Avatar

Shramitha bejja

ಅಮೃತ ಪ್ರಕಾಶ ಪತ್ರಿಕೆ 45ನೇ ಸರಣಿ ಕೃತಿ ಬಿಡುಗಡೆ .

ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಇದರ ವತಿಯಿಂದ ನಡೆಯುವ ಅಮೃತ ಪ್ರಕಾಶ 45ನೇ ಸರಣಿ ಕೃತಿ ಕೊಡಗಿನ ಚಿತ್ರ ಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈ ಯವರ ಸಾಹಿತ್ಯ ಮತ್ತು ಡಿಜಿಟಲ್ ಗ್ರಾಫಿಕ್ಸ್ ನ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಮೂಡಿ ಬಂದಿರುವ ಕೊಡಗಿನ ಕುಲದೇವತೆ ಶ್ರೀ ಕಾವೇರಿ ಮಾತೆಯ ಪುರಾಣ ಚಿತ್ರ ಕಥಾ ಪುಸ್ತಕ ಕನ್ನಡ, ಇಂಗ್ಲೀಷ್, ಅರೆಭಾಷೆ ಮತ್ತು ತಮಿಳು…

Read More

ಕುವೈಟ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ 45 ನೇ ಘಟಕ ಸ್ಥಾಪನೆ .

ಮಂಗಳೂರು: ಕುವೈಟ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ 45 ನೇ ಘಟಕ ಇತ್ತೀಚೆಗೆ ರಚನೆಗೊಂಡಿತು. ಗೌರವಾಧ್ಯಕ್ಷರಾಗಿ ನಕ್ರೆ ಸತೀಶಚಂದ್ರ ಶೆಟ್ಟಿ ಆಯ್ಕೆಯಾದರು. ಅಧ್ಯಕ್ಷರಾಗಿ ಯದುನಾಥ್ ಆಳ್ವ ನೇಮಕಗೊಂಡರು. ಸಂಚಾಲಕರಾಗಿ ಸನತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರು: ವಿಲ್ಸನ್ ಡಿ’ಸೋಜಾ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಎಸ್ ಪೂಜಾರಿ, ಖಜಾಂಚಿಯಾಗಿ ಅಬ್ದುಲ್ ರಜಾಕ್ ನಿಟ್ಟೆ, ಜಂಟಿ ಕಾರ್ಯದರ್ಶಿ: ವಿಶ್ವನಾಥ ಶೆಟ್ಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುರೇಶ್ ಸಾಲಿಯಾನ್, ಕಲ್ಯಾಣ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಶೆಟ್ಟಿ, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಶ್ರೀನಾಥ್ ಪ್ರಭು…

Read More

ವಿವಾದಾತ್ಮಕ ಭಾಷಣ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು .

ಸಾರ್ವಜನಿಕ ಸಭೆಯೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿಯಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಅಕ್ಟೋಬರ್ 20ರಂದು ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಹಿಳೆಯರನ್ನು ಅಪಮಾನ ಮಾಡಿ, ಗರ್ಭಿಣಿಯರನ್ನು ನಿಂದಿಸಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ಭಟ್ ಹೇಳಿದ್ದೇನು?“ಆಚೆ ಮನೆಯಲ್ಲಿ ಒಬ್ಬಳು ಬ್ಯಾರ್ದಿ (ಬ್ಯಾರಿ ಸಮುದಾಯದ ಮಹಿಳೆ ಎಂದರ್ಥ) ಇದ್ಳು….

Read More

ಮಂಚಿಯಲ್ಲಿ ಮಾನಸಿಕ ಸ್ವಾಸ್ಥ್ಯ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ .

ಮಕ್ಕಳ ಮನಸ್ಸಿನ ಒತ್ತಡಗಳು, ಅಂಕ ನಿರ್ಧಾರಿತ ಶಿಕ್ಷಣ ವ್ಯವಸ್ಥೆ, ಆತ್ಮವಿಶ್ವಾಸದ ಕೊರತೆ, ಇಂದಿನ ಸ್ಪರ್ಧಾ ಕಾಲಘಟ್ಟದಲ್ಲಿ ಎದುರಿಸಬಹುದಾದ ಕೀಳರಿಮೆ ಮನೋಭಾವ ಇವುಗಳ ಜೊತೆ ಇನ್ನೂ ಅನೇಕ ವಿಷಯಗಳು ಇಂದಿನ ಮಕ್ಕಳ ಕಲಿಕಾ ಮತ್ತು ಮಾನಸಿಕ ಒತ್ತಡಗಳಿಗೆ ಕಾರಣಗಳಾಗಿವೆ.ಇದರ ಸಲುವಾಗಿ ಮಂಚಿಯ ಕೊಳ್ನಾಡು – ಸಾಲೆತ್ತೂರು ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ “ಮಾನಸಿಕ ಸ್ವಾಸ್ಥ್ಯ ಮತ್ತು ವ್ಯಕ್ತಿತ್ವ ವಿಕಸನ ಶಿಬಿರವು” ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜನೆಗೊಂಡಿತು. ಕೊಳ್ನಾಡು – ಸಾಲೆತ್ತೂರು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ…

Read More

ಎಸ್.ಡಿ.ಟಿ.ಯು ಮಂಗಳೂರು ನಗರ ನೂತನ ಜಿಲ್ಲಾಧ್ಯಕ್ಷರಾಗಿ ರಹಿಮಾನ್ ಬೋಳಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಇಲ್ಯಾಸ್ ಬೆಂಗರೆ ಆಯ್ಕೆ .

ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಮಂಗಳೂರು ನಗರ ನೂತನ ಜಿಲ್ಲಾ ಸಮಿತಿಯ ಪದಗ್ರಹಣ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಇರ್ಫಾನ್ ಕಾನರವರ ಅಧ್ಯಕ್ಷತೆಯಲ್ಲಿ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. 2025-28 ರ ಅವಧಿಗೆ ನೂತನ ಜಿಲ್ಲಾಧ್ಯಕ್ಷರಾಗಿ ರಹಿಮಾನ್ ಬೋಳಿಯಾರ್, ಉಪಾಧ್ಯಕ್ಷರಾಗಿ ಇರ್ಫಾನ್ ಕಾನ ಪ್ರಧಾನ ಕಾರ್ಯದರ್ಶಿಯಾಗಿ ಇಲ್ಯಾಸ್ ಬೆಂಗರೆ, ಕಾರ್ಯದರ್ಶಿಯಾಗಿ ರಹಿಮಾನ್ ಮುನ್ನೂರು, ಕೋಶಾಧಿಕಾರಿಯಾಗಿ ಝುಬೈರ್ ಮಳಲಿ ಕಾರ್ಯ ಕಾರಿಣಿ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ್ ಇಡ್ಯಾ, ರಹೀಮ್ ಮುಲ್ಕಿ ಆಯ್ಕೆಯಾದರು…

Read More

ಪುತ್ತೂರು ಅಕ್ರಮ ಗೋ ಸಾಗಾಟ ಪ್ರಕರಣ : ಇನ್‌ಸ್ಪೆಕ್ಟರ್‌ಗೆ ಚಾರ್ಜ್ ಮೆಮೋ ಜಾರಿ .

ಮಂಗಳೂರು: ಈಶ್ವರಮಂಗಲ ಸಮೀಪದ ಬೆಳ್ಳಿಚಡಾವು ಬಳಿ ಅಕ್ರಮ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್‌ಗೆ ಚಾರ್ಜ್‌ ಮೆಮೋ ಜಾರಿ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಘಟನೆಯ ಬಳಿಕ ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಬಂದು ಒಂದು ಜಾನುವಾರು ಸತ್ತಿರುವುದನ್ನು ಗಮನಿಸಿ ಉಳಿದ ಜಾನುವಾರುಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅದರಲ್ಲಿ ಇರುವ ಜಾನುವಾರುಗಳನ್ನು ಇಳಿಸಬಹುದೇ ಎಂದು ಕೇಳಿದ್ದಾರೆ. ಅನಂತರ ಕಾನ್‌ಸ್ಟೆಬಲ್ ಇನ್‌ಸ್ಪೆಕ್ಟರ್‌ಗೆ ದೂರವಾಣಿ ಮೂಲಕ ವಿಷಯ ತಿಳಿಸುವಾಗ ಅರುಣ್ ಕುಮಾರ್‌ಪುತ್ತಿಲ ಮೊಬೈಲ್ ಕೇಳಿ…

Read More

ಮಂಗಳೂರು – ತಿರುವನಂತಪುರ ಮದ್ಯೆ ಹೊಸ ವಿಮಾನ ಸೇವೆ ಅ. 27 ರಿಂದ ಆರಂಭ … !

ಮಂಗಳೂರು: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಮಂಗಳೂರು ಮತ್ತು ತಿರುವನಂತಪುರ ನಡುವೆ ಹೊಸ ವಿಮಾನ ಸೇವೆಯನ್ನು ಅ. 27 ರಿಂದ ಆರಂಭಿಸಲಿದ್ದು ವಾರದಲ್ಲಿ ಮೂರು ದಿನ ಲಭ್ಯವಿರುತ್ತದೆ. ಈ ಸೇವೆಯು ಎರಡು ಕರಾವಳಿ ನಗರಗಳ ನಡುವಿನ ಸಂಪರ್ಕವನ್ನು ಸುಲಭಗೊಳಿಸಲಿದೆ. ಪ್ರಸ್ತುತ ರೈಲಿನಲ್ಲಿ ಸುಮಾರು 9 ಗಂಟೆಗಳಿರುವ ಪ್ರಯಾಣದ ಸಮಯವು ಈ ವಿಮಾನದಿಂದಾಗಿ ಕೇವಲ 80 ನಿಮಿಷಗಳಿಗೆ ಇಳಿಯಲಿದೆ. ಈ ಮೂಲಕ ವ್ಯಾಪಾರ, ಪ್ರವಾಸೋದ್ಯಮ ಮತ್ತು ವೈಯಕ್ತಿಕ ಪ್ರಯಾಣಕ್ಕೆ ದೊಡ್ಡ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಪ್ರಸ್ತುತ, ಈ ಎರಡು…

Read More

ಬಾರ್ ಬಳಿ ಯುವಕರಿಗೆ ಚೂರಿ ಇರಿತ ಪ್ರಕರಣ .ಆರೋಪಿಗಳ ಜೊತೆ ಅಪರಾಧ ಕೃತ್ಯಕ್ಕೆ ಆಶ್ರಯ ನೀಡಿದವರ ಬಂಧನ .

ಮಂಗಳೂರು: ಬಾರ್ ಬಳಿ ಯುವಕರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅರೋಪಿಗಳ ಜೊತೆ ಅಪರಾಧ ಕೃತ್ಯಕ್ಕೆ ಆಶ್ರಯ ನೀಡಿದವರನ್ನೂ ಬಂಧಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಾದ ಬಳಿಯಲ್ಲಿ ಯುವಕರಿಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಆ. 23 ರಂದು ರಾತ್ರಿ ಸುಮಾರು 10-30 ಗಂಟೆಗೆ ಸುರತ್ಕಲ್ ಕಾನಾ ಬಳಿಯ ದೀಪಕ್ ಬಾರ್ ಬಳಿಯಲ್ಲಿ ಕ್ಷುಲಕ ಕಾರಣಕ್ಕಾಗಿ ಹಸನ್ ಮುಕ್ಷಿತ್ ಮತ್ತು ನಿಝಾಂ ಎಂಬ ಯುವಕರಿಬ್ಬರಿಗೆ ಈ ಹಿಂದೆ…

Read More

ಉಡುಪಿ: ಶಿವಮಣಿ ಮಾಂತ್ರಿಕ‌ ವಾದನಕ್ಕೆ ಮೈಮರೆತ ಸಾವಿರಾರು ಸಂಖ್ಯೆಯ ಜನರು..!

ಉಡುಪಿ: ಜಗತ್‌ಪ್ರಸಿದ್ಧ ಡ್ರಮ್ಸ್ ವಾದಕ ಶಿವಮಣಿ ಅವರ ಡ್ರಮ್‌ಗಳಿಂದ ಮೊಳಗಿದ ಝೇಂಕಾರಕ್ಕೆ ಉಡುಪಿಯ ಜನತೆ ಮನಸೋತರು‌.ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಶ್ರೀ ಪುತ್ತಿಗೆ ನೃಸಿಂಹ ಸಭಾಭವನವನದ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಡ್ರಮ್ಸ್ ಕಲಾವಿದ ಶಿವಮಣಿ ಮತ್ತು ಐರಾ ಆಚಾರ್ಯ ಅವರು ನಾದವೈಭವ ಕಾರ್ಯಕ್ರಮ ಪ್ರಸ್ತುಪಡಿಸಿದರು‌. ಡ್ರಮ್ಸ್‌ಗಳ ಜತೆಗೆ ನೀರು ತುಂಬಿದ ಪ್ಲಾಸ್ಟಿಕ್ ಬಕೆಟ್, ಸೂಟ್‌ಕೇಸ್‌, ತಟ್ಟೆ, ಚಮಚ ಹೀಗೆ ಸಂಗೀತ ಹೊರಹೊಮ್ಮಿಸಲು ಯಾವುದಾದರೇನು ಎಂಬಂತೆ ಶಿವಮಣಿ ಪ್ರತಿಯೊಂದರಿಂದಲೂ ನಾದ ಹೊರಹೊಮ್ಮಿಸಿದರು. ಒಂದೂವರೆಗಂಟೆಗಳ ಮಾಂತ್ರಿಕ‌ ವಾದನದಲ್ಲಿ ಜನರು‌…

Read More

2026ರ ಜನವರಿ 18 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವ…. !

ಮಂಗಳೂರು: ಅಖಿಲ ಭಾರತ ಬಿಲ್ಲವರ ಯೂನಿಯನ್, ಬ್ರಹ್ಮಶ್ರೀ ನಾರಾಯಣ ಮಾರ್ಗದರ್ಶನದೊಂದಿಗೆ ಗುರುಗಳ ಆಶೀರ್ವಾದದೊಂದಿದೆ 1912 ರಲ್ಲಿ ಕುದ್ರೋಳಿಯಲ್ಲಿ ಸ್ಥಾಪನೆಯಾಗಿರುವ ಸಮಾಜದ ಅತ್ಯಂತ ಹಿರಿತನದ ಮತ್ತು ಮಾತೃ ಸಂಸ್ಥೆಯು ಕಳೆದ 113 ವರ್ಷಗಳಿಂದ ಅನೇಕ ಕಾರ್ಯಚಟುವಟಿಕೆಯನ್ನು ನಡೆಸುಕೊಂಡು ಬರುತ್ತಿದೆ . ಈಗಾಗಲೇ ಸಮಾಜಕ್ಕೆ ಶಕ್ತಿ ತುಂಬುವಂತಹ ಪ್ರಥಮ ಬಿಲ್ಲವ ಸಮ್ಮೇಳನ, ಪ್ರಥಮ ಬಿಲ್ಲವ ಮಹಿಳಾ ಸಮ್ಮೇಳನ, ಪ್ರಥಮ ಬಿಲ್ಲವ ಮಹಿಳಾ ಹಾಸ್ಟೆಲ್ ಗಳ ಮೂಲಕ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಸಂಘವು ಈ ಭಾರಿ ಪ್ರಪ್ರಥಮ ಜಾಗತಿಕ…

Read More
error: Content is protected !!