Avatar

Rashmitha Acharya

ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ನಾಲ್ವರು ಮೃತ್ಯು

‘ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಹೆದ್ದಾರಿಯ ಕೊಯನಾಡು ಎಂಬಲ್ಲಿ ಜು.25ರ ಶುಕ್ರವಾರ ನಡೆದಿದೆ. ನಿಹಾದ್, ರಿಸ್ವಾನ್, ರಾಶಿಬ್ ಮತ್ತು ರಿಶು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಘಟನೆಯ ಪರಿಣಾಮ ಕಾರಿನಲ್ಲಿದ್ದ ನಾಲ್ವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಸುಳ್ಯದ ಆಸ್ಪತ್ರೆಗೆ ತರಲಾಗಿದ್ದು, ಪ್ರಕ್ರಿಯೆಗಳು ನಡೆಯುತ್ತಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಪಡೆಯುತ್ತಿದ್ದಾರೆ.

Read More

ಆಗಸ್ಟ್ 1 ಹಾಗೂ 2 ರಂದು 15ನೇ ಆವೃತ್ತಿಯ ‘ಆಳ್ವಾಸ್ ಉದ್ಯೋಗ ಮೇಳ..!

ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸಿಕೊಂಡು ಬರುತ್ತಿರುವ ಉದ್ಯೋಗ ಮೇಳದ 15ನೇ ಆವೃತ್ತಿಯು ಆಗಸ್ಟ್ 1 ಹಾಗೂ 2 ರಂದು ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದ್ದಾರೆ. ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2007 ರಲ್ಲಿ ಪ್ರಾರಂಭವಾದ ಆಳ್ವಾಸ್ ಪ್ರಗತಿ ಉದ್ಯೋಗಮೇಳವು ವೃತ್ತಿ ಆಕಾಂಕ್ಷಿಗಳಿಗೆ ಸದಾ ಉದ್ಯೋಗಾವಕಾಶಗಳನ್ನು ನೀಡುತ್ತಾ ಬಂದಿದ್ದು ಈ ಮೇಳವು ವಿಶೇಷವಾಗಿ ಗ್ರಾಮೀಣ ಮತ್ತು ಸವಲತ್ತುಗಳಿಲ್ಲದ ವರ್ಗಗಳ ಪ್ರತಿಭೆಗಳಿಗೆ ಉದ್ಯೋಗ ಅವಕಾಶಕೊಡಿಸುವ…

Read More

ಕುಳೂರು ಸೇತುವೆಯಲ್ಲಿ ವಾಹನ ಸಂಚಾರ ಸುಗಮ

ರಾಷ್ಟ್ರೀಯ ಹೆದ್ದಾರಿ 66 ರ ಕೆಐಒಸಿಎಲ್ ಜಂಕ್ಷನ್ ಮತ್ತು ಕೂಳೂರು ಕಮಾನು ಸೇತುವೆಯ ನಡುವಿನ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ವಾಹನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿತ್ತು. ಇದೀಗ ಮತ್ತೆ ಕುಳೂರು ಸೇತುವೆಯಲ್ಲಿ ವಾಹನ ಸಂಚಾರ ಸುಗಮವಾಗಿದೆ. ಜುಲೈ 22ರ ಸಂಜೆ ಮೊದಲ ಬಾರಿಗೆ ಭಾರೀ ವಾಹನ ದಟ್ಟಣೆ ಕಂಡುಬಂದಿತ್ತು. ಜುಲೈ 23ರಂದು ಇಡೀ ದಿನ ಕೊಟ್ಟಾರ-ಪಣಂಬೂರು ಮಾರ್ಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳ ಸಂಚಾರವನ್ನು ಪರಿಣಾಮಕಾರಿಯಾಗಿ ಸುಗಮಗೊಳಿಸಲು ಸಾಧ್ಯವಾಗದೆ ಪೊಲೀಸರು ಪರದಾಡಿದ್ದರು. ಬುಧವಾರ, ಕುಳೂರಿನ…

Read More

ಮಂಗಳೂರು ನಗರದಲ್ಲಿ ಮತ್ತೆ ಫ್ಲೆಕ್ಸ್ ಹಾವಳಿ -ತ್ವರಿತ ಕಾರ್ಯಾಚರಣೆ ನಡೆಸಬೇಕೆಂದು ಸಾರ್ವಜನಿಕರ ಆಗ್ರಹ

ಮಂಗಳೂರು ನಗರದಲ್ಲಿ ಮತ್ತೆ ಫ್ಲೆಕ್ಸ್ ಹಾವಳಿ ಶುರುವಾಗುವ ಸಾಧ್ಯತೆ ಎದ್ದು ಕಾಣ್ತಾ ಇದೆ . ಈ ಮೂಲಕ ಹಳೆ ಚಾಳಿ ಮುಂದುವರೆದಿದೆ . ಮಹಾನಗರ ಪಾಲಿಕೆ ಇವುಗಳ ಮೇಲೆ ಕಣ್ಣಿಟ್ಟು ತ್ವರಿತ ಕಾರ್ಯಾಚರಣೆ ನಡೆಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಕೆಲವು ತಿಂಗಳ ಹಿಂದೆ ನಿರಂತರ ಕಾರ್ಯಾಚರಣೆ ಮೂಲಕ ಮಂಗಳೂರು ನಗರವನ್ನು ಪ್ಲೆಕ್ಸ್ ಮುಕ್ತಗೊಳಿಸುವಲ್ಲಿ ಪಾಲಿಕೆ ಯಶಸ್ವಿಯಾಗಿತ್ತು. ಆದರೆ ಮುಂಗಾರು ಆರಂಭದ ಬೆನ್ನಲೇ ಈ ಕಾರ್ಯಾಚರಣೆಯ ವೇಗ ಕುಗ್ಗಿತ್ತು ,ಇದೀಗ ಮತ್ತೆ ಕೆಲವು ಕಡೆಗಳಲ್ಲಿ ಪ್ಲೆಕ್ಸ್‌…

Read More

ಕೇರಳದಲ್ಲಿ ಪೂರ್ವಜರ ಆತ್ಮಮೋಕ್ಷಕ್ಕಾಗಿ ಅಚರಿಸುವ ಕರ್ಕಿಡಕ ವಾವು ಬಲಿ

ಉಡುಪಿ: ಕೇರಳದಲ್ಲಿ ಪೂರ್ವಜರ ಆತ್ಮಮೋಕ್ಷಕ್ಕಾಗಿ ಅಚರಿಸುವ ಕರ್ಕಿಡಕ ವಾವು ಬಲಿ(ಬಲಿ ತರ್ಪಣಂ) ವನ್ನು ಮೊದಲ ಬಾರಿಗೆ ಕೇರಳ ಸಮಾಜಂ ಉಡುಪಿ ಸಂಘಟನೆ ಮಲ್ಪೆ ಕಡಲ ತೀರದಲ್ಲಿ ಜುಲೈ 24 ರಂದು ಅಯೋಜಿಸಿತ್ತು. ಮಾಲಯಾಳಂ ಕ್ಯಾಲೆಂಡರ್ ಪ್ರಕಾರ ಜುಲೈ ಮತ್ತು ಅಗಸ್ಟ್ ತಿಂಗಳ ಮಧ್ಯದಲ್ಲಿ ಬರುವ ತಿಂಗಳನ್ನು ಕರ್ಕಿಡಕ ಮಾಸ ಎಂದು ಕರೆಯುತ್ತಾರೆ.ಈ ಸಂದರ್ಭದಲ್ಲಿ ಮೃತ ಪೂರ್ವಜರ ಅತ್ಮ ಶಾಂತಿ ,ಸದ್ಗತಿಗಾಗಿ ಬಲಿ ತರ್ಪಣಂ ಮಾಡುವುದು ಕೇರಳದ ಸಂಪ್ರದಾಯ. ಕೇರಳದ‌ ಪ್ರಮುಖ ಧಾರ್ಮಿಕ ಕ್ಷೇತ್ರ ಗಳಾದ ಆಲುವಾ ಶಿವ…

Read More

ಅಮೇರಿಕಾದಲ್ಲಿ ಹೊಸ ಇತಿಹಾಸ ಬರೆದ ಪುತ್ತೂರಿನ “ಪೂವರಿ” ತುಳು ಮಾಸಿಕ ಪತ್ರಿಕೆ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ವಿಕುಭ ಹೆಬ್ಬಾರಬೈಲು ಸಂಪಾದಕತ್ವದಲ್ಲಿ ಹೊರಡುತ್ತಿರುವ, ದಶಮಾನೋತ್ಸವ ಸಂಭ್ರಮದಲ್ಲಿರುವ “ಪೂವರಿ” ತುಳು ಮಾಸಿಕದ ಜೂನ್ ತಿಂಗಳ ವಿಶೇಷ ಸಂಚಿಕೆಯು ಅಖಿಲ ಅಮೇರಿಕಾ ತುಳು ಅಂಗಣ ಯೂ.ಎಸ್.ಎ.(ಆಟ) ನೇತೃತ್ವದ ‘ಆಟ ಸಿರಿ ಪರ್ಬ- 2025’ ಸಮಾರಂಭದಲ್ಲಿ ಲೋಕಾರ್ಪಣೆಗೊಂಡು ಅಮೇರಿಕಾದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಜಗತ್ತಿನಲ್ಲಿ ಹರಡಿ ಕೊಂಡಿರುವ ಸುಮಾರು 2 ಕೋಟಿ ತುಳುವರ, ಸುಮಾರು 40 ಸಮುದಾಯದ ತುಳು ಮಾತೃ ಭಾಷೆಯಾಗಿರುವ ತುಳುನಾಡಿನ ಏಕೈಕ ತುಳು ಮಾಸಿಕ ‘ಪೂವರಿ’ ಪತ್ರಿಕೆ ಉತ್ತರ ಕೆರೋಲಿನಾ…

Read More

ಮೈ ತುಂಬಿ ಹರಿಯುವ ನೇತ್ರಾವತಿ

ಸುಮಾರು ಎರಡು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ‌ಮಳೆಗೆ ನೇತ್ರಾವತಿ ‌ನದಿ ತುಂಬಿ ಹರಿಯುತ್ತಿದ್ದು, ಇಂದು ನೇತ್ರಾವತಿ ನೀರಿನ ಮಟ್ಟ 6.9 ಮೀ. ಅಗಿದೆ. ಬೆಳಿಗ್ಗೆಯಿಂದ ಮಳೆಯ ಪ್ರಮಾಣ ತುಸು ಕಡಿಮೆಯಾದಂತೆ ಕಾಣುತ್ತಿದ್ದು,ರಾತ್ರಿಯಿಡಿ ಗಾಳಿ ಮಳೆ ಆಗಿದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ಕೂಡ ಈವರೆಗೆ ನೇತ್ರಾವತಿ ನದಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಿಲ್ಲ.ನೇತ್ರಾವತಿ ನದಿಗೆ ಅಲ್ಲಲ್ಲಿ ಆಡ್ಡವಾಗಿ ಚೆಕ್ ಡ್ಯಾಂಗಳು ,ಡ್ಯಾಂಗಳು ನಿರ್ಮಾಣಗೊಂಡ ಕಾರಣದಿಂದ ನೀರಿನ ಹರಿಯುವ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಹಾಗಾಗಿ ನೆರೆಯ ಆತಂಕ ಇತ್ತೀಚಿನ ದಿನಗಳಲ್ಲಿ ‌ಕಡಿಮೆಯಾಗಿದೆ.

Read More

ಉಡುಪಿ: ಸಹಕಾರಿ ಲೆಕ್ಕಪರಿಶೋಧನ ಇಲಾಖೆಯ ಉಪನಿರ್ದೇಶಕಿ ರೇಣುಕಾ, ಸಹಾಯಕ ಜಯರಾಮ್ ಲೋಕಾಯುಕ್ತ ಬಲೆಗೆ

ಉಡುಪಿ: ಉಡುಪಿ ಜಿಲ್ಲಾ ಸಹಕಾರಿ ಸಂಘದ ಲೆಕ್ಕ ಪರಿಶೋಧನ ಇಲಾಖೆಯ ಉಪ ನಿರ್ದೇಶಕಿ ರೇಣುಕಾ ಹಾಗೂ ಪ್ರಥಮ ದರ್ಜೆ ಸಹಾಯಕ ಜಯರಾಮ್ ಅವರು ಉಡುಪಿ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಇಬ್ಬರು ಆರೋಪಿಗಳು ಸೌಹಾರ್ದ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ಮಾಡಿ ಕೊಡಲು ತಲಾ 5000 ರಂತೆ ಒಟ್ಟು 10,000ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲಂಚ ನೀಡಲು ಒಪ್ಪದ ಶಾಂತಿನಿಕೇತನ ಸೌಹರ್ದ ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ನರೇಂದ್ರ…

Read More

ಮಂಜೇಶ್ವರ ಸರ್ವೀಸ್ ರಸ್ತೆಯ ಬಸ್ ನಿಲ್ದಾಣಕ್ಕೆ ತಾಗಿಕೊಂಡ ವಿದ್ಯುತ್ ಟ್ರಾನ್ಸ್‌ಫಾರ್ಮರ್ -ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನ್ ಹಾಗೂ ರೈಲ್ವೇ ನಿಲ್ದಾಣದ ಎದುರು ಭಾಗದ ರಾಷ್ಟ್ರೀಯ ಷಟ್ಪಥ ರಸ್ತೆಗೆ ತಾಗಿಕೊಂಡಿರುವ ಸರ್ವೀಸ್ ರಸ್ತೆಯ ಬಸ್ ನಿಲ್ದಾಣಕ್ಕೆ ತಾಗಿಕೊಂಡೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಿರುವುದು ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಪ್ರತಿದಿನವೂ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಬಸ್ ನಿಲ್ದಾಣವನ್ನು ಉಪಯೋಗಿಸುತ್ತಿರುವುದು ಈ ಆತಂಕಕ್ಕೆ ಮತ್ತಷ್ಟು ಕಾರಣವಾಗಿದೆ. ಸ್ಥಳೀಯ ನಿವಾಸಿಗಳ ಹೇಳಿಕೆಯ ಪ್ರಕಾರ ಬಸ್ ನಿಲ್ದಾಣದ ಬಳಿ, ನಿರಂತರವಾಗಿ ಜನರ ಓಡಾಟ ಇರುವ ಸ್ಥಳದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಿರುವುದು…

Read More

ಸ್ಮಾರ್ಟ್ ಸಿಟಿ ಮತ್ತೊಮ್ಮೆ ಸ್ಮಾರ್ಟ್ ಕ್ಲೀನ್ ಸಿಟಿ ಅಲ್ಲವೆಂದು ಸಾಬೀತು-ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜನರು

ಸ್ಮಾರ್ಟ್ ಸಿಟಿ ಮತ್ತೊಮ್ಮೆ ಸ್ಮಾರ್ಟ್ ಕ್ಲೀನ್ ಸಿಟಿ ಅಲ್ಲವೆಂದು ಸಾಬೀತು ಮಾಡಲು ಹೊರಡ್ತಾ ಇದೆ ಎಂದ್ರೆ ನೀವೆಲ್ಲರೂ ನಂಬಲೇ ಬೇಕು. ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾದಂತಹ ಖಾಯಿಲೆಗಳು ಹರಡದಂತೆ ಎಚ್ಚರ ವಹಿಸೋ ಆರೋಗ್ಯ ಇಲಾಖೆಯ ನಿರ್ದೇಶನಕ್ಕೆ ಇಲ್ಲಿ ಎಳ್ಳು ನೀರು ಬಿಡುವುದು ಸ್ಪಷ್ಟವಾಗಿ ನೋಡ ಬಹುದು . ಕಿವಿ ಕೆಪ್ಪು, ಕಣ್ಣು ಕುರುಡು, ಮೊಸಳೆಯ ಮನಸ್ಸು ಇದ್ದ ಅಧಿಕಾರಿಗಳು ಮಾತ್ರವೇ ಇಂತಹ ಸ್ಥಿತಿಯನ್ನು ನಿರ್ಮಾಣ ಮಾಡಬಲ್ಲರು. ಓಟ್ ಬರುವಾಗ ಹೋದರೆ ಸಾಕು ಅಲ್ಲಿ ತನಕ ಗೋಡೆಗೆ ಕಾಲು…

Read More
error: Content is protected !!