ಉಡುಪಿ: ಶಿವಮಣಿ ಮಾಂತ್ರಿಕ‌ ವಾದನಕ್ಕೆ ಮೈಮರೆತ ಸಾವಿರಾರು ಸಂಖ್ಯೆಯ ಜನರು..!

ಉಡುಪಿ: ಜಗತ್‌ಪ್ರಸಿದ್ಧ ಡ್ರಮ್ಸ್ ವಾದಕ ಶಿವಮಣಿ ಅವರ ಡ್ರಮ್‌ಗಳಿಂದ ಮೊಳಗಿದ ಝೇಂಕಾರಕ್ಕೆ ಉಡುಪಿಯ ಜನತೆ ಮನಸೋತರು‌.ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಶ್ರೀ ಪುತ್ತಿಗೆ ನೃಸಿಂಹ ಸಭಾಭವನವನದ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಡ್ರಮ್ಸ್ ಕಲಾವಿದ ಶಿವಮಣಿ ಮತ್ತು ಐರಾ ಆಚಾರ್ಯ ಅವರು ನಾದವೈಭವ ಕಾರ್ಯಕ್ರಮ ಪ್ರಸ್ತುಪಡಿಸಿದರು‌.

ಡ್ರಮ್ಸ್‌ಗಳ ಜತೆಗೆ ನೀರು ತುಂಬಿದ ಪ್ಲಾಸ್ಟಿಕ್ ಬಕೆಟ್, ಸೂಟ್‌ಕೇಸ್‌, ತಟ್ಟೆ, ಚಮಚ ಹೀಗೆ ಸಂಗೀತ ಹೊರಹೊಮ್ಮಿಸಲು ಯಾವುದಾದರೇನು ಎಂಬಂತೆ ಶಿವಮಣಿ ಪ್ರತಿಯೊಂದರಿಂದಲೂ ನಾದ ಹೊರಹೊಮ್ಮಿಸಿದರು. ಒಂದೂವರೆಗಂಟೆಗಳ ಮಾಂತ್ರಿಕ‌ ವಾದನದಲ್ಲಿ ಜನರು‌ ಮೈಮರೆತರು.

SHARE
Loading spinner

Leave a Reply

Your email address will not be published. Required fields are marked *

error: Content is protected !!