VJ SHARATH BEKUR

VJ SHARATH BEKUR

ಕುಂಬಳೆ ರೈಲ್ವೆ ನಿಲ್ದಾಣ ಪರಿಸರ ಸ್ವಚ್ಛಗೊಳಿಸಿದ ಮೂಹಿಮತ್ ಶಾಲಾ ವಿದ್ಯಾರ್ಥಿಗಳು.

ಕುಂಬಳೆ: ಕುಂಬಳೆ ರೈಲು ನಿಲ್ದಾಣ ಸಮೀಪವಿದ್ದ ಕಾಡು, ಪೊದೆಗಳನ್ನು ಪುತ್ತಿಗೆ ಮೂಹಿಮತ್ ಹೈಯರ್ ಸೆಕೆಂಡರಿ ಶಾಲೆಯ ಲ್ಯಾಂಗ್ವೇಜ್ ಕ್ಲಬ್ ನ ವಿದ್ಯಾರ್ಥಿಗಳು ಸಂಪೂರ್ಣ ಸ್ವಚ್ಛಗೊಳಿಸಿದರು. ನಿಲ್ದಾಣ ಪರಿಸರದಲ್ಲಿ ಸುತ್ತಲೂ ಕಾಡು ಪೊದೆ ಅವರಿಸಿದ ಕಾರಣ ಪ್ರಯಾಣಿಕರಿಗೆ ನಿಲ್ಲಲು ಕಷ್ಟವಾಗುತ್ತಿತ್ತು. ಇದನ್ನು ಮನಗಂಡು ಈ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಸ್ವಚ್ಛಗೊಳಿಸಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯವನ್ನು ರೈಲ್ವೆ ಅಧಿಕಾರಿಗಳು ಮತ್ತು ಪ್ರಯಾಣಿಕರು ಶ್ಲಾಗಿಸಿದರು. ವಿದ್ಯಾರ್ಥಿಗಳ ಜೊತೆ ಶಿಕ್ಷಕರಾದ ದೇವರಾಜ್, ಆಶಾಲತಾ, ರಾಜೇಶ್ವರಿ ಜೊತೆಗಿದ್ದರು.

Read More

ಮಂಗಳೂರಿನ ರಥಬೀದಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 25 ಲಕ್ಷ ರೂ ವೆಚ್ಚದ ವಿವೇಕ ಕೊಠಡಿಯ ಗುದ್ದಲಿ ಪೂಜೆ ಹಾಗೂ ನೂತನ ವಿವೇಕ ಕೊಠಡಿಯ ಉದ್ಘಾಟನೆ:

ಮಂಗಳೂರಿನ ರಥಬೀದಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 25 ಲಕ್ಷ ರೂ ವೆಚ್ಚದ ವಿವೇಕ ಕೊಠಡಿಯ ಗುದ್ದಲಿ ಪೂಜೆ ಹಾಗೂ ನೂತನ ವಿವೇಕ ಕೊಠಡಿಯ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, 2022-23ನೇ ಸಾಲಿನ ವಿವೇಕ ಯೋಜನೆಯ ಕೊಠಡಿಗಳು ಇದಾಗಿದೆ. ಈ ಕಾಲೇಜಿನ ವಿಜ್ಞಾನ ಪ್ರಯೋಗ ಶಾಲೆಯ ಉನ್ನತೀಕರಣಕ್ಕೆ ಬೇಡಿಕೆಯಿದ್ದು, ಎಂ.ಆರ್.ಪಿ.ಎಲ್, ಎಂ.ಸಿ.ಎಫ್ ನಂತಹ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಸಿಎಸ್ಆರ್ ಅನುದಾನದ ಮೂಲಕ ಬೇಡಿಕೆಯನ್ನು ಪೂರ್ಣ ಗೊಳಿಸಲು ಪ್ರಯತ್ನಿಸಲಾಗುವುದು. ಇದೇ ವೇಳೆ…

Read More

ಕುಟ್ಟಿ ತೆಯ್ಯಂ-ಆದಿ ಮತ್ತು ವೇಡನ್ ತೆಯ್ಯಂ

ಆಟಿ ಮಾಸವನ್ನು ‘ಕರ್ಕಟಕ’ ಮಾಸವೆಂದು ಕರೆಯುತ್ತಾರೆ. ಈ ಅವಧಿಯಲ್ಲಿ ಉತ್ತರ ಮಲಬಾರ್ ಭಾಗದಲ್ಲಿ ಅದರಲ್ಲೂ ಪ್ರಮುಖವಾಗಿ ಕಾಸರಗೋಡು ಮತ್ತು ಕಣ್ಣೂರ್ ಈ ಭಾಗದಲ್ಲಿ ದೈವಾರಾಧನೆಗಳು ದೇವಾಲಯಗಳಲ್ಲಿ ನಡೆಯುವುದು ಬಹುತೇಕ ವಿರಳವಾಗಿರುತ್ತದೆ. ಶೂನ್ಯ ಮಾಸದಲ್ಲಿ ಕೋಲಗಳನ್ನು ಕಟ್ಟಿ ಆಡಿಸುವ ಸಂಪ್ರದಾಯ ತುಂಬಾ ಕಡಿಮೆ. ಕಲಶ ಮಹೋತ್ಸವದ ಬಳಿಕ ಯಾವುದೇ ಕಳಿಯಾಟಗಳು, ದೈವಕಟ್ಟುಗಳು ನಡೆಯುವುದಿಲ್ಲ ಮುಂದಿನ ತುಲಾ ಹತ್ತು ಬರುವ ತನಕ. ಆದರೆ ಈ ನಡುವೆಯೂ ಕೂಡ ಒಂದು ವೈಶಿಷ್ಟವಾದ ದೈವರಾಧನೆಗಳು ನಡೆಯುತ್ತದೆ. ಆದರೆ ಇದು ವಯಸ್ಕರ ಕಟ್ಟಿ ಆಡುವ…

Read More

ರಸ ಗೊಬ್ಬರದ ಬೆಲೆಏರಿಕೆ : ರೈತಸಂಘದ ಪ್ರತಿಭಟನೆ

ಕೇಂದ್ರದ ಮೋದಿ ಸರಕಾರವು ರಾಸಾಯಿನಿಕ ಗೊಬ್ಬರಗಳ ಬೆಲೆ ಯನ್ನು ವಿಪರೀತವಾಗಿ ಹೆಚ್ಚಿಸಿದನ್ನು ಪ್ರತಿಭಟಿಸಿಕೊಂಡು ರೈತ ಸಂಘ(AIKS) ಮಂಜೇಶ್ವರ ಏರಿಯಾ ಸಮಿತಿಯ ನೇತೃತ್ವದಲ್ಲಿ ಪೈವಳಿಕೆ ಅಂಚೆ ಕಚೇರಿಗೆ ರೈತರ ಮಾರ್ಚ್ ಮತ್ತು ಧರಣಿ ನಡೆಯಿತು. ರೈತಸಂಘದ ಜಿಲ್ಲಾ ಉಪಾಧ್ಯಕ್ಷರಾದ ಎ. ಚಂದ್ರಶೇಖರ್ ಉದ್ಘಾಟಿಸಿದರು. ಏರಿಯಾ ಅಧ್ಯಕ್ಷರಾದ ಅಬ್ದುಲ್ ರಸಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಗೀತಾ ಸಾಮಾಣಿ, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ, ಪಂಚಾಯತ್ ಸದಸ್ಯರಾದ ಶ್ರೀನಿವಾಸ್ ಭಂಡಾರಿ, ಅಬ್ದುಲ್ಲ ಕೆ, ಶ್ರೀಮತಿ.ರಹಮತ್ ನೇತಾರರಾದ…

Read More

ಕಾ| ಲೋಕಯ್ಯ ಪೂಜಾರಿಯವರ 8 ನೇ ವಾರ್ಷಿಕ ಸಂಸ್ಮರಣೆ

ಉಪ್ಪಳ : ಕಾ| ಲೋಕಯ್ಯ ಪೂಜಾರಿ ಯವರ 8 ನೇ ವಾರ್ಷಿಕ ಸಂಸ್ಮರಣೆ ಬೇಕೂರು ಸುಭಾಷ್ ನಗರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕಯ್ಯ ಪೂಜಾರಿಯವರ ಸಹೋದರರಾದ ಕೃಷ್ಣಪ್ಪ ಪೂಜಾರಿ ವಹಿಸಿದರು. ಕಾರ್ಯಕ್ರಮವನ್ನು ಸಿ.ಪಿ.ಐ (ಎಂ) ಲೋಕಲ್ ಕಮಿಟಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬೋಳ್ಳಾರು ಉದ್ಘಾಟಿಸಿ ಮಾತನಾಡಿದರು. ಏರಿಯಾ ಕಮಿಟಿ ಸದಸ್ಯರಾದ ಡಿ.ಕಮಲಾಕ್ಷ ಲೋಕಲ್ ಕಮಿಟಿ ಸದಸ್ಯರಾದ ಪ್ರವೀಣ್,ಪಾರ್ವತಿ,ಸಜಾನ್, ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ಯು ಶೆಟ್ಟಿ ಹಾಗೂ ಹಿರಿಯ ಕಮಿನಿಷ್ಟ್ ನೇತಾರ ದಾಮೋದರ್ ಕಣ್ಣಟಿಪಾರೆ ,ಯುವಶಕ್ತಿ…

Read More

1930 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಮಾಸಿಕ ಸಭೆ ಸಮಾಪ್ತಿ

ಕಾಸರಗೋಡು :1930 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಮಾಸಿಕ ಸಭೆಯು ಅಣoಗೂರು ಶ್ರೀ ಶಾರದಾಂಬ ಕಲ್ಯಾಣ ಮಂಟಪದಲ್ಲಿ ನಡೆಯಿತ್ತು . ಕಾಸರಗೋಡು ಯೋಜನಾಧಿಕಾರಿ ಶ್ರೀ ದಿನೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕುತ್ಯಾಳ ನವಜೀವನ ಸಮಿತಿಯ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಅಧ್ಯಕ್ಷ ಸ್ಥಾನ ವಹಿಸಿದರು. ಈ ಸಂದರ್ಭದಲ್ಲಿ ಉಡುಪಿ ಪ್ರಾದೇಶಿಕ ವಿಭಾಗ ಜನಜಾಗೃತಿ ಯೋಜನಾಧಿಕಾರಿ ಶ್ರೀ ಗಣೇಶ ಆಚಾರ್ಯ , ಕಾಸರಗೋಡು ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀ ವೆಂಕಟ್ರಮಣ ಹೊಳ್ಳ , ಶ್ರೀ ಕ್ಷೇತ್ರ…

Read More

ಮಂಜೇಶ್ವರ ರೈಲ್ವೇ ನಿಲ್ದಾಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಅಂತಿಮ ಹಂತಕ್ಕೆ ತಲುಪಿದ್ದರೂ ಪ್ರಧಾನ ಕಟ್ಟಡವು ತೀರಾ ಶೋಚನೀಯಾವಸ್ಥೆಯಲ್ಲಿ

ಮಂಜೇಶ್ವರ : ಮಂಜೇಶ್ವರ ರೈಲ್ವೇ ನಿಲ್ದಾಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಅಂತಿಮ ಹಂತಕ್ಕೆ ತಲುಪಿದ್ದರೂ ಪ್ರಧಾನ ಕಟ್ಟಡವು ತೀರಾ ಶೋಚನೀಯಾವಸ್ಥೆಯಲ್ಲಿ ಮುಂದುವರಿಯುತ್ತಿದೆ. ನಿಲ್ದಾಣದ ಕಚೇರಿ ಕಾರ್ಯಾಚರಿಸುತ್ತಿರುವ ಕಟ್ಟಡ ಇದೀಗ ಆರಂಭಗೊಳ್ಳಲು ಮೇಲಾಧಿಕಾರಿಗಳ ಹಸಿರು ನಿಶಾನೆಗಾಗಿ ಕಾಯುತ್ತಿದೆ. ಬಹಳ ಹಳೆಯದಾಗಿರುವ ಕಟ್ಟಡವೊಂದರಲ್ಲಿ ನಿಲ್ದಾಣದ ಕಚೇರಿ ಇದೀಗ ಕಾರ್ಯಾಚರಿಸುತ್ತಿದೆ. ಮಳೆ ಬಿರುಸುಗೊಳ್ಳುತಿದ್ದಂತೆ ಸೋರಲಿಕ್ಕೂ ಶುರುವಾಗಿದೆ. ನೀರಿನ ಸೋರಿಕೆಯನ್ನು ತಡೆಯಲು ಮೇಲ್ಭಾಗಕ್ಕೆ ಪ್ಲಾಸ್ಟಿಕ್ ಹೊದಿಕೆಯ ಜೊತೆಯಾಗಿ ಶೀಟನ್ನು ಹಾಕಲಾಗಿದೆ. ಟಿಕೆಟ್ ಕೌಂಟರ್ ಹಾಗೂ ಸ್ಟೇಶನ್ ಮಾಸ್ಟರ್ ಕಚೇರಿಯ್ಲಲೂ ಇದೆ ಶೋಚನೀಯಾವಸ್ಥೆ ಇದೆ….

Read More

ಕೊಂಡೆವೂರು ಶ್ರೀಗಳ 22ನೇ ಚಾತುರ್ಮಾಸ್ಯವ್ರತ ಸಂಕಲ್ಪ

ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಪೂಜ್ಯ ಶ್ರೀಗಳು ತಮ್ಮ 22 ನೇ ಚಾತುರ್ಮಾಸ್ಯವ್ರತ ಸಂಕಲ್ಪವನ್ನು ಗುರುಪೂರ್ಣಿಮೆಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೈಗೊಂಡರು. ಬಳಿಕ ಬೆಳಿಗ್ಗೆ 9.00ಕ್ಕೆ ಗಣಹೋಮ, ಶ್ರೀ ನಿತ್ಯಾನಂದ ಗುರುಗಳಿಗೆ ಪಂಚಾಮೃತಾಭಿಷೇಕ ವಿಶೇಷ ಸೀಯಾಳಭಿಷೇಕ, 10:30 ರಿಂದ ವ್ಯಾಸವಪೂಜೆ 12:30ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಯಿತು. ಸಂಜೆ 5 ಗಂಟೆ ಗೆ 108 ದಿನಗಳ ಸಂಧ್ಯಾ ಭಜನೆಗೆ ಪರಮಪೂಜ್ಯ ಶ್ರೀಗಳು ಚಾಲನೆ ನೀಡಿದರು.ಸಂಜೆ 6:30ಕ್ಕೆ ಮಹಾಪೂಜೆಯನಂತರ ಶ್ರೀ ಗುರುಪಾದುಕಾಪೂಜೆ ನಡೆದು ಬಳಿಕ…

Read More

ನಗರಸಭೆಯ ಭ್ರಷ್ಟಾಚಾರ ಪ್ರತಿಭಟಿಸಿ ಬಿಜೆಪಿ ಮಾರ್ಚ್ ಪೋಲೀಸರಿಂದ ಸತತ ಎರಡನೇ ದಿನವೂ ಜಲಫಿರಂಗಿ ಪ್ರಯೋಗ.

ಕಾಸರಗೋಡು ನಗರದಲ್ಲಿ ಸತತ ಎರಡನೆಯ ದಿನವೂ ಬಿಜೆಪಿ ಪ್ರತಿಭಟನಾ ಮಾರ್ಚ್ ವಿರುದ್ಧ ಪೋಲೀಸ್ ಜಲಫಿರಂಗಿ ಪ್ರಯೋಗ ನಡೆಯಿತು. ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಗೆ ನಡೆಸಿದ ಮಾರ್ಚ್ ವಿರುದ್ದ ಜಲಫಿರಂಗಿ ಪ್ರಯೋಗ ನಡೆದರೆ ಇಂದು ಬೆಳಿಗ್ಗೆ ನಗರಸಭಾ ಕಾರ್ಯಾಲಯಕ್ಕೆ ನಡೆಸಿದ ಮಾರ್ಚ್ ತಡೆದು ಜಲಫಿರಂಗಿ ಪ್ರಯೋಗ ನಡೆಯಿತು. ಕಾಸರಗೋಡು ನಗರಸಭೆಯ ಅಭಿವೃದ್ಧಿ ರಹಿತ ಭಷ್ಟಾಚಾರಗಳಿಂದ ಕಂಗೆಟ್ಟ ಮುಸ್ಲಿಂಲೀಗ್ ಆಡಳಿತವನ್ನು ಪ್ರತಿಭಟಿಸಿ ಬಿಜೆಪಿ ಪ್ರತಿಭಟನಾ ಮಾರ್ಚ್ ಹಮ್ಮಿಕೊಂಡಿತ್ತು. ನಗರದ ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಿಂದ ಮಾರ್ಚ್ ಆರಂಭಗೊಂಡಿತು. ನಗರಸಭಾ ಕಾರ್ಯಾಲಯದ ಗೇಟಿನ…

Read More

ಹೊಸಂಗಡಿ ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ ನ 15ನೇ ವಾರ್ಷಿಕೋತ್ಸವ ಹಾಗೂ 14ನೇ ವರ್ಷದ ಮೊಸರುಕುಡಿಕೆ ಉತ್ಸವ ಆಗಸ್ಟ್ 15 ರಂದು

ಮಂಜೇಶ್ವರ: ಇಲ್ಲಿನ ಹೊಸಂಗಡಿ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ ನ 15 ನೇ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 14 ನೇ ವರ್ಷದ ಹೊಸಂಗಡಿ ಮೊಸರು ಕುಡಿಕೆ ಉತ್ಸವ ಆಗಸ್ಟ್ 15 ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಂದು ಬೆಳಗ್ಗೆ 8 30 ಕ್ಕೆ ಗಣಹೋಮ ,ಮಧ್ಯಾಹ್ನ 2 ರಿಂದ ಕೃಷ್ಣ ವೇಷ ಸ್ಪರ್ಧೆ , ನಂತರ ,ವಿವಿಧ ಆಟೋಟ ಸ್ಪರ್ಧೆ, ಸಂಜೆ 6.30 ಕ್ಕೆ ಧಾರ್ಮಿಕ ಸಭೆ ನಡೆಯಲಿದೆ.ಕಾರ್ಯಕ್ರಮದ ಆಮಂತ್ರಣ ಪತ್ರವು…

Read More
error: Content is protected !!