Avatar

Rashmitha Acharya

ಕನ್ನಡ ಭವನ ರೂವಾರಿಗಳಿಗೆ ಡಾ. ಸಿ ಸೋಮಶೇಖರ್ ಗೌರವ ಸನ್ಮಾನ.

ಕರ್ನಾಟಕ ಸರಕಾರ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರೂ ಆದ ಡಾ. ಸಿ. ಸೋಮಶೇಖರ್ ಅವರು ಕಾಸರಗೋಡು ಕನ್ನಡ ಭವನ ಗ್ರಂಥಾಲಯ ದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಯನ್ನು ತನ್ನ ನಿವಾಸಕ್ಕೆ ಬರಮಾಡಿಕೊಂಡು ಕನ್ನಡ ಭವನ ಹಾಗೂ ಕೇರಳ ರಾಜ್ಯ -ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆ ಗಳನ್ನು, ವಿಶೇಷವಾಗಿ ಕಾಸರಗೋಡು ಜಿಲ್ಲೆಯ ಹೊರಗೆ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ತನ್ನ ಕಾರ್ಯ…

Read More

ಕೇರಳ-ಕರ್ನಾಟಕ ಕನ್ನಡ ನುಡಿ ಸಂಭ್ರಮ

ಬೆಂಗಳೂರು: ವೈಟ್‌ಫೀಲ್ಡ್‌ನ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್‌ನಲ್ಲಿ, ‘ತೊದಲ್ನುಡಿ’ ಮಕ್ಕಳ ಸಾಹಿತ್ಯ ಮಾಸಪತ್ರಿಕೆ, ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ-ಗ್ರಂಥಾಲಯ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು (ಕಾಸರಗೋಡು) ಇವುಗಳು ಸಂಯುಕ್ತವಾಗಿ ‘ಕೇರಳ-ಕರ್ನಾಟಕ ಕನ್ನಡ ನುಡಿ ಸಂಭ್ರಮ’ವನ್ನು ಆಚರಿಸಿದರು. ಈ ಸಂಭ್ರಮದ ಅಂಗವಾಗಿ *ಅವಾರ್ಡ್ ಪ್ರದಾನ ಸಮಾರಂಭ ಮತ್ತು ಚುಟುಕು ಕವಿ-ಕಾವ್ಯ ಸಂಗಮ ನಡೆಯಿತು.ಭಾಷೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದವರಿಗೆ, ಕಾಸರಗೋಡು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ-ಗ್ರಂಥಾಲಯವು…

Read More

ಢಾಕಾ ಶಾಲಾ ಕಟ್ಟಡದ ಮೇಲೆ ತರಬೇತಿ ಜೆಟ್ ಬ್ಲಾಸ್ಟ್ : ಮಡಿದವರ ಸಂಖ್ಯೆ 27ಕ್ಕೆ ಏರಿಕೆ

ಢಾಕಾ:ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಪತನಗೊಂಡು ಶಾಲಾ ಕಟ್ಟಡಕ್ಕೆ ಅಪ್ಪಳಿದ ದುರಂತಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದವರ ಸಂಖ್ಯೆ ಇದೀಗ 27ಕ್ಕೆ ಏರಿಕೆಯಾಗಿದೆ.ಸಾವನ್ನಪ್ಪಿದವರಲ್ಲಿ 25 ವಿದ್ಯಾರ್ಥಿಗಳಿದ್ದಾರೆ . ಸುಮಾರು 170 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಶಾಲೆಯ ಸಿಬ್ಬಂದಿ ಸೈದೂರ್ ರೆಹಮಾನ್ ಮಾಹಿತಿ ನೀಡಿದ್ದಾರೆ. ಜುಲೈ 21ರ ಮಧ್ಯಾಹ್ನ 1:06ರ ಸುಮಾರಿಗೆ ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ಢಾಕಾದ ಉತ್ತರದ…

Read More

ಧರ್ಮಸ್ಥಳ ಪ್ರಕರಣ : ಸೌಜನ್ಯ ಪರ ಹೋರಾಟಕ್ಕೆ ಬಂದ ಪಾದಯಾತ್ರಿಗಳನ್ನು ತಡೆದ ಸ್ಥಳೀಯರು : ಪೊಲೀಸರ ಮಧ್ಯಪ್ರವೇಶ

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೌಜನ್ಯಳಿಗೆ ನ್ಯಾಯಕೊಡಿಸಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ಮಾಡಿ ಬಂದಿದ್ದ ಬೆಂಗಳೂರು ಯಲಹಂಕದ ಶರಣಬಸಪ್ಪ ಕಬ್ಜ ಮತ್ತು ತಂಡದವರನ್ನು ಸೋಮವಾರ ಧರ್ಮಸ್ಥಳದ ವ್ಯಾಪಾರಿಗಳು ಹಾಗೂ ಸ್ಥಳೀಯರು ಸೇರಿ ಧರ್ಮಸ್ಥಳದ ಮಹಾದ್ವಾರದ ಬಳಿ ತಡೆದ ಹಿನ್ನಲೆಯಲ್ಲಿ ಎರಡು ಗುಂಪಿನ ನಡುವೆ ಮಾತಿನ ಚಕಮಕಿ, ಗಲಾಟೆ ನಡೆದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮಧ್ಯಪ್ರವೇಶಿ ಪಾದಯಾತ್ರೆ ಬಂದವರನ್ನು ಸುರಕ್ಷಿತವಾಗಿ ಠಾಣೆಗೆ ಕರೆದೊಯ್ದು ಪರಿಸ್ಥಿತಿ ಶಾಂತಗೊಳಿಸಿದ್ದು ಬಳಿಕ ಪಾದಯಾತ್ರಿಕರು ಹಿಂತಿರುಗಿದರು. ಸೋಮವಾರ ಮಧ್ಯಾಹ್ನದ ವೇಳೆಗೆ ಪಾದಯಾತ್ರೆಯಲ್ಲಿ ಬಂದ…

Read More

ಬಿಜೆಪಿ ಯುವ ಮುಖಂಡ, ಉದ್ಯಮಿ ನಿತಿನ್ ಸುವರ್ಣ ಆತ್ಮಹತ್ಯೆ

ಮಂಗಳೂರು : ಯುವ ಬಿಜೆಪಿ ಮುಖಂಡ, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕ್ರಿಯಾಶೀಲ ಬಿಜೆಪಿ ಮುಖಂಡರಾಗಿದ್ದ, ಯುವ ಉದ್ಯಮಿ ನಿತಿನ್ ಸುವರ್ಣ ಆತ್ಮಹತ್ಯೆ ಮಾಡಿಕೊಂಡಿರುವ ಸಾರ್ವಜನಿಕರಲ್ಲಿ ದಿಗ್ರಮೆ ಮೂಡಿಸಿದೆ. ನಿನ್ನ ರಾತ್ರಿ ಮಾತ್ರೆಗಳನ್ನು ಸೇವಿಸಿ ಅಸ್ವಸ್ವರಾಗಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆಗೆ ಫಲಕಾರಿಯಾಗದೆ ಸಾವನ್ನು ಅಪ್ಪಿರುತ್ತಾರೆ . ಮಂಗಳೂರು ಉತ್ತರ ಶಾಸಕ ಡಾ. ಭಾರತ್ ಶೆಟ್ಟಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು ಅವರು ಕ್ರಿಯಾಶೀಲ ಯುವ ನಾಯಕರಾಗಿದ್ದರು.ಬಿಜೆಪಿ ಸಂಘಟನೆಯಲ್ಲಿ ಸಕ್ರಿಯರಾಗಲಿದ್ದರು . ಪರ್ಸನಲ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು…

Read More

ರಾಜ್ಯದಲ್ಲಿ ವಿಐಪಿ ಸಂಚಾರದ ವೇಳೆ ಸೈರನ್ ಬಳಕೆಗೆ ಕಡಿವಾಣ

ಬೆಂಗಳೂರು : ರಾಜ್ಯದಲ್ಲಿ ವಿಐಪಿ ಸಂಚಾರದ ವೇಳೆ ಸೈರನ್ ಬಳಕೆಗೆ ಕಡಿವಾಣ ಹಾಕುವ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.ಸೈರನ್ಗಳನ್ನು ಕೇವಲ ತುರ್ತು ಸೇವಾ ವಾಹನಗಳಾದ ಅಂಬ್ಯುಲೆನ್ಸ್, ಪೊಲೀಸ್ ವಾಹನಗಳು ಮತ್ತು ಅಗ್ನಿಶಾಮಕ ವಾಹನಗಳು ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು. ಈ ಅದೇಶವನ್ನು ಘಟಕಾಧಿಕಾರಿಗಳು ಸಂಪೂರ್ಣವಾಗಿ ಪಾಲಿಸುವಂತೆ ತಮ್ಮ ಅಧೀನದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸುವುದು ಎಂದು ಸೂಚನೆ ನೀಡಲಾಗಿದೆ. ಗಣ್ಯ ವ್ಯಕ್ತಿಗಳ ಸಂಚರಣೆ ಸಮಯದಲ್ಲಿ ಅನವಶ್ಯಕವಾಗಿ ಸೈರನ್ ಬಳಕೆ ಮಾಡುವುದರಿಂದ ಗಣ್ಯ ವ್ಯಕ್ತಿಗಳು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾರೆ…

Read More

ಬಿಹಾರ ಮೂಲದ ವ್ಯಕ್ತಿಗೆ 10 ಕೋಟಿ ವಂಚಿಸಿದ ರೋಶನ್ ಸಲ್ದಾನಾ – ಪ್ರಕರಣ ಸಿಐಡಿಗೆ

ದೇಶದ ವಿವಿದೆಡೆ ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ಕೊಟ್ಯಾಂತರ ರೂಪಾಯಿ ವಂಚಿಸಿ ಮಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ರೋಶನ್ ಸಲ್ದಾನಾ ವಂಚನೆ ಪ್ರಕರಣದಲ್ಲಿ ಒಂದು ಪ್ರಕರಣವನ್ನು ಇದೀಗ ಸಿಐಡಿ ತನಿಖೆ ನಡೆಸಲಿದೆ.ದೇಶಾದ್ಯಂತ ಉದ್ಯಮಿಗಳನ್ನು ಗುರಿಯಾಗಿಸಿ ಮೋಸದ ಜಾಲದಲ್ಲಿ ಸಿಲುಕಿಸುತ್ತಿದ್ದ ರೋಶನ್ ಸಲ್ಮಾನ ವಿರುದ್ಧ ಬಿಹಾರ ಮೂಲದ ಉದ್ಯಮಿಯೊಬ್ಬರು ಮಂಗಳೂರಿನಲ್ಲಿ ಕೇಸು ದಾಖಲಿಸಿದ್ದಾರೆ. ತನಗೆ ಹತ್ತು ಕೋಟಿಗೂ ಮಿಕ್ಕಿ ಮೋಸ ಮಾಡಿದ್ದಾಗಿ ದೂರು ನೀಡಿದ್ದಾರೆ. ಹತ್ತು ಕೋಟಿಯಷ್ಟು ಮೊತ್ತದ ವಂಚನೆ ಪ್ರಕರಣ ದಾಖಲಾದರೆ, ಸಿಐಡಿಗೆ ಕೊಡಬೇಕೆಂಬ ಕಾನೂನಿನಂತೆ ಸದ್ರಿ…

Read More

ಕೈಬೀಸಿ ಕರೆಯುವ ಬೇಕಲಕೋಟೆ…

ಕೇರಳ ರಾಜ್ಯದ ಸ್ವರ್ಣ ಕಿರೀಟದಂತೆ ,ಗಜರಾಜನಂತೆ, ಸಪ್ತ ಭಾಷೆಯ ಸಂಗಮ ನಾಡು ತುಳು, ಮಲಯಾಳಂ, ಕನ್ನಡ, ಮರಾಠಿ, ಬ್ಯಾರಿ ,ಕೊಂಕಣಿ, ಉರ್ದು ಭಾಷೆಗಳ ಪೊರೆಯುವ ತೊಟ್ಟಿಲು ಈ ಗೂಡು. ಚರಿತ್ರೆಯ ಪುಟಗಳನ್ನು ಒಮ್ಮೆ ಇಣುಕಿ ನೋಡಿದರೆ ಭವ್ಯವಾದ ಇಕ್ಕೇರಿ ನಾಯಕರು ಕಟ್ಟಿದ ಬೇಕಲ ಕೋಟೆ ಮತ್ತು ಅದರ ಅಕ್ಕಪಕ್ಕದ ನೆಲೆಗಳು ಪುಳಕಿಸುವಂತದ್ದು. ಸರ್ವ ಧರ್ಮದ ಶಾಂತಿಯ ತೋಟವಾಗಿರುವ, ದೈವಗಳ ಆರಾಧನೆಯ ಬೀಡಾಗಿರುವ ಕಾಸರಗೋಡು ದೇವಾಲಯಗಳಿಗೆ, ಮಂದಿರಗಳಿಗೆ, ಪಳ್ಳಿಗಳಿಗೆ ಹೆಸರುವಾಸಿ. ಉದಾಹರಣೆ ಮಧೂರು, ಅಡೂರು, ಅನಂತಪುರ , ಮಾಲಿಕ್…

Read More

ಗಡಿನಾಡ ಗುಡಿಯಲ್ಲಿ ಕನ್ನಡಮ್ಮನ ಉಸಿರಾಗಿರುವ ಶಾಲೆ

ಗಡಿನಾಡಿನಲ್ಲಿ ನಿರಂತರ ಕನ್ನಡ ಕಲರವಿಸಲು ಭಾಷಾ ಅಭಿಮಾನಿಗಳು, ಭಾಷೆಯ ಆಡುವವರು ಎಷ್ಟು ಮುಖ್ಯವೋ ಇವುಗಳಿಗೆ ನೀರರೆಯುವ ಸಾಹಿತ್ಯ , ಕನ್ನಡ ಭವನ, ಕನ್ನಡ ಶಾಲೆಗಳು ಅಷ್ಟೇ ಮುಖ್ಯ. ಒಂದು ಕಾಲದಲ್ಲಿ ನೂರಾರು ಶಾಲೆಗಳು ಅಸ್ತಿತ್ವದಲ್ಲಿದ್ದು ಅವುಗಳನ್ನೆಲ್ಲಾ ಸುವರ್ಣಾಕ್ಷರದಲ್ಲಿ ಬರೆಯುತ್ತಿದ್ದ ಕಾಲವದು. ಇಂದು ಆ ಸಂಖ್ಯೆಗಳು ಕುಗ್ಗುತ್ತಾ ಇದೆ, ಭಾಷಾ ಅಭಿಮಾನ ಇಲ್ಲಿನ ಅನ್ಯ ಭಾಷೆಯ ಮೇಲಿನ ವ್ಯಾಮೋಹದಿಂದ ಕಡಿಮೆ ಆಗ್ತಾ ಇದೆ. ಈ ವ್ಯಾಮೋಹದ ಜಾಲವು ಬಹುಶಃ ಗಡಿನಾಡು ಕೈ ತಪ್ಪಿದಾಗಿನಿಂದ ಆರಂಭವಾಗಿತ್ತೆಂಬುದು ಸ್ಪಷ್ಟ. ಗಡಿನಾಡ ಕನ್ನಡಿಗರ…

Read More

ಜನಾರ್ದನ ಚೆಂಡ್ತಿಮಾರ್ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಂತಾಪ

ಮಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಂದಾಳು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಬಂಟ್ವಾಳ ಪುರಸಭೆ ಸದಸ್ಯ ಜನಾರ್ದನ ಚೆಂಡ್ತಿಮಾರ್ ಅವರ ನಿಧನಕ್ಕೆ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ಸೂಚಿಸಿದೆ. ಜನಾರ್ದನ ಚೆಂಡ್ತಿಮಾರ್ ಅವರ ನಿಧನದಿಂದ ಜಿಲ್ಲಾ ಕಾಂಗ್ರೆಸ್ ಆಘಾತಕ್ಕೊಳಗಾಗಿದೆ. ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮುಖ ರಾಜಕಾರಣಿಗಳಿಗೆ ಮಾದರಿಯಾಗಿದ್ದರು. ಜನಪರ, ಜೀವಪರ ಚಳವಳಿಗಳಲ್ಲಿ ಭಾಗಿಯಾಗುತ್ತಾ ಜನಸಾಮಾನ್ಯರ ಧ್ವನಿಯಾಗಿದ್ದರು. ರಾಜಕೀಯದ ಜೊತೆಗೆ ಸಾಮಾಜಿಕ ಸೇವೆಯೂ ಅನುಪಮವಾದುದು. ಭ್ರಷ್ಟಾಚಾರ ರಹಿತ ನಾಯಕರಾಗಿದ್ದ…

Read More
error: Content is protected !!