ಪರ ಕಚ್ಚಾಡಿಸಿ ಅಧಿಕಾರಕ್ಕೇರಲು ಮತೀಯ ಶಕ್ತಿಗಳು ಸಂಚು ರೂಪಿಸುತ್ತಿದ್ದು, ನಾಡಿನ ಅಭಿವೃದ್ಧಿ ಮತ್ತು ನೆಮ್ಮದಿಯ ಜೀವನ ಬಯಸುವ ಸಜ್ಜನ ನಾಗರಿಕರು ಈ ಶಕ್ತಿಗಳನ್ನು ದೂರವಿಡಲು ಸಿದ್ಧರಾಗಬೇಕೆಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಕರೆ ನೀಡಿದ್ದಾರೆ.


ಅವರು ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪುರುಷೋತ್ತಮ ಅರಿಬೈಲ್ ಅಧ್ಯಕ್ಷತೆ ವಹಿಸಿದ್ದರು.


ಸಭೆಯಲ್ಲಿ ನೇತಾರರಾದ ಉಮ್ಮರ್ ಬೋರ್ಕಳ, ಮುಹಮ್ಮದ್ ಮಜಾಲ್, ಗಣೇಶ್ ಪಾವೂರು, ಎಎಂ ಉಮ್ಮರ್ ಕುಂಞಿ, ಅಜೀಜ್ ಕಲ್ಲೂರು, ಹಮೀದ್ ಕಣಿಯೂರು, ಹಾಜಿ ಖಲೀಲ್ ಬಜಾಲ್, ಫ್ರಾನ್ಸಿಸ್ ಡಿ’ಸೋಜಾ, ವಿನೋದ್ ಪಾವೂರು, ಅಲಿ ಧರ್ಮನಗರ, ಬಾಸಿತ್ ತಲೆಕ್ಕಿ, ಎಲಿಯಾಸ್ ಡಿ’ಸೋಜಾ, ಸತೀಶ್ ಅರಿಬೈಲ್,ಸ್ವಾಲಿಹ್ ಗಾಂಧಿನಗರ, ಶೀನ ಕೆದುಂಬಾಡಿ, ಕೆಕೆ ಅಶ್ರಫ್, ಸಲಾಮ್ ಮಾಂಕೋಡಿ, ಶರೀಫ್ ಕೆದಕ್ಕಾರ್, ಉಮ್ಮರ್ ಪಾಲೆಂಗ್ರಿ, ಡಿ. ಸೀತಾ, ರಾಜೇಶ್ ಪಾಲೆಂಗ್ರಿ, ಮುಸ್ತಫಾ ವೇದೋಡಿ ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!