Avatar

Shramitha bejja

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಲೋಕಾಯುಕ್ತ ದಾಳಿ .

ಮಂಗಳೂರು ನಗರ ಹೊರಲವಯದಲ್ಲಿರುವ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕಿ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕಿ ಭಾರತಿ ಜಿ, ರವಿ ಪೀರು ಪವಾರ್ ಹಾಗೂ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯ್ಕ್ ಎಂ.ಎನ್. ಅವರು ಮಂಗಳೂರು ಮತ್ತು ಉಡುಪಿ ಲೋಕಾಯುಕ್ತ ಕಚೇರಿಯ ಸಿಬ್ಬಂದಿಯವರೊಂದಿಗೆ ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿ ಪ್ರಾಧಿಕಾರಕ್ಕೆ ಗೌರವಾನ್ವಿತ ಲೋಕಾಯುಕ್ತರಿಂದ ಸರ್ಚ್ ವಾರಂಟ್ ಪಡೆದು…

Read More

ಜಪಾನ್‌ಗೆ ಭಾರತದ ನೂತನ ರಾಯಭಾರಿಯಾಗಿ ಕಾಸರಗೋಡು ಮೂಲದ ನಗ್ಮಾ ಮುಹಮ್ಮದ್ ಮಲಿಕ್ ನೇಮಕ.

ಹೊಸದಿಲ್ಲಿ: ಭಾರತ ಸರ್ಕಾರವು ಪ್ರಸ್ತುತ ಪೋಲೆಂಡ್ ನಲ್ಲಿ ಭಾರತದ ನೂತನ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿರುವ 1991 ಬ್ಯಾಚ್ ನ ಹಿರಿಯ ಐಎಫ್ಎಸ್ ಅಧಿಕಾರಿ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ ನಗ್ಮಾ ಮುಹಮ್ಮದ್ ಮಲಿಕ್ ಅವರನ್ನು ಜಪಾನ್‌ ನಲ್ಲಿನ ಭಾರತದ ನೂತನ ರಾಯಭಾರಿಯಾಗಿ ನೇಮಿಸಿದೆ. ಕಾಸರಗೋಡು ಮೂಲದ ನಗ್ಮಾ ಮಲಿಕ್ ಅವರು ವಿದೇಶಾಂಗ ಸೇವೆಯಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ತಮ್ಮ ವೃತ್ತಿಜೀವನದಲ್ಲಿ ಅಪಾರ ರಾಜತಾಂತ್ರಿಕ ಅನುಭವವನ್ನು ಗಳಿಸಿದ್ದಾರೆ. ದೀಪಾ ಗೋಪಾಲನ್…

Read More

ಕೇರಳದಲ್ಲಿ ರಾಜಕೀಯ ಬದಲಾವಣೆ ಅನಿವಾರ್ಯ: ಎಂ.ಎಲ್. ಅಶ್ವಿನಿ

ಮಂಜೇಶ್ವರ: ಕೇರಳ ಎದುರಿಸುತ್ತಿರುವ ನಿರುದ್ಯೋಗ ಮತ್ತು ಅಭಿವೃದ್ಧಿ ಕುಂಠಿತವನ್ನು ಪರಿಹರಿಸಲು ರಾಜಕೀಯ ಬದಲಾವಣೆ ಅತ್ಯಗತ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಅವರು ಬಿಜೆಪಿ ಮಂಜೇಶ್ವರ ಪಂಚಾಯತ್ ಚುನಾವಣಾ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು . ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಅಡ್ವ. ಬಾಲಕೃಷ್ಣ ಶೆಟ್ಟಿ,ಕೆ.ಸತೀಶ್ ಚಂದ್ರ ಭಂಡಾರಿ, ರಾಜ್ಯ ಪರಿಷತ್ ಸದಸ್ಯ ಹರಿಶ್ಚಂದ್ರ ನಾಯ್ಕ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ಜಿಲ್ಲಾ ಸಮಿತಿ ಸದಸ್ಯ…

Read More

ಸಾಕಾರಗೊಂಡ ಚಿಣ್ಣರ ಬಹು ಕಾಲದ ನಿರೀಕ್ಷೆ : ಅಂಬಿತ್ತಾಡಿ ಹೈಟೆಕ್ ಅಂಗನವಾಡಿಗೆ ಶಂಕುಸ್ಥಾಪನೆ .

ಮಂಜೇಶ್ವರ : ಚಿಣ್ಣರ ಬಾಳಿನಲ್ಲಿ ಚೆಲ್ಲಾಟವನ್ನು ನಡೆಸುತ್ತಿರುವವರ ವಿರೋಧ ಮಧ್ಯೆಯೂ ಎದೆಗುಂದದೆ ಊರವರು ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಅಂಬಿತ್ತಾಡಿ ಜನತೆಯ ಬಹುಕಾಲದ ನಿರೀಕ್ಷೆಯೊಂದು ಗುರುವಾರದಂದು ಸಾಕಾರಗೊಂಡಿತು. ಕಾಸರಗೋಡು ಜಿಲ್ಲಾ ಪಂಚಾಯತ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಂದ್ರ ಸಂಖ್ಯೆ 11 ಅಂಬಿತ್ತಾಡಿ ಹೈಟೆಕ್‌ ಅಂಗನವಾಡಿಗೆ 40 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಿರುವ ಕಟ್ಟಡದ ಸಂಕುಸ್ಥಾಪನೆ ಬಹಳ ಅದ್ದೂರಿಯಾಗಿ ನೆರವೇರಿತು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ರವರ…

Read More

ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಖ್ಯಾತ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ ನಿಧನ .

ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಖ್ಯಾತ ಹಾಗೂ ಹಿರಿಯ ಭಾಗವತ, ರಸ ರಾಗ ಚಕ್ರವರ್ತಿ ಬಿರುದಾಂಕಿತ ದಿನೇಶ್ ಅಮ್ಮಣ್ಣಾಯ( 65) ಅವರು ಇಂದು ನಿಧನರಾಗಿದ್ದಾರೆ. ದಾಮೋದರ ಮಂಡೆಚ್ಚರ ಶಿಷ್ಯರಾಗಿ ಪುತ್ತೂರು ಮೇಳದ ಮೂಲಕ ಕಲಾ ಜೀವನ ಆರಂಭಿಸಿದರು. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ಕಲಾ ಸೇವೆ ಸಲ್ಲಿಸಿದ್ದರು. ತೆಂಕುತಿಟ್ಟಿನ ಪ್ರಸಿದ್ದ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ಭಾಗವತರಾಗಿದ್ದ ಅವರು ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರದ್ದು. ತುಳು ಪ್ರಸಂಗಗಳಿಗೆ ತನ್ನ ಕಂಠ ಮಾಧುರ್ಯದಿಂದ…

Read More

ಪೇಸ್ ಜ್ಞಾನ ನಗರ ಕೊಣಾಜೆಯಲ್ಲಿ ರಾಷ್ಟ್ರೀಯ ಮಟ್ಟದ ಉತ್ಸವ ಮತ್ತು ಆಹಾರ ಮೇಳ ಕ್ಯಾಂಪಸ್ ಕ್ರೋಮಾ 2025.

ಮಂಗಳೂರು: ಪೇಸ್ ಗ್ರೂಪ್‌ನ ಬೆಳ್ಳಿ, ಹಬ್ಬ ಪೇಸ್ ಸಿಲ್ಕ್ಯೋರಾ 2025 ರ ಇದರ ಅಂಗವಾಗಿ, ಪಿ.ಎ. ಎಜುಕೇಷನಲ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿ ಎ ಪ್ರಥಮ ದರ್ಜಿ ಕಾಲೇಜು ಕ್ಯಾಂಪಸ್ ಕ್ರೋಮಾ 2025 ಎಂಬ ರಾಷ್ಟ್ರೀಯ ಮಟ್ಟದ ಉತ್ಸವ ಮತ್ತು ಆಹಾರ ಮೇಳವನ್ನು ಅಕ್ಟೋಬರ್ 30ರಂದು ಮಂಗಳೂರು ವಿ ವಿ ಸಮೀಪವಿರುವ ಪೇಸ್ ಜ್ಞಾನ ನಗರ ಕೊಣಾಜೆಯಲ್ಲಿ ನಡೆಯಲಿದೆ ಎಂದು ಪಿ ಎ ಪ್ರಥಮ ದರ್ಜಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸರ್ಫ್ರಾಜ್ ಜೆ ಹಾಸಿಂ ತಿಳಿಸಿದರು ….

Read More

ವರ್ಕಾಡಿ ವೋಟ್ ಡಿಲೀಟ್ : ಬಿಜೆಪಿ ವಿರುದ್ಧ ಮತದಾರರ ಆಕ್ರೋಶ.

ಮಂಜೇಶ್ವರ : ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮತದಾರ ಪಟ್ಟಿಯಿಂದ ಮತದಾರರನ್ನು ಡಿಲೀಟ್ ಮಾಡುವ ಬಿಜೆಪಿ ಷಡ್ಯಂತರದ ವಿರುದ್ಧ ನಾಗರಿಕರ ಆಕ್ರೋಶ ಬುಗಿಲೆದ್ದಿದೆ. ವರ್ಕಾಡಿ ಪಂಚಾಯತಿನ ವಿವಿಧ ವಾರ್ಡುಗಳಲ್ಲಿ ಸುಮಾರು ರೂ.1000ಕ್ಕೂ ಮಿಕ್ಕಿದ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕುವಂತೆ ಬಿಜೆಪಿ ಮುಖಂಡರ ಅರ್ಜಿಗೆ ಬುಧವಾರದಂದು ವರ್ಕಾಡಿ ಪಂಚಾಯಿತಿನಲ್ಲಿ ಮತದಾರರ ನೇರ ಸಂದರ್ಶನ ನಡೆಯಿತು. ಈ ಸಂದರ್ಭದಲ್ಲಿ ತಮ್ಮ ಹೆಸರನ್ನು ಮತದಾರ ಪಟ್ಟಿಯಿಂದ ಡಿಲೀಟ್ ಮಾಡಲು ಮನವಿ ಕೊಟ್ಟ ಬಿಜೆಪಿ ಮುಖಂಡನ ವಿರುದ್ಧ ಮತದಾರರು ತರಾಟೆಗೆ ತೆಗೆದುಕೊಂಡಿದ್ದು, ಉದ್ವಿಗ್ನ…

Read More

ಮರ್ಹೂಮ್ ಶೈಖುನಾ ಸುರಿಬೈಲ್ ಉಸ್ತಾದ್ 24 ನೇ ಆಂಡ್ ನೇರ್ಚೆ ಮತ್ತು ಅಶ್-ಅರಿ ಸನದುದಾನ ಮಹಾ ಸಮ್ಮೇಳನ 2025.

ದಕ್ಷಿಣ ಕರ್ನಾಟಕದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ದಾರುಲ್ ಅಶ್-ಅರಿಯ ಎಜುಕೇಷನಲ್ ಸೆಂಟರ್ ಸುರಿಬೈಲ್, ಬಂಟ್ವಾಳ ಇದರ ಶಿಲ್ಪಿ ಮರ್ಹೂಮ್ ಶೈಖುನಾ ಸುರಿಬೈಲ್ ಉಸ್ತಾದ್ 24 ನೇ ಆಂಡ್ ನೇರ್ಚೆ ಮತ್ತು ಅಶ್-ಅರಿ ಸನದುದಾನ ಮಹಾ ಸಮ್ಮೇಳನ 2025 ಕಾರ್ಯಕ್ರಮವು ಅಕ್ಟೋಬರ್ 18,19,20 ರಂದು ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಕೆ ಕೆ ಮೆಹ್ಯುದ್ದೀನ್ ಸಾಕಾಫೀ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಅಕ್ಟೋಬರ್ 18 ರಂದು ಬೆಳಗ್ಗೆ…

Read More

ಅಕ್ಟೋಬರ್ 19 ರಂದು ಶ್ರೀ ಬಾರ್ಕೂರು ಮಹಾ ಸಂಸ್ಥಾನ ಭಾರ್ಗವ ಬೀಡು ಬಂಟ ಸಂಸ್ಕೃತಿ ಪರಂಪರೆ ಅನಾವರಣ – ದಕ್ಷಿಣ ಕನ್ನಡ ಜಿಲ್ಲಾ ಮಹಾಮಂಡಲದ ಪದಗ್ರಹಣ ಸಮಾರಂಭ.

ಮಂಗಳೂರು:ಶ್ರೀ ಬಾರ್ಕೂರು ಮಹಾಸಂಸ್ಥಾನ ಭಾರ್ಗವ ಬೀಡು ಶ್ರೀ ಸಂಸ್ಥಾನದ ದಶಮ ಸಂಭ್ರಮದ ಸಂಕಲ್ಪ “ಬಂಟ ಸಂಸ್ಕೃತಿ ಪರಂಪರೆ ಅನಾವರಣ” ದಕ್ಷಿಣ ಕನ್ನಡ ಜಿಲ್ಲಾ ಮಹಾ ಮಂಡಲದ ಪದಗ್ರಹಣ ಸಮಾರಂಭವು ಅಕ್ಟೋಬರ್ 19 ಭಾನುವಾರ ಸಂಜೆ 3 ಗಂಟೆಗೆ ಅಡ್ಯಾರ್ ಗಾರ್ಡನ್ ನಲ್ಲಿರುವ ವಿ.ಕೆ. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಮಹಾಮಂಡಲದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದರು . ಅವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಶ್ರೀ ಬಾರ್ಕೂರು ಮಹಾ…

Read More

ಪಿಲಿಕುಳ ಅರ್ಬನ್ ಇಕೋ ಪಾರ್ಕ್ ಯೋಜನೆಗೆ ಸಂಬಂಧಿಸಿ ಬಾಕಿ ಅನುದಾನವನ್ನು ಬಿಡುಗಡೆ ಮಾಡಲು ಶಾಸಕ ಮಂಜುನಾಥ ಭಂಡಾರಿ ಮನವಿ

ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ (ಹಿಂದಿನ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ)ದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುದಾನದಿಂದ ಸ್ಥಾಪನೆಯಾದ ಅರ್ಬನ್ ಇಕೋ ಪಾರ್ಕ್ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಅನುದಾನವನ್ನು ಬಿಡುಗಡೆ ಮಾಡುವ ಕುರಿತು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿಯವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಅವರಿಗೆ ಮನವಿ ಮಾಡಿದರು.ಮಂಗಳೂರಿನ ಪಿಲಿಕುಳದಲ್ಲಿ 356 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ಸಸ್ಯಸಂಪತ್ತು ಹಾಗೂ ವನ್ಯಜೀವಿ ಸಂರಕ್ಷಣೆ, ಕಲೆ…

Read More
error: Content is protected !!